ಪರಂಜ್ಯೋತಿ ಜ್ಯೋತ್ಸ್ನಗಳಾದ ಅಪ್ಪಂದಿರುಗಳಿಗೆ

ಭೂಮಿಯಂತೆಯೇ ಅದರ ಮೇಲಣ ಜೀವ ಕೋಟಿಯ ಬದುಕು ಸಹ ಸದಾ ಚಾಲನೆ ಯಲ್ಲಿರುತ್ತದೆ ಎಂಬುದು ಸತ್ಯ. ಹರಿಯುವ ನದಿಯಲ್ಲಿ ಅದೇ ನೀರಿನಲ್ಲಿ ಮತ್ತೊಮ್ಮೆ ಕಾಲಿ ಡಲು ಸಾಧ್ಯವಿಲ್ಲ. ನಾವು ಮೊದಲು ಕಾಲಿಟ್ಟ ನೀರು ಆ ಕ್ಷಣಕ್ಕೆ ಮುಂದೆ ಹರಿದಿರುತ್ತದೆ. ಹಾಗೆ ಚಲಿಸುವುದೇ ಸೃಷ್ಠಿಯ ನಿಯಮ. ಅದು ನಿಲುವುದೆಂದರೆ, ಪ್ರಳಯದ ಸಂಕೇತ. ಆದರೆ ಆ ಪ್ರಳಯವು ಕೂಡಾ ಆಗುವಿಕೆಯ ನಿರಂತ ರತೆಯೇ ಆಗಿರುತ್ತದೆ ಎಂಬುದನ್ನು ಮರೆಯ ಬಾರದು. ಆಗುವಿಕೆಯ ನಿರಂತರತೆಯಲ್ಲಿ ತಂದೆ ಕಂಡುಂಡ ಅನುಭವದ ಕ್ಷಣಗಳನ್ನು ಅನುಸರಿಸಿದರೆ, ಅದೇ ಒಂದು ಭವ್ಯ ಜೀವನದ ಕಲಾಕೃತಿ. 

ಈ ಕಲಾಕೃತಿ ಎಂದರೆ ಗತಿಸಿದ ಕ್ಷಣಗಳಿಗೆ ಅಯ್ಯನು ಹಾಕಿದ ಚೌಕಟ್ಟು. ಭಾರ ತೀಯ ಕುಟುಂಬದ ಇತಿಹಾಸದ ಉದ್ದಕ್ಕೂ ವೈಚಾರಿಕತೆ ಮತ್ತು ನಡತೆಗಳಲ್ಲಿ ಮನೆಯ ಯಜಮಾನ ಅಂತರವನ್ನು ನಿರ್ಮಿಸಿಕೊಂಡು, ಆಂತರಿಕ ರಚನೆಗಳನ್ನು (Deep structure) ದೃಢಗೊಳಿಸಲು ಪ್ರಮುಖನಾಗುತ್ತಾನೆ. ಸಾಮಾಜಿಕ, ಶುದ್ಧ-ಅಶುದ್ಧಗಳೆಂಬ (Convergence of the twin) ದ್ವಂದ್ವ ನಿಯಮಗಳ ಅರಿವನ್ನು ತೋರುತ್ತಾನೆ. ಪ್ರ-ಸಾಮಾಜಿಕ ಮೌಲ್ಯಗಳನ್ನು ಕಾಪಾಡಿಕೊಂಡು (Keeper of con-society values), ಕ್ರಿಯೆಗಳಿಂದ ಒಂದುಗೂಡಿಸಿ ವಿಶಿಷ್ಟವಾದ ಹೊಸತನಗಳಿಂದ ಕೂಡಿದ ಸಂಸ್ಕೃತಿಯನ್ನು ಬಿತ್ತುತ್ತಾನೆ. ಕುಟುಂಬದಲ್ಲಿ ಸಮಾನತೆಯ ತಿರುಳನ್ನು ಬೋಧಿಸುತ್ತಾ, ವ್ಯಕ್ತಿಯ ಬದುಕಿನ ನೆಲೆಯಲ್ಲಿ ಪ್ರತಿಯೊಬ್ಬರು ಮೇಲು-ಕೀಳು ಭಾವನೆಗಳನ್ನು ಮತ್ತು ಅವುಗಳಿಂದ ಉದ್ಭವಿಸಿದ ಕೆಟ್ಟ ಆಚರಣೆಗಳನ್ನು ಬದಿಗೊತ್ತು ವುದರ ಮೂಲಕ ಶುದ್ಧ ತತ್ವವನ್ನು ತಿಳಿಸುತ್ತಾನೆ. ಬಾಳನ್ನೇ ಒಂದು ಪುರಾಣ (Myth) ವನ್ನಾಗಿ, ಮಹಾಕಾವ್ಯ (Epic) ವನ್ನಾಗಿ, ರೂಪಕಾಕೃತಿ (Morphology) ಯನ್ನಾಗಿ ಅರ್ಥೈಸುವಲ್ಲಿ ತಂದೆಯ ಸ್ಥಾನ ಬಹು ಕ್ರಿಯಾ ಪೂರ್ಣವಾಗಿರುತ್ತದೆ ಎನ್ನುವುದನ್ನು ಮಂಡಿಸುವಲ್ಲಿ ಸಫಲನಾಗುತ್ತಾನೆ. 

ಇಂದು ನಮ್ಮ ಕುಟುಂಬಗಳಿಗೆ ಮೌಲ್ಯ ಕ್ಕಿಂತಲೂ ಸಂಪತ್ತೇ ಮುಖ್ಯವಾಗಿರುತ್ತದೆ; ಸಜ್ಜನಿಕೆಗಿಂತಲೂ ಸೌಂದರ್ಯವೇ ಪ್ರಮುಖವಾಗುತ್ತದೆ; ದಿಕ್ಕಿಗಿಂತಲೂ ವೇಗವೇ ಶ್ರೇಷ್ಠವಾಗುತ್ತದೆ; ಮನುಷ್ಯನಿಗಿಂತಲೂ ಯಂತ್ರಗಳೇ ಸ್ಥಳಾಂಕೃತವಾಗುತ್ತಿವೆ. ಇವೆಲ್ಲವುಗಳ ಮಧ್ಯದಲ್ಲಿ ತಂದೆ ಕುಟುಂಬದವರನ್ನು ಸಮೀಪದಲ್ಲಿರಿಸಿ (Juxtaposition), ಪರಸ್ಪರರು ಸೇರಿಕೊಳ್ಳುವಂತೆ ಮಾಡಿ (Interpenetration), ಏಕಾತ್ಮತೆ (Harmony) ಯನ್ನು ಉಂಟಾಗಿಸಿ, ಮಾಂತ್ರಿಕ ಶಕ್ತಿ ಯಾಗಿ (Incantatory) ಸ್ಥಿರವಾಗುತ್ತಾನೆ. 

ಪಿತೃವಿನ ವಿಚಾರ ಪದ ಬದಲಾವಣೆಗಿಂತ ಭದ್ರತೆ ಮಿಗಿಲಾಗಿದೆ ಎಂಬುದು ಸಂಪ್ರದಾ ಯಸ್ಥರ ನಂಬಿಕೆ. ವರ್ತಮಾನದ ಪೀಳಿಗೆಗೆ ಈ ನಂಬಿಕೆಯು ದುರ್ಬಲವಾದುದು. ನಿರಂತರ ಪ್ರಯೋಗಶೀಲ ತೆಯ ಈ ಸಮಾಜದಲ್ಲಿ ವಸ್ತುಸ್ಥಿತಿಗಿಂತ ಆಗಬಹುದಾದ, ರೂಪಿತಗೊಳ್ಳಬಹುದಾದ ಮತ್ತು ಚಲನಶೀಲ ಸ್ಥಿತ್ಯಂತರ ‘ಈ’ ಬದುಕಿನಲ್ಲಿ ಒಂದಾಗಿದೆ ಎಂಬ ಹಠಮಾರಿತನ ಬಲವಾಗಿದೆ. ಇಂತಹ ಅವಲಂಬಿತಕ್ಕೆ ತಕ್ಕ ಉತ್ತರವನ್ನು ನೀಡಿ ದಾರಿ ದೀಪ್ತಿಯಾಗುವಂತೆ ವೈವಿಧ್ಯಮಯ ವಿಚಾರಗಳ ರೂಪವೇ ವಿಶ್ವದ ಅಪ್ಪಂದಿರು ಎನ್ನುವುದು ತತ್ವಶಃ ಒಪ್ಪಿಕೊಳ್ಳಬೇಕಾಗಿದೆ ಮತ್ತು ಸರ್ವಜನಮಾನ್ಯವಾದುದಾಗಿದೆ. ತಂದೆ ಮುಖ್ಯ ಘಟನೆಗಳ ನೆನಪಷ್ಟೇ ಅಲ್ಲ; ಅವುಗಳ ಪುನರ್ ವೀಕ್ಷಣೆ ಪ್ರಮುಖವಾಗಿದೆ ಹಾಗೂ ವಿಶ್ವ ಅಪ್ಪಂದಿರ ದಿನವೂ ಜ್ಞಾನಯಜ್ಞ ಮತ್ತು ಅರಿವಿನ ಯಜ್ಞವಾಗಿದೆ. 

ವಿಶ್ವ ಜನ್ಮದಾತರ ಜನವೆಂದರೆ ಕೇವಲ ರಚನೆ-ವಿರಚನೆಗಳ ಸಂಗ್ರಹವಲ್ಲ. ಪ್ರಜ್ಞಾಪ್ರವಾಹಿ ವಿಧಾನ (Stream of consciousness technique) ಮತ್ತು ಅರ್ಥಪೂರ್ಣ ಕುಟುಂಬೋಭ್ಯು ದಯದ ಬೆಳವಣಿಗೆ ಅಥವಾ ವಿಕಸನ ಇದರಲ್ಲಿದೆ ಎನ್ನುವುದನ್ನು ತಿಳಿಯಬೇಕಾಗಿದೆ. ಬದುಕಿನ ಸಿರಿವಂತಿಕೆ; ಸಿರಿವಂತ ಬದುಕು, ಸಾಮಾನ್ಯ ಜೀವನದ ಒಳತೋಟಿ, ನೋವು-ನಲಿವು; ನಗೆ-ಹೊಗೆ; ಬಡತನದ ಬೇಗುದಿಯಲ್ಲಿ ಬೆಳೆದರೂ ಅಂತ ಕಾರುಣ್ಯದಲ್ಲಿ ತುಂಬಿರುವ ದಯೇ-ಸೌಜನ್ಯ-ಮರುಕ-ಅನುಕಂಪ ಇವೆಲ್ಲಾ ಭಾವನೆಗಳನ್ನು ಅತ್ಯಂತ ಸತ್ವಶಾಲಿ ಮತ್ತು ಅಷ್ಟೇ ಸಂವೇದನಾಶೀಲ ವ್ಯಕ್ತಿತ್ವವನ್ನು ತಂದೆಯಲ್ಲಿ ಕಾಣಬಹುದಾಗಿದೆ.

ಪ್ರಪಂಚದ ಅತ್ಯಂತ ಪ್ರಗಲ್ಭ ವ್ಯಕ್ತಿಗಳು ತಮ್ಮ ಜನ್ಮದಾತನಿಂದ ಹೇಗೆ ಪ್ರಭಾವಿತರಾಗಿ, ಪ್ರಕಾಶ ಪುತ್ರರಾಗಿ ಪ್ರಜ್ವಲಿಸಿದ್ದಾರೆ ಎನ್ನುವುದನ್ನು ಕಾಣಬಹುದಾಗಿದೆ. ವಿಲಿಯಂ ಶೇಕ್ಸ್‍ಪಿಯರ್ (William Shakespeare) ತನ್ನ ತಂದೆ ಜಾನ್ ಶೇಕ್ಸ್‍ಪಿಯರ್ (John Shakespeare) ನಿಂದ ಸ್ವಾಭಿಮಾನಕ್ಕೆ ಸವಾಲೊಡ್ಡುವ ಸಮಯ ಬಂದಾಗ ಬಣ್ಣ ಬಣ್ಣದ ಉಪಮೇ, ರೂಪಕಗಳಲ್ಲಿ, ತ್ಯಾಗಮಯ ಬದುಕನ್ನು ಕೃತಿಯಲ್ಲಿ ತೋರಿದನು. ಕಬೀರ್‍ದಾಸ್ ತನ್ನ ದೋಹೆಗಳಲ್ಲಿ ಜೀವನಾದರ್ಶ, ಲೋಕ ಬಂಧನದಿಂದ ಮುಕ್ತರಾಗಿ ಪರಮಾತ್ಮನಲ್ಲಿ ಒಂದಾಗುವುದನ್ನು ಕಲಿತದ್ದು ತಂದೆಯಾದ ‘ನೀರು ದಾಸ್’ರವರಿಂದ. ‘ರವೀಂದ್ರ’ರು ‘ಗೀತಾಂಜಲಿ’ಯ ಮೂಲಕ ಕವೀಂದ್ರರಾಗಲು ತಂದೆ ‘ದೇವೇಂದ್ರನಾಥ’ ಠಾಕೂರ್‍ರವರಿಂದ ಸಾಧ್ಯವಾಯಿತು. ‘ಲಿಯೋ ಟಾಲ್‍ಸ್ಟಾಯ್’ (Leo-Tolstoy), ಸುಲಭ ಜನಪ್ರಿಯತೆಯ ಗೆಲುವೊಂದೇ ಬಾಳಿನಲ್ಲಿ ಮಹತ್ವವಾದುದೆಂದು ನಾನು ಭಾವಿಸುವುದಿಲ್ಲ ಎಂಬ ಮನೋಕ್ಷೇತ್ರಕ್ಕೆ ಪಿತ್ರೃವಾದ ನಿಕೋಲಾಯ್ ಟಾಲ್‍ಸ್ಟಾಯ್ (Nikolay Tolstoy) ಕಾರಣರಾದರು. ನಿಸರ್ಗ ಕವಿ ‘ವರ್ಡ್ಸ್‌ ವರ್ಥ್’ (Wordsworth) ತನ್ನೆಲ್ಲಾ ಬರವಣಿಗೆಗೆ ಬೆನ್ನೆಲುಬಾದ ತಂದೆ ‘ಜಾನ್ ವರ್ಡ್ಸ್‌ ವರ್ಥ್’ (John Wordsworth)ನನ್ನು ನೆನಸಿ ಕೊಳ್ಳುತ್ತಲೇ ಪ್ರಥಮನಾದನು. ‘ಮ್ಯಾಕ್ಸಿಂಗಾರ್ಕಿ’ ತನ್ನ ತಂದೆ ‘ಪುಕಾಯ್ ಪೇಶ್‍ಕಾವ್’ರವರಿಂದ ಪ್ರಸಿದ್ಧ ಕಾದಂಬರಿಗಳನ್ನು ಲೋಕಕ್ಕೆ ದರ್ಶನಗೈದನು. ಜನರ ಮನನೊಂದೀತೆಂದು ಹೆದರಿಕೊಂಡು ಸತ್ಯಕ್ಕೆ ಅವಮಾನವನ್ನುಂಟು ಮಾಡಲು ಬಯಸಲಿಲ್ಲ ‘ಮಹಾತ್ಮಗಾಂಧಿ’ ಇದು ತಂದೆಯಿಂದ ಬಳುವಳಿಯಾಗಿ ಬಂದುದರ ಫಲ. ‘ರಮಣ ಮಹರ್ಷಿ’ ತಂದೆ ‘ತಿರುಚುಳಿಯ ಸುಂದರಂ ಅಯ್ಯರ್’ರವರ ನೆರಳು ನೀಡಿದುದರ ನಿಮಿತ್ತ ‘ಗುರುವಾಚಕಕೋವೆ’ ಕೃತಿ ಮೈದಾಳಿತು. ‘ಅರವಿಂದ ಘೋಷ್’ ತಂದೆ ‘ಕೃಷ್ಣದೇವ್ ಘೋಷ್’ರ ಪ್ರಭಾವ ‘ಅರವಿಲ್’ ಎಂಬ ಅಂತರರಾಷ್ಟ್ರೀಯ ನಗರ ಸ್ಥಾಪನೆಯಾಯಿತು.

ಮಾನವ ಕೋಟಿಯನ್ನು ತಮ್ಮ ಅಪೂರ್ವ ಸಹನೆಯಿಂದ ಅನಂತ ಕಾಲದಿಂದ, ಅರ್ಥಪೂರ್ಣವಾಗಿ ಸಲುಹುತ್ತಾ ಬಂದ ಎಲ್ಲಾ ‘ಬೋಧನಾಶಾಸ್ತ್ರ’ (Pedagogy) ಕ್ಕಿಂತ ಮಿಗಿಲಾದ ‘ಕುಟುಂಬ ಶಾಸ್ತ್ರ’ (Family-ology) ಲೋಕದ ಅಪ್ಪಂದಿರುಗಳಿಂದ ಇಂದು ಕಾಣಬೇಕಾಗಿದೆ. ಅಂತಹ ‘ವಿಶ್ವ ಅಪ್ಪಂದಿರ ದಿನ’ ಮತ್ತು ‘ಯೋಗ ದಿನ’ಕ್ಕೆ ಅನಂತ-ಅನನ್ಯ- ಅಮೂಲ್ಯ ನಮನಗಳು.


ಪರಂಜ್ಯೋತಿ ಜ್ಯೋತ್ಸ್ನಗಳಾದ ಅಪ್ಪಂದಿರುಗಳಿಗೆ - Janathavaniಪ್ರೊ. ಬಾತಿ ಬಸವರಾಜ್
ಶಿಕ್ಷಣ ತಜ್ಞರು, ದಾವಣಗೆರೆ.

error: Content is protected !!