ಮಲೇಬೆನ್ನೂರು, ಜ. 12- ಇಲ್ಲಿನ ಪುರಸಭೆಗೆ ಪತಿ ಸರ್ಕಾರದ ನಾಮ ನಿರ್ದೇಶನ ಸದಸ್ಯರಾಗಿದ್ದರೆ ಪತ್ನಿ ಮೊನ್ನೆ ನಡೆದ ಚುನಾವಣೆಯಲ್ಲಿ ಅಧಿಕ ಮತಗಳಿಂದ ಗೆದ್ದು ಪುರಸಭೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಬಿಜೆಪಿ ಕಾರ್ಯಕರ್ತ ಪಿ.ಆರ್. ರಾಜು ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದ ನಂತರ ಇಲ್ಲಿನ ಪುರಸಭೆಗೆ ನಾಮಿನಿ ಸದಸ್ಯರಾಗಿ ನೇಮಕಗೊಂಡಿದ್ದರು.
ಡಿ. 27ರಂದು ನಡೆದ ಪುರಸಭೆ ಚುನಾವಣೆಯಲ್ಲಿ ಪಿ.ಆರ್. ರಾಜು ಅವರ ಪತ್ನಿ ಶ್ರೀಮತಿ ಸುಧಾ ಅವರು 8ನೇ ವಾರ್ಡಿಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ದಿಸಿ ಆಯ್ಕೆಯಾಗಿದ್ದಾರೆ.
ಪತಿ-ಪತ್ನಿ ಇಬ್ಬರೂ ಪುರಸಭೆಯಲ್ಲಿ ಏಕಕಾಲಕ್ಕೆ ಸದಸ್ಯರಾಗುವ ಮೂಲಕ ಗಮನ ಸೆಳೆದಿದ್ದಾರೆ.
ಪಿ.ಆರ್. ರಾಜು ಅವರು ಈ ಹಿಂದೆ ಮಲೇಬೆನ್ನೂರು ಗ್ರಾ.ಪಂ. ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಇನ್ನೊಂದು ವಿಶೇಷ : ಪುರಸಭೆಯ ಮತ್ತೋರ್ವ ನಾಮಿನಿ ಸದಸ್ಯರಾಗಿರುವ ಗೌಡ್ರ ಮಂಜಣ್ಣ ಅವರು ಪುರಸಭೆ ಚುನಾವಣೆಯಲ್ಲಿ 6ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.
ಅದೇ ರೀತಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿ ಸದಸ್ಯರಾಗಿರುವ ಬಿ. ಮಂಜುನಾಥ್ ಅವರು ಪುರಸಭೆ ಚುನಾವಣೆಯಲ್ಲಿ 18ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲ್ಲುವ ಮೂಲಕ ಪುರಸಭೆಯನ್ನು ಪ್ರವೇಶಿಸಿದ್ದಾರೆ.