ದಾವಣಗೆರೆ, ನ.8- ತಾಲ್ಲೂಕಿನ ಎಲೆಬೇತೂರು ಗ್ರಾಮದಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಚಟುವಟಿಕೆಯಿಲ್ಲದೇ ಬಿಕೋ ಎನ್ನುತ್ತಿದ್ದ ಅಂಗನವಾಡಿ `ಎ’ ಕೇಂದ್ರವು ಇಂದು ಬೆಳಿಗ್ಗೆ ಚಿಣ್ಣರ ಕಲರವದೊಂದಿಗೆ ಮತ್ತೆ ಶುಭಾರಂಭವಾಯಿತು.
ಸತತ 20 ತಿಂಗಳುಗಳಿಂದ ಚಿಣ್ಣರ ಚಟುವಟಿಕೆಯಿ ಲ್ಲದೆ ಸ್ಥಗಿತಗೊಂಡಿದ್ದ ಅಂಗನವಾಡಿ ಕೇಂದ್ರವು, ಇಂದು ಮತ್ತೆ ಪುನರಾಂಭಗೊಂಡಿದೆ. ಅಂಗನವಾಡಿ ಕೇಂದ್ರಗಳನ್ನು ಸ್ವಚ್ಛಗೊಳಿಸಿ, ಗ್ರಾಮ ಪಂಚಾಯಿತಿ ವತಿಯಿಂದ ಸ್ಯಾನಿಟೈಸ್ ಮಾಡಲಾಗಿತ್ತು. ಅಂಗನ ವಾಡಿ ಕೇಂದ್ರವನ್ನು ಬಾಳೆಕಂಬ, ಮಾವಿನ ತೋರಣ ಹಾಗೂ ಬಲೂನುಗಳಿಂದ ಶೃಂಗರಿಸಿ, ಆವರಣದಲ್ಲಿ ರಂಗೋಲಿ ಹಾಕಿ ಚಿಣ್ಣರ ಸ್ವಾಗತಕ್ಕೆ ಸಿದ್ಧತೆ ಮಾಡಿದ್ದರು. ಗ್ರಾಮದ ಅತಿಥಿಗಳು ಹಾಗೂ ಅಂಗನವಾಡಿ ಕಾರ್ಯ ಕರ್ತರು ಪೋಷಕರಿಂದ ಮಕ್ಕಳ ಮೇಲೆ ಹೂವು ಹಾಕಿ ಸ್ವಾಗತ ಮಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ.ನ ಸದಸ್ಯರಾದ ಮರಕುಂಟಿ ಮಂಜಣ್ಣ, ಹಂಚಿನಮನೆ ಚೇತನ್ಕುಮಾರ್, ಶ್ರೀಮತಿ ಲತಾ, ತಾಲ್ಲೂಕು ಕ.ಸಾ.ಪ. ಮಾಜಿ ನಿರ್ದೇಶಕ ಎಂ.ಷಡಕ್ಷರಪ್ಪ, ಅಂಗನವಾಡಿ ಸಹಾಯಕಿ ಮಮತಾ, ಪೋಷಕರು ಮತ್ತಿತರರು ಹಾಜರಿದ್ದರು. ಹಳ್ಳಿಕೇರಿ ಪ್ರಕಾಶ್ ಮಕ್ಕಳಿಗೆ ಸಿಹಿ ನೀಡಿ ಮಕ್ಕಳೊಂದಿಗೆ ಸಂಭ್ರಮಿಸಿದರು.