ಯೋಗಿಕ ಕೃಷಿಯಿಂದ ಸಮೃದ್ಧ ಭಾರತ

ಯೋಗಿಕ ಕೃಷಿಯಿಂದ ಸಮೃದ್ಧ ಭಾರತ

ಬ್ರಹ್ಮಾಕುಮಾರಿ ಗ್ರಾಮ ವಿಕಾಸ ವಿಭಾಗದ ಅಧ್ಯಕ್ಷೆ ಸರಳಾಜಿ

ದಾವಣಗೆರೆ, ಫೆ. 27 – ಋಷಿ ಯಂತಹ ಪವಿತ್ರ ವಿಚಾರಧಾರೆಯ ಕೃಷಿಕರಿಂದಾಗಿ ಪುರಾತನ ಭಾರತ ಸಮೃದ್ಧ ಹಾಗೂ ಸಂಪದ್ಭರಿತವಾಗಿತ್ತು. ಮತ್ತೆ ಅಂತಹ ಸಮೃದ್ಧ ದೇಶ ನಿರ್ಮಾಣಕ್ಕಾಗಿ ‘ಶಾಶ್ವತ ಯೋಗಿಕ ಕೃಷಿ’ಯ ಅಗತ್ಯವಿದೆ ಎಂದು ಅಬು ಪರ್ವತದ ಬ್ರಹ್ಮಾಕುಮಾರಿ ಸಂಸ್ಥೆಯ ಗ್ರಾಮ ವಿಕಾಸ ವಿಭಾಗದ ಅಧ್ಯಕ್ಷ ರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಸರಳಾಜಿ ಅಭಿಪ್ರಾಯ ಪಟ್ಟರು.

ನಗರದ ದೇವರಾಜ ಅರಸು ಬಡಾ ವಣೆಯಲ್ಲಿರುವ ಶಿವ ಧ್ಯಾನ ಮಂದಿರದಲ್ಲಿ ಇಂದು ಸಂಜೆ ಆಯೋಜಿಸಲಾಗಿದ್ದ §ಅಧ್ಯಾತ್ಮದಿಂದ ಅನ್ನದಾತರ ಸಬಲೀಕರಣ¬ ಕಾರ್ಯಕ್ರಮವನ್ನು ಉದ್ಘಾಟಿಸಿ, ಅವರು ಮಾತನಾಡಿದರು.

ಋಷಿಯಲ್ಲಿ ವಿಚಾರದ ಪವಿತ್ರತೆ, ಶುದ್ಧತೆ, ಭೂಮಿ ಬಗ್ಗೆ ಪ್ರೀತಿ ಇರುತ್ತದೆ. ಆಗಿನ ಭಾರತದಲ್ಲಿ ಕೃಷಿಕರು ಋಷಿಗಳಂತೆ ಭೂಮಿಯ ಮೇಲಿನ ಪ್ರೀತಿಯಿಂದ ದುಡಿ ಯುತ್ತಿದ್ದರು, ಭೂ ಸೇವೆಯಿಂದ ಭೂಮಿ ಯ ಶಕ್ತಿ ಹೆಚ್ಚಿಸುತ್ತಿದ್ದರು. ಇದರಿಂದ ಶುದ್ಧ ಹಾಗೂ ಸಾತ್ವಿಕ ಅನ್ನ ಉತ್ಪತ್ತಿ ಆಗುತ್ತಿತ್ತು. ಉತ್ತಮ ಕೃಷಿಯಿಂದ ಉತ್ತಮ ಸಮಾಜವೂ ರೂಪುಗೊಂಡಿತ್ತು ಎಂದರು.

ಆದರೆ, ಈಗ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಬಳಕೆಯಿಂದ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿ ಯಾಗಿದ್ದೇವೆ, ಹಸಿರು ಕ್ರಾಂತಿಯಾಗಿದೆ. ಕೃಷಿ ಆದಾಯವೂ ಹೆಚ್ಚಿದೆ. ಆದರೆ, ಬದಲಾದ ಮಾನಸಿಕತೆ ಹಾಗೂ ಪರಿಸ್ಥಿತಿಯಿಂದಾಗಿ ರೈತರು ಕಷ್ಟದಲ್ಲಿದ್ದಾರೆ. ಭೂಮಿ ಫಲವತ್ತತೆ ಕಡಿಮೆಯಾಗಿದೆ ಎಂದವರು ವಿಷಾದಿಸಿದರು.

ಮತ್ತೆ ಪರಿಸ್ಥಿತಿ ಬದಲಾಗಬೇಕಿದೆ. ಸಾವಯವ ಗೊಬ್ಬರಗಳ ಬಳಕೆ ಹಾಗೂ ಅಧ್ಯಾತ್ಮಿಕತೆಯಿಂದ ರೈತರು ಮತ್ತು ಗ್ರಾಮೀಣ ಭಾಗದ ಅಭಿವೃದ್ಧಿಯಾಗಬೇಕಿದೆ. ಅಧ್ಯಾ ತ್ಮಿಕತೆಯಿಂದ ವೈಚಾರಿಕ ಕ್ರಾಂತಿ ಹಾಗೂ ಗ್ರಾಮ ವಿಕಾಸ ಆಗಬೇಕಿದೆ ಎಂದವರು ಹೇಳಿದರು.

ಸರ್ಕಾರಗಳು ಭೌತಿಕ ಸೌಲಭ್ಯಗಳಿಂದ ಗ್ರಾಮ ಸಮೃದ್ಧಿಯ ಕಡೆ ಗಮನ ಹರಿಸಿವೆ. ಇದರ ಜೊತೆಗೆ ಅಧ್ಯಾತ್ಮಿಕತೆಗೂ ಆದ್ಯತೆ ನೀಡಬೇಕಿದೆ. ಇದರಿಂದಾಗಿ ಗ್ರಾಮಗಳಲ್ಲಿ ಹಾಗೂ ಕುಟುಂಬಗಳಲ್ಲಿ ಕಂಡು ಬರುತ್ತಿರುವ ಸಂಘರ್ಷಗಳೂ ನಿವಾರಣೆಯಾಗಲಿವೆ ಎಂದು ಸರಳಾಜಿ ಹೇಳಿದರು.

ಈ ಹಿನ್ನೆಲೆಯಲ್ಲಿ ಬ್ರಹ್ಮಾಕುಮಾರಿ ಸಂಸ್ಥೆಯು ಗ್ರಾಮ ವಿಕಾಸ ವಿಭಾಗದ ವತಿಯಿಂದ ಯೋಗಿಕ ಕೃಷಿ ತರಬೇತಿ ಯೋಜನೆಯನ್ನು ರೂಪಿಸಿದೆ. ಪ್ರತಿ ಗ್ರಾಮದಲ್ಲಿ ಯೋಗಿಕ ಕೃಷಿ ತರಬೇತಿಯ ಉದ್ದೇಶವಿದೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಬ್ರಹ್ಮಾಕುಮಾರಿ ಸಂಸ್ಥೆಯ ಗ್ರಾಮ ವಿಕಾಸ ವಿಭಾಗದ ರಾಷ್ಟ್ರೀಯ ಸಂಯೋಜಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ  ಸುನಂದಾಜಿ, ಕೃಷಿ ಅಭಿವೃದ್ಧಿಯ ಜೊತೆಗೆ ಮನೆಗಳಲ್ಲಿ ಸುಖ – ಶಾಂತಿ ಇರುವಂತೆ ಮಾಡಲು ಶಾಶ್ವತ ಯೋಗಿಕ ಕೃಷಿಯಿಂದ ಸಾಧ್ಯ. ವ್ಯಸನ, ಚಿಂತೆ, ಕ್ರೋಧ ಇತ್ಯಾದಿಗಳಿಂದ ಮುಕ್ತವಾಗಿ ನಿರಾಳ ಮನಸ್ಸು ಹೊಂದುವುದೇ ಈ ಯೋಗಿಕ ಕೃಷಿಯ ಉದ್ದೇಶ ಎಂದು ಹೇಳಿದರು.

ದೇಶೀಯ ಗೊಬ್ಬರ ಬಳಕೆಯಿಂದ ಉತ್ತಮ ಇಳುವರಿ ಪಡೆಯಲು ಸಾಧ್ಯತೆ. ರಾಸಾಯನಿಕ ರಹಿತ ಕೃಷಿಯಿಂದ ಸಾತ್ವಿಕತೆ ಹಾಗೂ ಪೌಷ್ಠಿಕತೆ ಎರಡೂ ದೊರೆಯುತ್ತದೆ ಎಂದರು.

ಬ್ರಹ್ಮಾಕುಮಾರಿ ಸಂಸ್ಥೆಯ ಗ್ರಾಮ ವಿಕಾಸ ವಿಭಾಗದ ಉಪಾಧ್ಯಕ್ಷ ರಾಜಯೋಗಿ ಬ್ರಹ್ಮಾಕುಮಾರ ರಾಜು ಅವರು ವಿಶೇಷ ಉಪನ್ಯಾಸ ನೀಡಿದರು.

ಈಶ್ವರೀಯ ವಿಶ್ವವಿದ್ಯಾಯದ ಹಳಿಯಾಳ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಪದ್ಮಾಜಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಈಶ್ವರೀಯ ವಿಶ್ವವಿದ್ಯಾಯದ  ಸ್ಥಳೀಯ ಶಾಖೆ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಕಾರ್ಯಕ್ರಮ ನಿರೂಪಿಸಿದರು.

ಕೃಷಿ ಇಲಾಖೆ ಉಪ ನಿರ್ದೇಶಕ ಎಸ್. ಅಶೋಕ್, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಟಿ.ಎನ್. ದೇವರಾಜ್, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವ ವಿ. ಪಟೇಲ್, ರಾಜ್ಯ ರೈತ ಸಂಘದ ಉಪಾಧ್ಯಕ್ಷ ಅರುಣಕುಮಾರ್ ಕುರುಡಿ ಅವರುಗಳು ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದರು. ಈಶ್ವರೀಯ ವಿಶ್ವವಿದ್ಯಾಯದ  ಸ್ಥಳೀಯ ಶಾಖೆ ಸಂಚಾಲಕರಾದ

ಈಶ್ವರೀಯ ವಿಶ್ವವಿದ್ಯಾಯದ  ವಿದ್ಯಾನಗರದ ಶಾಖೆ ಸಂಚಾಲಕರಾದ ಬ್ರಹ್ಮಾಕುಮಾರಿ ಗೀತಾ, ಹೊನಾಳ್ಳಿ ಶಾಖೆ ಸಂಚಾಲಕರಾದ ಬ್ರಹ್ಮಾಕುಮಾರಿ  ಜ್ಯೋತಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಉಪನ್ಯಾಸಕಾರದ ಬಿ.ಕೆ. ಉಮಾ ಸ್ವಾಗತಿಸಿದರು. ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಇ.ಎಂ. ಮಂಜುನಾಥ ವಂದಿಸಿದರು.

error: Content is protected !!