ಹರಿಹರ, ನ.9- ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ನಡೆಿದಿದ್ದು, ಹರಿಹರ ಕ್ಷೇತ್ರದ ಮತದಾರರಿಗೆ ಆನ್‌ಲೈನ್ ಮುಖಾಂತರ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಸದಾವ ಕಾಶವನ್ನು ನೀಡಿದ್ದು, ಸಾರ್ವಜನಿಕರು ಬಳಸಿಕೊ ಳ್ಳಲು ತಹಶೀಲ್ದಾರ್ ರಾಮಚಂದ್ರಪ್ಪ ಹೇಳಿದರು.
ನಗರದ ಗುರುಭವನದ ಸಭಾಂಗಣದಲ್ಲಿ ಇಂದು ನಡೆದ ತಾಲ್ಲೂಕಿನ ಬಿಎಲ್ಓಗಳ ಸಭೆಯಲ್ಲಿ ಅವರು ಮಾತನಾಡಿದರು.
ಈಗಾಗಲೇ ಅಂಗನವಾಡಿ ಶಿಕ್ಷಕಿಯರು ಮತ್ತು ಬಿಎಲ್ಓ ಸಿಬ್ಬಂದಿಗಳು ತಮಗೆ ವಹಿಸಿದ ಜವಾಬ್ದಾರಿಯನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿದ್ದೀರಾ. ಈ ಬಾರಿ ಕೂಡ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಸಂಬಂಧಿಸಿದ ಕೆಲಸವನ್ನು ಜವಾಬ್ದಾರಿಯಿಂದ ನಿರ್ವಹಿಸಲು ತಿಳಿಸಿದರು.
ಮತದಾರರು ಹಕ್ಕು ಮತ್ತು ಆಕ್ಷೇಪಣೆಗಳನ್ನು ಅಂದರೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ, ನಮೂನೆ-6 ರಲ್ಲಿ ಆಕ್ಷೇಪಣೆ, ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದು ಹಾಕಲು ನಮೂನೆ-7 ರಲ್ಲಿ ಮತದಾರರ ವಿವರ ತಿದ್ದುಪಡಿಗೆ ನಮೂನೆ-8 ರಲ್ಲಿ ಹಾಗೂ ವಿಧಾನಸಭಾ ಕ್ಷೇತ್ರದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವರ್ಗಾ ವಣೆಗೆ ನಮೂನೆ 8ಎ ರಲ್ಲಿ ಅರ್ಜಿಯನ್ನು ಸಂಬಂ ಧಿಸಿದ ಮತಗಟ್ಟೆಗಳಲ್ಲಿ, ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಹಾಗೂ ನಿರ್ಧಿಷ್ಟಾಧಿಕಾರಿಗಳಿಗೆ ಸೂಕ್ತ ದಾಖಾಲಾತಿಗಳೊಂದಿಗೆ ಸಲ್ಲಿಸಬಹುದು.
ಮತದಾರರು voter helpline App, www.nvsp.in ವೆಬ್‌ಸೈಟ್ ಮುಖಾಂತರ , voter portal( www.voterportal.eci.gov.in) ಸಾಮಾನ್ಯ ಸೇವಾ ಕೇಂದ್ರದ ಮುಖಾಂತರ (CSC) ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿ ಸರಿಯಾಗಿರುವ ಬಗ್ಗೆ ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದರು.
ಬಿಇಓ ಸಿದ್ದಪ್ಪ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಹಲವು ನ್ಯೂನತೆಗಳು ಬರುತ್ತವೆ. ಅದನ್ನು ಸರಿಪಡಿಸುವ ಜವಾಬ್ದಾರಿ ಯನ್ನು ಶಿಕ್ಷಣ ಇಲಾಖೆ ಮತ್ತು ಕಂದಾಯ ಇಲಾಖೆ ಜಂಟಿಯಾಗಿ ನಿರ್ವಹಣೆ ಮಾಡುತ್ತಿದ್ದು ,ಎಲ್ಲರೂ ತಮಗೆ ವಹಿಸಿದ ಜವಾಬ್ದಾರಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಲು ತಿಳಿಸಿದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಲಹೆಗಾರ ದುರುಗಪ್ಪ, ಪ್ರಶಾಂತ್, ಸೋಮಶೇಖರ, ಉಮೇಶ್, ಮಲ್ಲಿಕಾರ್ಜುನ್, ಸಮೀರ್, ಹೇಮಂತ್, ಆನಂದ್ ಮಲೇಬೆನ್ನೂರು ಇನ್ನಿತರರಿದ್ದರು.