ವಾಸೋಪಯೋಗದ ಬಳಿ ಮದ್ಯದಂಗಡಿಗೆ ಅನುಮತಿ ನೀಡದಿರಲಿ

ಜಿಲ್ಲಾಡಳಿತಕ್ಕೆ ನಿಜಲಿಂಗಪ್ಪ ಬಡಾವಣೆ – ರಿಂಗ್ ರಸ್ತೆ ನಾಗರಿಕರ ಮನವಿ

ದಾವಣಗೆರೆ, ನ.21- ವಾಸೋಪ ಯೋಗದ ಬಡಾವಣೆ ಸಮೀಪವೇ ರಿಂಗ್ ರಸ್ತೆಯಲ್ಲಿನ ವಾಣಿಜ್ಯ ಮಳಿಗೆಯಲ್ಲಿ ಎಂಆರ್ ಪಿ ಲಿಕ್ಕರ್ ಶಾಪ್ ತೆರೆಯಲು ಅನುಮತಿ ನೀಡಬಾರದೆಂದು ಒತ್ತಾಯಿಸಿ ಎಸ್. ನಿಜಲಿಂಗಪ್ಪ ಬಡಾವಣೆಯ ನಾಗರಿಕರು ಮತ್ತು ರಿಂಗ್ ರಸ್ತೆಯ ನಿವಾಸಿಗಳು ಹಾಗೂ ಖಾಸಗಿ ಶಾಲೆಯ ಆಡಳಿತ ಮಂಡಳಿಯು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ಇಂದು ಮನವಿ ಸಲ್ಲಿಸಿತು.

ರತ್ನಮ್ಮ ಅವರು ಎ.ಎಸ್. ಶಾಂತಾ ಅ ವರಿಗೆ ಸೇರಿದ ರಿಂಗ್ ರಸ್ತೆಯಲ್ಲಿರುವ ಎರಡು ಮಳಿಗೆಗ ಳಲ್ಲಿ ಎಂಆರ್ ಪಿ ಲಿಕ್ಕರ್ ಶಾಪ್ ಮಾಡಲು ಅಬ ಕಾರಿ ಉಪಾಯುಕ್ತರಿಗೆ ಅರ್ಜಿ ಸಲ್ಲಿಸಿದ್ದಾರೆ. ಈ ಸ್ಥಳವು ವಾಸೋಪಯೋಗಕ್ಕೆ ನಿಗದಿಪಡಿಸಿ ಮೀಸ ಲಾಗಿದ್ದರೂ ಸಹ ಕಟ್ಟಡ ಮಾಲೀಕರು ಅನಧಿಕೃತ ವಾಗಿ ವಾಣಿಜ್ಯ ಉಪ ಯೋಗಕ್ಕೆ ಬಳಸಿರುವ ಬಗ್ಗೆ ಲೋಕಾಯುಕ್ತರಲ್ಲಿ ದೂರು ನಡೆಯುತ್ತಿದ್ದರು ರತ್ನಮ್ಮ ಅವರಿಗೆ ಬಾಡಿಗೆ ಕರಾರು ಪತ್ರ ಮಾಡಿ ಕೊಟ್ಟು ಬಡಾವಣೆಯ ನಿವಾಸಿಗರಿಗೆ ತೊಂದರೆ ಯುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಆ ಮಳಿಗೆಯ 40 ಅಡಿಯಲ್ಲಿ ವಾಸದ ಮನೆ, ಚರ್ಚ್, ಶಾಲೆ, ಸರ್ಕಾರಿ ಸಮುದಾಯ ಭವನ ಹಾಗೂ ತಮ್ಮ ನಿವಾಸವು ಸಹ ಇದ್ದು, ಎಂಆರ್ ಪಿ ಲಿಕ್ಕರ್ ಶಾಪ್  ಆದರೆ ಬಡಾವಣೆ ನಿವಾಸಿಗರ ಜೀವನ ಅಸ್ತವ್ಯಸ್ಥವಾಗುವುದಲ್ಲದೇ ಶಾಂತಿ ಭಂಗವುಂಟಾಗಲಿದೆ. ಈ ಕೂಡಲೇ ಅರ್ಜಿಯನ್ನು ಮಂಜೂರು ಮಾಡದಂತೆ ಅಬಕಾರಿ ಉಪಾಯುಕ್ತರಿಗೆ ತಿಳಿಸಬೇಕು. ಹಾಗೇನಾದರೂ ನಿಮ್ಮ ಆದೇಶವನ್ನು ಮೀರಿ ಲಿಕ್ಕರ್ ಶಾಪ್ ತೆಗೆದರೆ ಬಡಾವಣೆ ನಿವಾಸಿಗಳು ಹೋರಾಟಕ್ಕೆ ಇಳಿಯ ಬೇಕಾಗಲಿದೆ ಎಂದು ಮನವಿ ನೀಡಿದ ನಾಗರೀಕರು ಎಚ್ಚರಿಸಿದರು.

ಸರ್ಕಾರದ ಆದೇಶದ ಪ್ರಕಾರ ಶಾಲೆಯ ಸುತ್ತ ತೆರೆಯಲು ಅವಕಾಶವಿಲ್ಲದಿದ್ದರೂ ಮುಂದಾಗಿರುವುದನ್ನು ತಡೆಯಬೇಕು. ಶಾಲೆಯ ಸುತ್ತ ಮದ್ಯಪಾನ ಅಂಗಡಿ ತೆರೆದರೆ ಮಕ್ಕಳ ಮನಸ್ಸಿನ ಮೇಲೆ ದುಷ್ಪರಿಣಾಮ ಬೀರುವುದಲ್ಲದೇ, ಮನಸ್ಥಿತಿ ಹದಗೆಡಲಿದೆ. ಎಂದು ಖಾಸಗಿ ಶಾಲೆಯೊಂದರ ಮುಖ್ಯೋ ಪಾದ್ಯಾಯಿನಿ ಆತಂಕ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಡಾವಣೆ ನಾಗರೀಕರಾದ ಕೆ.ಸಿ. ಸಿದ್ದಪ್ಪ, ಡಿ.ಎಸ್. ಸಿದ್ದಣ್ಣ, ಅನಿಲ್ ಬಾರೆಂಗಳ್, ಆರ್.ವಿ. ರತ್ನಕರ್, ಅಮರ್ ಸಿಂಗ್, ಪೌಸಿಯಾ, ಕಲೀಂ, ಕೆ.ಎಸ್. ಸಿದ್ದಲಿಂಗಪ್ಪ, ಮುಜೀಬುರ್ ರೆಹಮಾನ್, ಸಿದ್ದಲಿಂಗಪ್ಪ, ಆರ್.ಎಸ್. ಶಾರದಮ್ಮ, ಡಿ.ವಿ. ಜಯರುದ್ರಪ್ಪ, ಜಯಣ್ಣ, ಸುನೀಲ್ ಕುಮಾರ್, ಶಿವಾನಂದ್ ಸೇರಿದಂತೆ ಇತರರು ಇದ್ದರು.

error: Content is protected !!