ದಾವಣಗೆರೆ, ಆ.2- ಜಿಲ್ಲೆಯಲ್ಲಿ ಸೋಮವಾರ 4 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 23 ಜನರು ಗುಣಮುಖರಾದ ಬಗ್ಗೆ ಜಿಲ್ಲಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 1, ಹರಿಹರ 2 ಹಾಗೂ ಹೊನ್ನಾಳಿ ತಾಲ್ಲೂಕಿನ ಒಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. 317 ಸಕ್ರಿಯ ಪ್ರಕರಣಗಳಿವೆ.
ಇಬ್ಬರಲ್ಲಿ ಬ್ಲಾಂಕ್ ಫಂಗಸ್ ಪತ್ತೆ: ಜಿಲ್ಲೆಯ ಇಬ್ಬರಲ್ಲಿ ಬ್ಲಾಂಕ್ ಫಂಗಸ್ ಪತ್ತೆಯಾಗಿದ್ದು, ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಲ್ಲಿಯವರೆಗೆ 129 ಜನರು ಬ್ಲಾಕ್ ಫಂಗಸ್ಗೆ ತುತ್ತಾಗಿದ್ದರು, ಪ್ರಸ್ತುತ 28 ಸಕ್ರಿಯ ಪ್ರಕರಣಗಳಿವೆ.