ವಿಯಟ್ನಾಂನಲ್ಲಿ ನಾಳಿನ ಅಂತರ ರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆ

ವಿಯಟ್ನಾಂನಲ್ಲಿ ನಾಳಿನ ಅಂತರ ರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆ

ದಾವಣಗೆರೆ, ಜೂ.9- ವಿಯಟ್ನಾಂ ನ `ಹೊಚಿಮಿನ್ ನಗರದ ವಿ ಯೋಗ ವರ್ಲ್ಡ್‌’ ಯೋಗ ಸ್ಟುಡಿಯೋ ಮತ್ತು `ಏವಿಯಾ’ – ಅಷ್ಟಾಂಗ ವಿನ್ಯಾಸ ಅಂತರರಾಷ್ಟ್ರೀಯ ಯೋಗ ಅಕಾಡೆಮಿ ಮತ್ತು ನಮನ ಅಕಾಡೆಮಿ ವತಿಯಿಂದ ಫಸ್ಟ್ ಕಾನ್ಫರೆನ್ಸ್ ಸೆಂಟರ್‌ನಲ್ಲಿ ನಾಡಿದ್ದು ದಿನಾಂಕ 11 ರಂದು ವಿಶ್ವ ಯೋಗ ದಿನದ ಪ್ರಯುಕ್ತ ನಡೆಯಲಿರುವ ಅಂತರರಾಷ್ಟ್ರೀಯ ಯೋಗ ಟ್ಯಾಲೆಂಟ್ ಶೋ ಯೋಗ ಸ್ಪರ್ಧೆ ಹಾಗೂ ಕಲ್ಚರಲ್ ಎಕ್ಸ್‌ಚೇಂಜ್ ಕಾರ್ಯಕ್ರಮದಲ್ಲಿ ಭಾರತದ ರಾಷ್ಟ್ರಮಟ್ಟದ ಯೋಗ ಪಟು ಕು. ನೇಹ ಕೂರ್ಸೆ, ಚಿ. ಕು. ರಿಷಿಕ್ ಕೆ.ಎಸ್. ಸಾಗರ್, ಜ್ಯೋತಿಶ್ರೀ ಬಸವರಾಜ್, ಪಂಚಲಿಂಗಪ್ಪ ಕವಳೂರು, ಉಮೇಶ್ವರಯ್ಯ ಅಂತರರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಗೆ ಆಯ್ಕೆಯಾಗಿ ಭಾರತದಿಂದ ಪ್ರತಿನಿಧಿಸುತ್ತಿದ್ದಾರೆ ಎಂದು ಭಾರತದ ಯೋಗ ಕೋಚ್ ತೀರ್ಥರಾಜ್ ಹೋಲೂರ್ ತಿಳಿಸಿದ್ದಾರೆ. 

ಸ್ಥಳೀಯ ಡಾ.ಎಸ್.ಎಸ್. ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ಆರನೇ ತರಗತಿ ವಿದ್ಯಾರ್ಥಿ ರಿಷಿಕ್ ಕೆ.ಎಸ್. ಸಾಗರ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಆಯ್ಕೆಗೊಂಡಿರುವುದಕ್ಕೆ ಯೋಗ ಪರಿವಾರದ ಪ್ರಮುಖರು ಮತ್ತು ಕೈಗಾರಿಕಾ ಉದ್ಯಮಿಗಳಾದ  ಎಸ್.ಎಸ್. ಗಣೇಶ್ ಮತ್ತು ಶಾಮನೂರು ಅಭಿಜಿತ್ ಮತ್ತು ಯೋಗ ಪರಿವಾರದ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದರು.

error: Content is protected !!