ದಾವಣಗೆರೆ, ಏ.8- ಲೋಕಸಭಾ ಚುನಾವಣೆಯಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವಕುಮಾರ್ ಒಡೆಯರ್ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹಾಗೂ ಕ್ಷೇತ್ರದ ಎಲ್ಲ ಶಾಸಕರ ಅಭಿ ಪ್ರಾಯ ಸಂಗ್ರಹಿಸಿ, ಕ್ಷೇತ್ರದ 350 ಹಳ್ಳಿ ಸುತ್ತಿ, ಕಾಂಗ್ರೆಸ್ ಟಿಕೆಟ್‌ಗೆ ಪ್ರಯತ್ನಿಸಿದ್ದೆ. ಆದರೆ, ಪಕ್ಷದ ವರಿಷ್ಠರು ಡಾ.ಪ್ರಭಾ ಮಲ್ಲಿಕಾ ರ್ಜುನ್ ಅವರಿಗೆ ಅವಕಾಶ ನೀಡಿರು ವುದರಿಂದ ಅವರ ಗೆಲುವಿಗಾಗಿ, ಪಕ್ಷದ ಕಾರ್ಯ ಕರ್ತರು ಮತ್ತು ಬೆಂಬಲಿಗರೊಂದಿಗೆ ಚುನಾವಣಾ ಪ್ರಚಾರ ನಡೆಸಲಾ ಗುವುದು ಎಂದು ಹೇಳಿದರು.
1996ರಿಂದ ಈವರೆಗೂ ಬಿಜೆಪಿ ಅಭ್ಯರ್ಥಿಗಳೇ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಬಾರಿ ಕ್ಷೇತ್ರದ ಮತದಾರರು ಬದಲಾವಣೆ ಬಯಸಿದ್ದು, ಅಭ್ಯರ್ಥಿ ಹೋದ ಕಡೆಯಲೆಲ್ಲಾ ಅದ್ಧೂರಿ ಸ್ವಾಗತ ದೊರೆಯುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಈ ಸಲ ಕಾಂಗ್ರೆಸ್ ಬಾವುಟ ಹಾರಿಸುತ್ತೇವೆ ಎಂದರು.
ನಮ್ಮ ತಂದೆ ಚನ್ನಯ್ಯ ಒಡೆಯರ್‌ಗೆ ಅನ್ಯಾಯವಾಗಿದೆ ಎನ್ನುವುದು ವಿನಯ್‌ಕುಮಾರ್ ಅವರ ವೈಯಕ್ತಿಕ ಅಭಿಪ್ರಾಯ ಎಂದ ಶಿವಕುಮಾರ್ ಒಡೆಯರ್, ಕಾಂಗ್ರೆಸ್ ಪಕ್ಷದಿಂದ ಮತ್ತು ನಾಯ ಕರಿಂದ ಯಾವುದೇ ಅನ್ಯಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಬಿ.ಎಚ್. ಪರಶುರಾಮಪ್ಪ, ಮುಖಂಡರಾದ ಎಸ್.ಎಸ್. ಗಿರೀಶ್, ನವೀನ್ ನಿಬಗೋಡ್, ಶಿವಕುಮಾರ್ ಹನು ಮಂತಪ್ಪ, ಮಹಾಸ್ವಾಮಿ, ಬೂದಾಳು ಮಂಜಪ್ಪ, ಪಿ.ಬಿ. ಚಂದ್ರಪ್ಪ ಇದ್ದರು.