ವಿಶ್ವಕರ್ಮ ಸಮಾಜವು ಒಂದು ಜಾತಿಯಲ್ಲ, ಅದೊಂದು ಸಂಸ್ಕೃತಿ

ಹರಿಹರದ ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ

ಹರಿಹರ, ಸೆ.18- ವಿಶ್ವಕರ್ಮ ಸಮಾಜದ ಮಹಾನ್ ಪುರುಷರು ಸಮಾಜದ ಏಳಿಗೆಗಾಗಿ ತಮ್ಮದೇ ಆದ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಹಶೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಹೇಳಿದರು. 

ನಗರದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ನಿನ್ನೆ ನಡೆದ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ವಿಶ್ವಕರ್ಮ ಸಮಾಜದ ಜನರು ಶತಮಾನಗಳಿಂದ ಪಂಚ ಕಸುಬುಗಳ ಮೂಲಕ ದೇಶದ ಸಂಸ್ಕೃತಿ ಬಿಂಬಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಅದ್ಭುತ ಕೆತ್ತನೆಯ ಮೂಲಕ ಐತಿಹಾಸಿಕ ಸ್ಮಾರಕ, ದೇವಸ್ಥಾನಗಳನ್ನು ನಿರ್ಮಿಸಿದ ಕೀರ್ತಿ ವಿಶ್ವಕರ್ಮದ ಶಿಲ್ಪಿಗಳಿಗೆ ಸಲ್ಲುತ್ತದೆ. ವಿಶ್ವಕರ್ಮ ಸಮಾಜವು ಒಂದು ಜಾತಿಯಲ್ಲ, ಅದೊಂದು ಸಂಸ್ಕೃತಿ ಎಂದು ಅಭಿಪ್ರಾಯಪಟ್ಟರು.

ಎಲ್ಲಾ ಸಮುದಾಯದ ಜನರನ್ನು ಸಮಾಜದ ಮುಖ್ಯವಾನಿಗೆ ತರುವುದು ಸರ್ಕಾರದ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಸರ್ಕಾರ ವಿಶ್ವಕರ್ಮ ಸಮಾಜದ ಜನರಿಗೆ ಹಲವು ಕಾರ್ಯಕ್ರಮಗಳು, ಯೋಜನೆಗಳನ್ನು ಜಾರಿಗೆ ತಂದಿದೆ.ವಿಶ್ವಕರ್ಮ ಸಮಾಜ ಭಾರತ ದೇಶದಲ್ಲಿ ವಿಗ್ರಹ ಮತ್ತು ಶಿಲ್ಪಕಲೆಯಿಂದ ಗುರುತಿಸಿಕೊಂಡಿದೆ ಎಂದರು.

ಈ ಸಂದರ್ಭದಲ್ಲಿ ವಾಸುದೇವಚಾರಿ, ಲಕ್ಷ್ಮಿ ರಾಜಾಚಾರ್, ಪರಮೇಶ್ವರ, ಗಿರೀಶ್ ಆಚಾರ್, ಶಶಿಕಲಾ, ನೇತ್ರಾವತಿ ಪ್ಯಾಟಿ,  ಸುನಿತಾ, ವೀರಾಚಾರಿ, ಪ್ರವೀಣ್ ಆಚಾರಿ, ಹರೀಶ್ ಚಾರಿ, ಪರಮೇಶ್ವರ, ಮಲ್ಲೇಶ್ ಇತರರು ಕಾರ್ಯಕ್ರಮದಲ್ಲಿ ಹಾಜರಿದ್ದರು

error: Content is protected !!