ದಾವಣಗೆರೆ, ಮಾ. 17- ದಾವಣಗೆರೆ ಕ್ರಿಕೆಟ್ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ಲಿವರೇಜ್ ಕಂಪನಿಯ ಅತ್ಯಾಧುನಿಕ ಬೋಲಿಂಗ್ ಮಿಷನ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಯಂತ್ರಕ್ಕೆ ಬಾಲ್ ಹಾಕುವ ಮೂಲಕ ಚಾಲನೆ ನೀಡಿದರು.
ಕ್ರಿಕೆಟ್ ಕಲಿಯುವ ಹಾಗೂ ಆಸಕ್ತ ಮಕ್ಕಳಿಗೆ ಬೌಲಿಂಗ್ ಮಷಿನ್ ಬಳಸಿ ಬ್ಯಾಟಿಂಗ್ ಕಲಿಕೆಗೆ ಅನುಕೂಲ ಕಲ್ಪಸಲಾಗುವುದು ಎಂದು ಕ್ರಿಕೆಟ್ ಕೋಚ್ ತಿಮ್ಮೇಶ್ ಹೇಳಿದರು.
ಈ ಸಂದರ್ಭದಲ್ಲಿ ಅಕಾಡೆಮಿ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮೇಯರ್ ವಿನಾಯಕ ಪೈಲ್ವಾನ್, ಪಾಲಿಕೆ ಸದಸ್ಯರಾದ ಎ. ನಾಗರಾಜ್, ಗಡಿಗುಡಾಳ್ ಮಂಜುನಾಥ್, ಕೆ. ಚಮನ್ ಸಾಬ್, ಮುಖಂಡರಾದ ಗಣೇಶ್ ಹುಲ್ಮನಿ, ಉಮೇಶ್, ಗೋಪಾಲಕೃಷ್ಣ, ರಮೇಶ ನಾಯ್ಕ, ಬಿ. ಬಸವರಾಜ್, ಉಮೇಶ್ ಸಿರಿಗೆರೆ, ತಿಪ್ಪೇಶ್, ಮುರುಳೀಧರ, ಅನಿಲ್ ಸೇರಿದಂತೆ ಅನೇಕರಿದ್ದರು.