ಹರಿಹರ, ನ.12- ಮುಂದಿನ ಮಾರ್ಚ್ 22 ರಂದು ನಡೆಯುವ ಗ್ರಾಮದೇವತೆ ಊರಮ್ಮ ದೇವಿಯ ಜಾತ್ರಾ ಮಹೋತ್ಸವದ ಅಧ್ಯಕ್ಷರಾಗಿ ಕೆ. ಅಣ್ಣಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಬೆಣ್ಣೆ ರೇವಣಸಿದ್ದಪ್ಪ, ಖಜಾಂಚಿಯಾಗಿ ಶೇರಾ ಪುರ ರಾಜಪ್ಪ ಮತ್ತು ಸಹ ಕಾರ್ಯದರ್ಶಿ ಯಾಗಿ ಪಾಲಾಕ್ಷಪ್ಪ ಅವರನ್ನು ಸರ್ವಾನು ಮತದಿಂದ ಆಯ್ಕೆ ಮಾಡಲಾಯಿತು.
ಕಸಬಾ ಗ್ರಾಮದೇವತೆ ದೇವಸ್ಥಾನದ ಆವರಣದಲ್ಲಿ ಊರಮ್ಮ ದೇವಿಯ ಜಾತ್ರೆ ನಿಮಿತ್ತವಾಗಿ ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್ ಮತ್ತು ಮಾಜೇನಹಳ್ಳಿ ಗೌಡ್ರು ಚನ್ನಬಸಪ್ಪ ಹಾಗೂ ನಗರದ ಪ್ರಮುಖ ಮುಖಂಡರ ನೇತೃತ್ವದಲ್ಲಿ ಇಂದು ನಡೆದ ಮಹತ್ವದ ಸಭೆಯಲ್ಲಿ ಮುಂಬರುವ ಗ್ರಾಮದೇವತೆ ಊರಮ್ಮ ದೇವಿಯ ಜಾತ್ರಾ ಮಹೋತ್ಸವ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಕೆ. ಅಣ್ಣಪ್ಪ, ಪ್ರಧಾನ ಕಾರ್ಯದರ್ಶಿ ಬೆಣ್ಣೆ ರೇವಣಸಿದ್ದಪ್ಪ, ಖಜಾಂಚಿ ಶೇರಾಪುರ ರಾಜಪ್ಪ ಹಾಗೂ ಸಹ ಕಾರ್ಯದರ್ಶಿಯಾಗಿ ಪಾಲಾಕ್ಷಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಎರಡೂ ಗ್ರಾಮಗಳ ಅಧ್ಯಕ್ಷರು ಘೋಷಣೆ ಮಾಡಿದರು. ನಂತರದಲ್ಲಿ ಜಾತ್ರೆಯ ಡಬ್ಬಿ ಗಡಿಗೆಗೆ ಪೂಜೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್, ಮಾಜೇನಹಳ್ಳಿ ಗೌಡ್ರು ಚನ್ನಬಸಪ್ಪ, ಮುಖಂಡರಾದ ಕೆ. ಜಡಿಯಪ್ಪ, ಗೌಡ್ರು ಪುಟ್ಟಪ್ಪ, ಜಿ.ನಂಜಪ್ಪ, ವೈ.ಎನ್. ಮಹೇಶ್, ಪೂಜಾರ್ ವೀರಣ್ಣ, ಬಾಸಿಂಗದರ ಸಿದ್ದಪ್ಪ, ಕೆ.ಬಿ. ರಾಜಶೇಖರ್, ಬೆಳಕೇರಿ ಚಂದ್ರಪ್ಪ, ಡಿ. ಸಿದ್ದೇಶ್, ಜಗದೀಶ್ ಚೂರಿ, ರೇವಣಪ್ಪ, ಕಂಚಿಕೇರಿ ಕರಿಬಸಪ್ಪ, ಸುರೇಶ್ ಚಂದಾಪೂರ್, ಎಂ. ಆರ್. ಚಂದ್ರಶೇಖರ್, ಪರಶುರಾಮ ಕಾಟ್ವೆ, ಬೆಣ್ಣೆ ಸಿದ್ದಪ್ಪ, ಹರಪನಹಳ್ಳಿ ಬಸವರಾಜಪ್ಪ, ನಲ್ಲಿ ಬಸವರಾಜಪ್ಪ, ರಾಖೇಶ್, ಮುದೇಗೌಡ್ರು ಹನುಮಂತಪ್ಪ, ಪತ್ರಕರ್ತ ಎಂ. ಚಿದಾನಂದ ಕಂಚಿಕೇರಿ, ಪೂಜಾರ್ ರುದ್ರೇಶ್ ಉಪಸ್ಥಿತರಿದ್ದರು.
ಗುತ್ಯಪ್ಪ, ಹಳ್ಳದಕೇರಿ ನಿಜಗುಣ, ವಸಂತಕುಮಾರ್, ಗಿರೀಶ್, ಪಾಲಾಕ್ಷಪ್ಪ ಮಜ್ಜಿಗೆ, ಹೇಮಣ್ಣ ಪೂಜಾರ್, ಹಣಿಗಿ ಹೊನ್ನಪ್ಪ, ಕೆಂಚಪ್ಪ, ದೇವರಾಜ್, ರಾಘ ವೇಂದ್ರ ಹಳ್ಳದಕೇರಿ, ಹನುಮಂತಪ್ಪ ಎಕ್ಕನಹಳ್ಳಿ, ಸಿಂಗಾಡಿ ಕೃಷ್ಣ, ಐರಣಿ ಮಹೇಶ್, ಶಾನಭೋಗ ಹರೀಶ್, ನಾರಾ ಯಣ ಜೋಯಿಸರು, ಚಿದಂಬರ ಜೋಯಿ ಸರು, ಹರಿಶಂಕರ್ ಜೋಯಿಸರು, ಅರ್ಚಕ ರಾದ ಮಾನಪ್ಪ ಆಚಾರ್, ವೀರೇಶ್ ಆಚಾರ್, ನಾಗರಾಜ್ ಆಚಾರ್, ಜನಾ ರ್ಧನ್ ಆಚಾರ್ ಇನ್ನಿತರರು ಹಾಜರಿದ್ದರು.