ಪದವೀಧರ ಚುನಾವಣೆಯಲ್ಲಿ ಜೆಡಿಎಸ್ ಗೆಲುವು ನಿಶ್ಚಿತ

ಮಲೇಬೆನ್ನೂರಿನ ಜೆಡಿಎಸ್ ಸಭೆಯಲ್ಲಿ ಶಿವಶಂಕರ್ ವಿಶ್ವಾಸ

ಮಲೇಬೆನ್ನೂರು, ಅ.21- ಜೆಡಿಎಸ್ ಕಾರ್ಯಕ ರ್ತರು, ಅಭಿಮಾನಿಗಳು ನಮ್ಮ ಪರವಾಗಿ ಗಟ್ಟಿಯಾಗಿ ನಿಂತಿದ್ದಾರೆ. ಹಾಗಾಗಿ ಜೆಡಿಎಸ್ ಸದೃಢವಾಗಿದೆ ಎಂದು ಮಾಜಿ ಶಾಸಕ ಹೆಚ್.ಎಸ್.ಶಿವಶಂಕರ್ ಹೇಳಿದರು.

ಪಟ್ಟಣದ ನಂದಿಗುಡಿ ರಸ್ತೆಯಲ್ಲಿರುವ ಶ್ರೀ ಕನ್ನಿಕಾ ಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆ ಅಂಗವಾಗಿ ಇಂದು ಸಂಜೆ ಏರ್ಪಾಡಾಗಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುವುದು ಶತಸಿದ್ಧ. ಈ ಬಗ್ಗೆ ಯಾರಿಗೂ ಅನುಮಾನ ಬೇಡ ಎಂದ ಅವರು, ರಾಜ್ಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳ ಆಡಳಿತದಿಂದ ಹಾಗೂ ಆ ಪಕ್ಷಗಳ ಆಂತರಿಕ ಜಗಳಗಳಿಂದ ಜನ ಬೇಸತ್ತಿದ್ದು, ಜೆಡಿಎಸ್ ಪಕ್ಷವನ್ನು ಜನ ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದರು.

ತಾವು ಶಾಸಕನಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ  ತಮ್ಮ ಬುದ್ದಿವಂತಿಕೆಯಿಂದ ಸಚಿವರು, ಅಧಿಕಾರಿಗಳ ಮನವೊಲಿಸಿ ಹರಿಹರ ಕ್ಷೇತ್ರಕ್ಕೆ 400 ಕೋಟಿ ರೂ. ಅನುದಾನ ತಂದು ಅಭಿವೃದ್ಧಿ ಕೆಲಸ ಮಾಡಿಸಿದ್ದೇನೆ. ಆದರೂ ಜನ ಅದು ಯಾವುದನ್ನೂ ನೋಡದೆ ತಮ್ಮನ್ನು ಸೋಲಿಸಿದರು ಎಂದು ಶಿವಶಂಕರ್ ಬೇಸರ ವ್ಯಕ್ತಪಡಿಸಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ ಮಾತನಾಡಿದರು. ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಬಂಡೇರ ತಿಮ್ಮಣ್ಣ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮುಖಂಡ ಪೂಜಾರ್ ಬಸಪ್ಪ, ಪುರಸಭೆ ಸದಸ್ಯ ಯುಸೂಫ್ ಮಾತನಾಡಿದರು.

ಪಿಎಸಿಎಸ್ ಅಧ್ಯಕ್ಷ ಅಬ್ದುಲ್ ಹಾದಿ, ಜಿ.ಪಂ. ಮಾಜಿ ಸದಸ್ಯ ಎ.ಕೆ.ನಾಗಪ್ಪ, ಪುರಸಭೆ ಸದಸ್ಯರಾದ ಬರ್ಕತ್ ಅಲಿ, ಮಾಸಣಗಿ ಶೇಖರಪ್ಪ, ಆದಾಪುರ ವಿಜಯಕುಮಾರ್, ಮುಖಂಡರಾದ ಎಂ.ಬಿ.ಗುಲ್ಜಾರ್, ಶೌಕತ್ ಅಲಿಖಾನ್, ಎಂ.ಆರ್.ಮಹಾದೇವಪ್ಪ, ನಿಟ್ಟೂರಿನ ಕೆ.ಸಂಜೀವಮೂರ್ತಿ, ಎನ್.ಜಿ.ಬಸವನಗೌಡ, ಎಸ್.ಜಿ.ದೇವರಾಜ್, ಜಿಗಳಿಯ ಗೌಡ್ರ ಬಸವರಾಜಪ್ಪ, ಕೆ.ಎನ್.ಹಳ್ಳಿ ಅಶೋಕ್, ಹಳ್ಳಿಹಾಳ್ ಶಾಂತನಗೌಡ, ಕೊಕ್ಕನೂರಿನ ಆಂಜನೇಯ ಪಾಟೀಲ್, ಹೊಸಳ್ಳಿ ಕರಿಬಸಪ್ಪ ಸೇರಿದಂತೆ ಇನ್ನೂ ಅನೇಕರು ಸಭೆಯಲ್ಲಿ ಭಾಗವಹಿಸಿದ್ದರು.

error: Content is protected !!