ಸಮಾನತೆಯ ನೆಲೆಯಲ್ಲಿ ಸದೃಢ ಭಾರತದ ನಿರ್ಮಾಣ ಸಾಧ್ಯ

ಸಮಾನತೆಯ ನೆಲೆಯಲ್ಲಿ ಸದೃಢ ಭಾರತದ ನಿರ್ಮಾಣ ಸಾಧ್ಯ

ಗಂಗಾ ಪ್ಯಾರಾ ಮೆಡಿಕಲ್ ಕಾಲೇಜಿನ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ಅನಿಸಿಕೆ

ಚನ್ನಗಿರಿ, ಫೆ. 27- ಯುವ ಸಮುದಾಯ ದೇಶದ ಸಮಗ್ರತೆ, ಭಾವೈಕ್ಯತೆಗಳನ್ನು ಉಳಿಸಿಕೊಂಡು ಎಲ್ಲಾ ಜಾತಿ,ಧರ್ಮಗಳ ಜನರೆಲ್ಲ ಒಂದೇ ಎನ್ನುವ ಸಮಾನತೆಯ ತತ್ವದ ನೆಲೆಯಲ್ಲಿ ಸಮಾಜವನ್ನು ಮುನ್ನಡೆಸಬೇಕು. ಆಗ ಮಾತ್ರ ಸದೃಢ ಹಾಗೂ ಸಮರ್ಥ ಭಾರತ ನಿರ್ಮಾಣವಾಗಲು ಸಾಧ್ಯವೆಂದು ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಎಲ್.ಜಿ.ಮಧುಕುಮಾರ್ ತಿಳಿಸಿದರು.

ಅವರು ಪಟ್ಟಣದ  ಸರ್ಕಾರಿ ನೌಕರರ ಭವನದಲ್ಲಿ  ಹಮ್ಮಿಕೊಂಡಿದ್ದ ಗಂಗಾ ಪ್ಯಾರಾ ಮೆಡಿಕಲ್ ಕಾಲೇಜಿನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಭವಿಷ್ಯದ ಭಾರತ ಹೇಗಿರಬೇಕು ಎನ್ನುವುದು ಈಗಿನ ಯುವ ಸಮುದಾಯ ಮತ್ತು ವಿದ್ಯಾರ್ಥಿ ಸಮೂಹ ಯಾವ ರೀತಿಯ ಹೆಜ್ಜೆಯಿಡುತ್ತಿದೆ ಎನ್ನುವುದನ್ನು ಅವಲಂಬಿಸಿದೆ.

ನಮ್ಮ ದೇಶದಲ್ಲಿ  ಸ್ವಾತಂತ್ರ್ಯದ ನಂತರ ಕೆಲ ಸಾಮಾಜಿಕ ಬದಲಾವಣೆಗಳು ಆಗಿದ್ದರೆ, ಅದಕ್ಕೆ ವಿದ್ಯಾರ್ಥಿಗಳು ಮತ್ತು ಯುವಶಕ್ತಿಯ ಚಳವಳಿಗಳು ಮುಖ್ಯ ಕಾರಣವಾಗಿವೆ.

ರಾಷ್ಟ್ರದಲ್ಲೀಗ ಅಹಿತಕರ ಘಟನೆಗಳಿಲ್ಲದ, ಮನುಷ್ಯ -ಮನುಷ್ಯರ ನಡುವೆ ಘರ್ಷಣೆಗಳು ನಡೆಯದಂತೆ ನೋಡಿಕೊಳ್ಳುವ ಹಾಗೂ ಸಾಂವಿಧಾನಿಕ ಮೌಲ್ಯಗಳನ್ನು ಕಾಪಾಡುವ  ಗುರುತರವಾದ ಜವಾಬ್ದಾರಿ ಯುವ ಸಮುದಾಯದ ಮೇಲಿದೆ ಎಂದರು. 

ಪ್ರಾಂಶುಪಾಲ ಎಂ.ಎಸ್.ಬಸವನಗೌಡ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪತ್ರಕರ್ತ ಬಾರಾ ಮಹೇಶ್, ಸರ್ಕಾರಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಎ.ಎಂ.ಶ್ರೀಧರ್, ಪುರಸಭೆಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ ಮಾತನಾಡಿದರು. ಉಪನ್ಯಾಸಕರಾದ ನಾಹಿದ ಅಂಜುಂ, ಅಭಿಲಾಷ, ಅರ್ಪಿತ, ಪೂಜಾ, ರಂಜಿತ, ಭರತ್   ಮತ್ತಿತರರು ಇದ್ದರು.

error: Content is protected !!