ದಾವಣಗೆರೆ, ಜು.11- ಶೀಘ್ರವೇ ಬ್ರಹ್ಮರ್ಷಿ ಆರ್ಯ ಈಡಿಗ ಅಭಿವೃದ್ಧಿ ನಿಗಮ ಮಂಡಳಿ ಸ್ಥಾಪನೆ ಮಾಡುವಂತೆ ಸಮಾಜದ ಗುರುಗಳಾದ ಶ್ರೀ ಪ್ರಣವಾನಂದ ಸ್ವಾಮೀಜಿ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ನಿನ್ನೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಡಿಗ ಸಮಾಜವನ್ನು ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡುವಂತೆ ಮನವಿ ಮಾಡಿದ ಶ್ರೀಗಳು, ಈಡಿಗ ಸಮುದಾಯದವರು ತಮ್ಮ ಕುಲಕಸುಬು ಸೇಂದಿ ಇಳಿಸುವುದು ಮತ್ತು ಮಾರಾಟ ಮಾಡುವುದನ್ನು ನಿಲ್ಲಿಸಿದ ಮೇಲೆ ಸಂಕಷ್ಟಕ್ಕೀಡಾಗಿದ್ದು, ಬೀದಿಗೆ ಬರುವಂತಾಗಿದೆ ಎಂದರು.
80 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೆೋಂದಿರುವ ಈಡಿಗ ಜನಾಂಗವನ್ನು ಪ್ರತಿನಿಧಿಸುವ ಏಳು ಜನ ಶಾಸಕರಿದ್ದರೂ ಸಹ ಸಚಿವ ಸಂಪುಟದಲ್ಲಿ ಮಂತ್ರಿ ಭಾಗ್ಯ ದೆೋರೆಯದಿರುವುದು ವಿಷಾದದ ಸಂಗತಿಯಾಗಿದೆ. ಸಮಾಜಕ್ಕೆ ನ್ಯಾಯ ಸಿಗಬೇಕಾದರೆ ಈಡಿಗ ಸಮುದಾಯದ ಶಾಸಕರಿಗೆ ಪ್ರಾತಿನಿಧ್ಯತೆ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿರುವ ಈಚಲು ವನಗಳನ್ನು ಸ್ವಾಧೀನಕ್ಕೆ ಪಡೆದು ಸಮುದಾಯದ ವರಿಗೆ ಕೃಷಿ ಚಟುವಟಿಕೆಗಳನ್ನು ನಡೆಸಲು ಅನುವು ಮಾಡಿಕೆೋಡಬೇಕು. ಎಂಎಸ್ಐಎಲ್ನಲ್ಲಿ ಶೇ 50 ರಷ್ಟು ಕೆಲಸದಲ್ಲಿ ಮೀಸಲಾತಿ ಕಲ್ಪಿಸುವಂತೆ ಆಗ್ರಹಿಸಿದರು.
ಸಮುದಾಯದ ಅಭಿವೃದ್ಧಿ, ರಾಜಕೀಯ ಪ್ರಾತಿನಿಧ್ಯತೆ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಚರ್ಚಿಸಲು ಹೇಮಕೂಟದಲ್ಲಿ ಇದೇ ದಿನಾಂಕ 25 ರಂದು ಚಿಂತನ-ಮಂಥನ ಸಭೆ ಕರೆಯಲಾಗಿದೆ ಎಂದರು.