ಪರಿಸರ ಸಮತೋಲನದಿಂದ ಶುದ್ಧ ಆಮ್ಲಜನಕ ಲಭ್ಯ

ಹೊನ್ನಾಳಿ ಎಪಿಎಂಸಿ ಅಧ್ಯಕ್ಷ ಜಿ.ಎಸ್. ಸುರೇಶ್‌

ಹೊನ್ನಾಳಿ, ಆ.30- ಜನಸಂಖ್ಯೆಗೆ ಅನುಗುಣವಾಗಿ ಪರಿಸರದಲ್ಲಿ ಹೆಚ್ಚಿನ ಸಂಖ್ಯೆಯ ಗಿಡಗಳನ್ನು ನೆಟ್ಟು ಪೋಷಿಸಬೇಕು. ಆಗ ಪರಿಸರ ಸಮತೋಲನಗೊಂಡು ಎಲ್ಲರಿಗೂ ಉಸಿರಾಟಕ್ಕೆ ಅಗತ್ಯವಾದ ಶುದ್ಧ ಆಮ್ಲಜನಕ ಲಭಿಸುತ್ತದೆ ಎಂದು ಎಪಿಎಂಸಿ ಅಧ್ಯಕ್ಷ ಜಿ.ಎಸ್. ಸುರೇಶ್ ಹೇಳಿದರು.

74ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಇಲ್ಲಿನ ಎಪಿಎಂಸಿ ಕಚೇರಿಯಲ್ಲಿ ಧ್ವಜಾರೋ ಹಣ ನೆರವೇರಿಸಿ, ಸ್ವಾತಂತ್ರ್ಯೋತ್ಸವದ ಸ್ಮರ ಣಾರ್ಥ ಎಪಿಎಂಸಿ ಆವರಣದಲ್ಲಿ ತೆಂಗಿನ ಗಿಡ ನೆಟ್ಟು ನೀರುಣಿಸಿ ಅವರು ಮಾತನಾಡಿದರು.

ಗಿಡ-ಮರಗಳು ಪ್ರಕೃತಿಯಲ್ಲಿನ ಇಂಗಾ ಲದ ಡೈಆಕ್ಸೈಡನ್ನು ಹೀರಿಕೊಂಡು ಶುದ್ಧ ಆಮ್ಲ ಜನಕವನ್ನು ಬಿಡುಗಡೆ ಮಾಡುತ್ತವೆ. ಆಮ್ಲಜ ನಕ ಪ್ರಾಣವಾಯುವಾಗಿದೆ. ಇದು ಮನುಷ್ಯನ ಉಸಿರಾಟಕ್ಕೆ ಅಗತ್ಯವಾಗಿದೆ. ಆದ್ದರಿಂದ, ನಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಗಿಡಗಳನ್ನು ನೆಟ್ಟು, ಪೋಷಿಸೋಣ ಎಂದು ತಿಳಿಸಿದರು.

ಎಪಿಎಂಸಿ ನಿರ್ದೇಶಕ ದಿಡಗೂರು ಎ.ಜಿ. ಪ್ರಕಾಶ್ ಮಾತನಾಡಿ, ಅಸಂಖ್ಯ ದೇಶಭಕ್ತರ ತ್ಯಾಗ-ಬಲಿದಾನಗಳಿಂದ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದೆ. ನಾವೆಲ್ಲರೂ ದೇಶಭಕ್ತಿ ಬೆಳೆಸಿಕೊಂಡು ಸ್ವಾವಲಂಬಿ ಭಾರತ ನಿರ್ಮಾ ಣಕ್ಕೆ ಶ್ರಮಿಸೋಣ ಎಂದು ಹೇಳಿದರು.

ಕರ್ನಾಟಕ ಪರಿಸರ ವೇದಿಕೆಯ ಅಧ್ಯಕ್ಷ ಎಚ್. ಕಡದಕಟ್ಟೆ ಎಂ.ಎಸ್. ಜಗದೀಶ್ ಮಾತನಾಡಿ, ಉತ್ತಮ ಪರಿಸರ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಒಂದೊಂದು ಗಿಡ ಬೆಳೆಸುವುದು ಸಾರ್ವಜನಿಕರ ಕರ್ತವ್ಯ ಎಂದು ತಿಳಿಸಿದರು.

ಮನುಷ್ಯನಿಗೆ ಅತ್ಯಮೂಲ್ಯವಾಗಿ ದೊರ ಕುವ ಆಮ್ಲಜನಕದ ಮಹತ್ವದ ಕುರಿತು, ಪರಿ ಸರ ನಾಶದಿಂದಾಗಿ ಆಗುತ್ತಿರುವ ದುಷ್ಪರಿಣಾ ಮಗಳು ಹಾಗೂ ಮುಂದಿನ ದಿನಗಳಲ್ಲಿ ಅದನ್ನು ಸರಿದೂಗಿಸುವ ರೀತಿಯ ಬಗ್ಗೆ ಮಾಹಿತಿ ನೀಡಿದರು. ಎಲ್ಲಾ ವಿದ್ಯಾರ್ಥಿಗಳು ವಿವಿಧ ಜಾತಿಯ ಕನಿಷ್ಟ 20 ಬೀಜದುಂಡೆಗಳನ್ನು ಮಾಡಿ ಮಳೆ ಬೀಳುವ ಸಂದರ್ಭದಲ್ಲಿ ನಾಟಿ ಮಾಡುವ ವಿಧಾನದ ಬಗ್ಗೆ ವಿವರಿಸಿದರು.

ಎಪಿಎಂಸಿ ಉಪಾಧ್ಯಕ್ಷ ಟಿ.ಪಿ. ಹನುಮಂತಪ್ಪ, ಕಾರ್ಯದರ್ಶಿ ವಿಜಯ್‍ಕುಮಾರ್ ಎಚ್.ಗುರಪ್ಪನವರ್, ಸಹಾಯಕ ಕಾರ್ಯದರ್ಶಿ ಜಯಪ್ಪ, ಕಂಪ್ಯೂಟರ್ ಆಪರೇಟರ್ ಕೆ. ಹನುಮಗೌಡ, ಸಿಬ್ಬಂದಿ ಸುಶೀರಾಜ್, ಮಂಜಪ್ಪ, ಹನುಮಂತಪ್ಪ, ಮಾರುತಿ, ಸುಂಕದಕಟ್ಟೆ ಗ್ರಾಮದ ಅರಣ್ಯ ಇಲಾಖೆಯ ಸಿಬ್ಬಂದಿ ಎಸ್.ಎಚ್. ಶಾಂತರಾಜ್, ಬಿ. ಶಾಂತಮ್ಮ ಮತ್ತಿತರರು ಉಪಸ್ಥಿತರಿದ್ದರು.

error: Content is protected !!