ಹರಪನಹಳ್ಳಿಯ ಹಿರಿಯ ಸಿವಿಲ್ ನ್ಯಾಯಾಧೀಶರಾದ ಭಾರತಿ ಕರೆ
ಹರಪನಹಳ್ಳಿ, ನ.12- ದೇವದಾಸಿಯಂತಹ ಅನಿಷ್ಟ ಪದ್ಧತಿ ಅಳಿಸಿ ಹಾಕುವ ಮೂಲಕ ಮಾನವ ಘನತೆ ಉಳಿಸಬೇಕಾಗಿದೆ. ದೇವದಾಸಿ ಪದ್ಧತಿ ಮುಕ್ತ ಸಮಾಜಕ್ಕೆ ನಾವೆಲ್ಲರೂ ಪಣ ತೊಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಭಾರತಿ ಹೇಳಿದರು.
ಪಟ್ಟಣದ ಬಾಬು ಜಗಜೀವನ ರಾಂ ಭವನದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ದೇವದಾಸಿ ಪದ್ಧತಿ ತಡೆಯುವಿಕೆ ಕುರಿತಾದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ದೇವದಾಸಿ ಪದ್ಧತಿಗೊಳಗಾದ ಮಹಿಳೆಯರು ನರಕ ಅನುಭವಿಸುತ್ತಿದ್ದು, ಸಮಾಜ ಅವರನ್ನು ಪ್ರಾಣಿಗ ಳಂತೆ ಬಳಸಿಕೊಂಡು ಶೋಷಣೆ ಮಾಡುತ್ತಿರುವುದು ವಿಷಾದನೀಯ. ದೇವದಾಸಿ ನಿರ್ಮೂಲನೆ ಪದ್ಧತಿ ಕಾಯ್ದೆ ಜಾರಿಯಲ್ಲಿದ್ದರೂ ಹಲವೆಡೆ ಮುತ್ತು ಕಟ್ಟುವ ಮೂಲಕ ದೇವದಾಸಿ ಪದ್ಧತಿಗೆ ಮಹಿಳೆಯರನ್ನು ನೂಕುತ್ತಿರುವುದು ಕಂಡು ಬರುತ್ತಿದೆ.
ಅನಿಷ್ಟ ಪದ್ಧತಿಯಿಂದ ಶೋಷಣೆಗೆ ಒಳಗಾಗಿರುವ ನಮ್ಮ ತಾಯಂದಿರು, ಸಹೋದರಿಯರನ್ನು ಸಂಬಂಧಿಸಿದ ಇಲಾಖೆಗಳು ತಡೆಯುವ ಕೆಲಸ ಮಾಡಬೇಕು. ದೇವದಾಸಿಯರ ಮರು ಸಮೀಕ್ಷೆ ನಡೆಸಿ ಅವರಿಗೆ ಪುನರ್ವಸತಿ, ಸೌಲಭ್ಯಗಳನ್ನು ನೀಡುವ ಜವಾಬ್ದಾರಿ ಸಮಾಜದ ಎಲ್ಲರ ಮೇಲಿದೆ ಎಂದರು.
ನ್ಯಾಯಾಲಯದಲ್ಲಿರುವ ಸಾರ್ವಜನಿಕರ ಸಣ್ಣ ಪುಟ್ಟ ಪ್ರಕರಣಗಳನ್ನು ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಇತ್ಯರ್ಥ ಪಡಿಸಲಾಗುವುದು. ಕೆಲವು ಪ್ರಕರಣಗ ಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಗು ವುದು ಎಂದು ಸಾರ್ವಜನಿಕರಿಗೆ ತಿಳಿ ಹೇಳಿದರು.
ಕಾರ್ಯಕ್ರಮದಲ್ಲಿ ಸಿವಿಲ್ ಕಿರಿಯ ನ್ಯಾಯಾಧೀಶ ಫಕ್ಕೀರವ್ವ ಕೆಳಗೇರಿ ಮಾತನಾಡಿದರು.
ಸರ್ಕಾರಿ ಅಭಿಯೋಜಕರಾದ ಎನ್. ಮೀನಾಕ್ಷಿ, ಅಪರ ಸರ್ಕಾರಿ ವಕೀಲ ವಿ.ಜಿ. ಪ್ರಕಾಶ್ಗೌಡ, ವಕೀ ಲರ ಸಂಘದ ಉಪಾಧ್ಯಕ್ಷ ಟಿ. ವೆಂಕಟೇಶ್, ಕಾರ್ಯದರ್ಶಿ ಕೆ. ಬಸವರಾಜ್, ದೇವದಾಸಿ ಮಹಿಳೆಯರ ಒಕ್ಕೂಟದ ಸದಸ್ಯೆ ಸರೋಜ ಹವಳದ, ಶಿಕ್ಷಕ ಅರ್ಜುನ್ ಪರಸಪ್ಪ, ಅಂಜಿನಪ್ಪ, ವಕೀಲರು ಗಳಾದ ಕೆ. ಬಸವರಾಜ್, ಎಂ. ಮೃತ್ಯುಂಜಯ, ಬಿ. ಗೋಣಿಬಸಪ್ಪ, ಮಂಜ್ಯಾನಾಯ್ಕ, ಬಿ.ವಿ. ಬಸವನಗೌಡ, ಕೆ. ಸಣ್ಣ ನಿಂಗನಗೌಡ, ಮುತ್ತಿಗಿ ಮಂಜುನಾಥ್, ಕೆ.ಎಸ್. ವಾಮದೇವ, ಜಿ.ಎಸ್.ತಿಪ್ಪೇಸ್ವಾಮಿ, ಬಂಡ್ರಿ ಆನಂದ್, ಕೆ. ಕೋಟ್ರೆಶ್, ನಂದೀಶ್ ನಾಯ್ಕ, ಹುಲಿಯಪ್ಪ, ಮುಜೀಬುರ್ ರಹಿ ಮಾನ್, ಎಸ್. ಜಾಕೀರ್, ಸಿದ್ದೇಶ್, ರೇವಣಸಿದ್ದಪ್ಪ, ಬಸವರಾಜ್, ಕೊಟ್ರೇಶ್ ಇನ್ನಿತರರಿದ್ದರು.