ಮನುಷ್ಯ ಬೆಳೆದಂತೆ ಸೈಬರ್ ಅಪರಾಧಗಳು ಜಾಸ್ತಿಯಾಗುತ್ತಿವೆ

ಹರಪನಹಳ್ಳಿ ಪೊಲೀಸ್ ವೃತ್ತಾಧಿಕಾರಿ ನಾಗರಾಜ್‌ ವ್ಯಾಕುಲತೆ

ಹರಪನಹಳ್ಳಿ, ನ.23- ವೈಜ್ಞಾನಿಕವಾಗಿ ಮನುಷ್ಯ ಬೆಳೆದಂತೆ ಸೈಬರ್ ಅಪರಾಧಗಳು ಜಾಸ್ತಿಯಾಗುತ್ತಿದ್ದು, ಅದರಲ್ಲಿ ಮಹಿಳೆಯರೇ ಹೆಚ್ಚಾಗಿ ಸೈಬರ್ ಅಪರಾಧಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಿದ್ದಾರೆ ಎಂದು ಸಿಪಿಐ ನಾಗರಾಜ್‌ ಕಮ್ಮಾರ ಕಳವಳ ವ್ಯಕ್ತ ಪಡಿಸಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ವಸತಿ ನಿಲಯದಲ್ಲಿ ಜೆ.ಸಿ.ಐ. ಹಾಗೂ ಪರಿವರ್ತನಾ ಶಾಲಾ ವತಿಯಿಂದ ಹಮ್ಮಿಕೊಂಡಿದ್ದ  ಸೈಬರ್ ಅಪರಾಧಗಳ ಬಗ್ಗೆ ಜಾಗೃತಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಮೊಬೈಲ್, ಟಿ.ವಿಗಳ ಮುಖಾಂತರ ಇಂಟರ್‌ನೆಟ್ ಬಳಸಿ ಜಾಣತನದಿಂದ ಅಪರಾಧಗಳನ್ನು  ಮಾಡುತ್ತಿದ್ದಾರೆ. ಫೇಸ್‌ ಬುಕ್, ವ್ಯಾಟ್ಸಾಪ್, ಶಾದಿ ಡಾಟ್‌ ಕಾಂ ಸೇರಿದಂತೆ ವಿವಿಧ ರೀತಿಯಲ್ಲಿ ಜನರು ವಂಚನೆಗೆ ಒಳಗಾಗುತ್ತಿದ್ದಾರೆ. ಬಹುಮುಖ್ಯವಾಗಿ ಬ್ಯಾಂಕ್ ವ್ಯವಹಾರಗಳಲ್ಲಿ ಎ.ಟಿ.ಎಂ. ನಂಬರ್ ಕೇಳುವುದು, ಬ್ಯಾಂಕ್ ಖಾತೆ ರದ್ದಾಗಿದೆ ನಿಮ್ಮ ಎ.ಟಿ.ಎಂ. ಕಾರ್ಡ್‌ ರದ್ದಾಗಿದೆ ಎಂದು ನಿಮ್ಮ 16 ಸಂಖ್ಯೆಯ ಡಿಜಿಟಲ್ ಸಂಖ್ಯೆ ಹೇಳಿ ಎಂದು ನಿಮಗೆ ಮೋಸ ಮಾಡುವ ಸಂಭವ ಜಾಸ್ತಿ ಇದೇ ರೀತಿಯಾಗಿ  ಪ್ರತಿ ವರ್ಷ  250 ಪ್ರಕರಣಗಳು ದಾಖಲಾಗುತ್ತವೆ. ಆದ್ದರಿಂದ ನೀವು ಜಾಗೃತರಾಗಿರಬೇಕು ಎಂದರು.

ಪರಿವರ್ತನಾ ಶಾಲೆಯ ಅಧ್ಯಕ್ಷ ರವಿ ಅಧಿಕಾರ್ ಮಾತನಾಡಿ,   ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ, ಆರೋಗ್ಯದ ಕಡೆ ಹಾಗೂ ಶಿಕ್ಷಣದ ಕಡೆ ಹೆಚ್ಚಿನ ಒತ್ತು ನೀಡಬೇಕು ಎಂದರು.

ಸಮಾಜ ಕಲ್ಯಾಣಾಧಿಕಾರಿ ಆನಂದ ವೈ. ಡೊಳ್ಳಿನ ಮಾತನಾಡಿ, ರಾಜ್ಯದ ಧಾರವಾಡ ಶಿಕ್ಷಣ ಕಾಶಿಯಾದರೆ ಈ ಭಾಗದ ಹರಪನಹಳ್ಳಿ ಕೂಡ ಶಿಕ್ಷಣ ಕಾಶಿಯಾಗಿದ್ದು, ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 10 ವಸತಿ ನಿಲಯಗಳು ಇವೆ. ವಿದ್ಯಾರ್ಥಿಗಳಿಗೆ ಯಾವುದೇ ಕೊರತೆಯಾಗದಂತೆ ಶಿಕ್ಷಣ ನೀಡಲಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಜೆ.ಸಿ.ಐ. ತಾಲ್ಲೂಕು ಅಧ್ಯಕ್ಷ  ಟಿ.ಎಂ. ವೀರೇಶ್, ನಿಕಟಪೂರ್ವ ಅಧ್ಯಕ್ಷ ವಿಶ್ವನಾಥ ಸೋಗಿ, ಹೇಮಣ್ಣ ಮೋರಿಗೆರೆ, ಜೆ.ಸಿ.ಐ.ನ  ಎನ್.ಕೆ. ಸಂತೋಷ್, ಶರತ್‍ಬಾಬು, ಪ್ರಸನ್ನಕುಮಾರ್ ಜೈನ್, ಶಿವಕುಮಾರ ನಾಯ್ಕ, ರವಿ ಮೆಡಿಕಲ್  ಸೇರಿದಂತೆ ಇತರರು ಇದ್ದರು.

error: Content is protected !!