15 ದಿನಕ್ಕೊಮ್ಮೆ ವಿಶೇಷ ಡ್ರೈವ್ ಮೂಲಕ ಕಲ್ಲು ಕ್ವಾರಿ ಪರಿಶೀಲನೆ

15 ದಿನಕ್ಕೊಮ್ಮೆ ವಿಶೇಷ ಡ್ರೈವ್ ಮೂಲಕ ಕಲ್ಲು ಕ್ವಾರಿ ಪರಿಶೀಲನೆ - Janathavaniದಾವಣಗೆರೆ, ಫೆ.25- ಕಲ್ಲು ಕ್ವಾರಿಗಳಲ್ಲಿ ನಿಯಮ ಉಲ್ಲಂಘಿಸಿ ಸ್ಪೋಟಕ ಬಳಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇನ್ನು ಮುಂದೆ 15 ದಿನಕ್ಕೊಮ್ಮೆ ವಿಶೇಷ ಡ್ರೈವ್ ಮೂಲಕ ಪೊಲೀಸ್ ಹಾಗೂ ಗಣಿ ಮತ್ತು ಭೂ ವಿಜಾನ ಇಲಾಖೆ ಜಂಟಿಯಾಗಿ ಪರಿಶೀಲನೆ ಕೈಗೊಳ್ಳಲಿವೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಲೈಸೆನ್ಸ್ ಪಡೆದಿರುವ ಗಣಿಗಾರಿಕೆ ಯಾವುದಿದೆ. ಅಲ್ಲಿ ನಿಗದಿಗಿಂತಲೂ ಹೆಚ್ಚು ಸ್ಪೋಟಕಗಳ ಬಳಕೆಯಾಗುತ್ತಿದೆ ಎಂದು ವಿಶೇಷ ಡ್ರೈವ್ ಮೂಲಕ ಮೂರು ತಿಂಗಳಿಗೊಮ್ಮೆ ಕಲ್ಲು ಕ್ವಾರಿಗಳ ಪರಿಶೀಲನೆ ನಡೆಸಲಾಗುತ್ತಿತ್ತು. ಇನ್ನು ಅನಧಿಕೃತ ಕ್ವಾರಿಗಳಲ್ಲಿ ಕಾನೂನು ಬಾಹಿರವಾಗಿಯೇ ಸ್ಪೋಟಕ ಬಳಸುತ್ತಿರುವುದೂ ಕಂಡು ಬಂದಿದೆ. ಹಾಗಾಗಿ 15 ದಿನಕ್ಕೊಮ್ಮೆ  ಪರಿಶೀಲಿಸಲಾಗುವುದು ಎಂದು ಹೇಳಿದರು. 

ಈಗಾಗಲೇ ಗಣಿ ಮತ್ತು ಭೂ ವಿಜಾನ ಸಚಿವರ ಜೊತೆಗೆ ಚರ್ಚಿಸಿದ್ದು, ಪೊಲೀಸ್ ಮತ್ತು ಗಣಿ ಇಲಾಖೆ ಜಂಟಿ ಕಾರ್ಯಾಚರಣೆ ಕೈಗೊಂಡು ಆಗ ಬಹುದಾದ ಅನಾಹುತ ತಪ್ಪಿಸಲು ಕ್ರಮ ಕೈಗೊಳ್ಳಲಿವೆ ಎಂದು ವಿವರಿಸಿದರು.

ಬೆಂಗಳೂರಿನ ಡಿಜೆ ಹಳ್ಳಿ ಮತ್ತು ಕೆಜೆ ಹಳ್ಳಿಯ ಗಲಭೆಗೆ ಸಂಬಂಧಿಸಿದಂತೆ 2 ಕೇಸ್‍ಗಳನ್ನು ರಾಷ್ಟ್ರೀಯ ತನಿಖಾ ದಳಕ್ಕೆ ನೀಡಿದ್ದು, ಗಂಭೀರವಾದ ಚಾರ್ಜ್ ಶೀಟ್ ಎನ್‍ಐಎನವರು ಸಲ್ಲಿಸಿದ್ದಾರೆ. ಸದನದ ಒಳಗೆ, ಹೊರಗೆ ನಾವು ಹೇಳಿದ್ದನ್ನೇ ಅದೇ ದಾರಿಯಲ್ಲೇ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಸಾಮಾಜಿಕ ಜಾಲತಾಣ ಬಳಕೆ ಬಗ್ಗೆ ಚಾರ್ಜ್ ಶೀಟ್‍ನಲ್ಲೇ ಉಲ್ಲೇಖವಾಗಿದೆ. ಈಗಾಗಲೇ ರಾಷ್ಟ್ರೀಯ ತನಿಖಾ ದಳದವರು ನ್ಯಾಯಾಲಯಕ್ಕೆ ದೋಷಾ ರೋಪಣೆ ಪಟ್ಟಿಯನ್ನು ಸಲ್ಲಿಸಿದ್ದಾರೆ. ನ್ಯಾಯಾಲಯದಲ್ಲಿ ಈ ಬಗ್ಗೆ ಎಲ್ಲವೂ ತೀರ್ಮಾನವಾಗಬೇಕಿದೆ ಎಂದರು.

error: Content is protected !!