50 ರಿಂದ 60 ವರ್ಷದ ವ್ಯಕ್ತಿಗಳಿಗೆ ಉಚಿತವಾಗಿ ಕೋವಿಡ್ ತಪಾಸಣೆ

ಹರಿಹರ ನಗರಸಭೆ ಪೌರಾಯುಕ್ತರಾದ ಲಕ್ಷ್ಮಿ

ಹರಿಹರ,ಆ. 1- ಬಿ.ಪಿ. ಅಸ್ತಮಾ, ಸಕ್ಕರೆ ಸೇರಿದಂತೆ ಹಲವಾರು ಕಾಯಿಲೆ ಯಿಂದ ಬಳಲುತ್ತಿರುವ 50 ರಿಂದ 60 ವರ್ಷದ ವ್ಯಕ್ತಿಗಳಿಗೆ ಉಚಿತವಾಗಿ ಕೋವಿಡ್ ತಪಾಸಣೆ ಮಾಡಲಾಗುತ್ತದೆ. ಇದನ್ನು ನಗರದ ಸಾರ್ವ ಜನಿಕರು ಸದುಪಯೋಗ ಪಡಿಸಿಕೊಳ್ಳಲು ಪೌರಾಯುಕ್ತರಾದ ಎಸ್. ಲಕ್ಷ್ಮಿ ಹೇಳಿದರು.

ನಗರದ 9 ನೇ ವಾರ್ಡ್ ಹೊಸಭರಂಪುರ ಬಡಾವಣೆಯ ಗ್ರಾಮದೇವತೆ ದೇವಸ್ಥಾನದ ಮುಂಭಾಗದಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಕೊರೊನಾ ತಪಾಸಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕೊರೊನಾ ರೋಗವು ದಿನದಿಂದ ದಿನಕ್ಕೆ ಹೆಚ್ಚು  ವ್ಯಕ್ತಿಗಳಿಗೆ ಹರಡುತ್ತಿದೆ. ಇದನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ತಡೆಯಲು ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಸಾರ್ವಜನಿಕರು ಇಂತಹ ಯೋಜನೆಗಳನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಉತ್ತಮ ಆರೋಗ್ಯ ವಂತರಾಗಿ ಬಾಳಬೇಕು ಎಂದು ಹೇಳಿದರು.

ಪ್ರತಿ ದಿನ ಒಂದೊಂದು ಬಡಾವಣೆಗಳಲ್ಲಿ ಆರೋಗ್ಯ ತಪಾಸಣೆ ಮಾಡಲಾಗುತ್ತದೆ.  60 ವರ್ಷಗಳ ಮೇಲ್ಪಟ್ಟವರು 3735 ಒಟ್ಟು ವ್ಯಕ್ತಿಗಳು ಇದ್ದು,  ಈಗಾಗಲೇ 26 ಅಸ್ತಮಾ, 8 ಕ್ಯಾನ್ಸರ್, 95 ಹಾರ್ಟ್, 7 ಏಡ್ಸ್, 30 ಥೈರಾಯ್ಡ್  ಕಾಯಿಲೆ ಇರುವ ವ್ಯಕ್ತಿಗಳಿಗೆ ತಪಾಸಣೆ ಮಾಡಲಾಗಿದೆ ಎಂದು ಹೇಳಿದರು.

ಇಂದು 9 ನೇ ವಾರ್ಡ್ ನಲ್ಲಿ 180 ಕ್ಕೂ ಹೆಚ್ಚು ಸಾರ್ವಜನಿಕರಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ. ಬಿ. ರಾಮಚಂದ್ರಪ್ಪ, ಜಿಲ್ಲಾ ಮಲೇರಿಯಾ ಅಧಿಕಾರಿ ಕೆ. ನಟರಾಜ್, ನಗರಸಭೆ ಸದಸ್ಯೆ ನಿಂಬಕ್ಕ ಚಂದಾಪುರ್,  ಆರೋಗ್ಯ ಇಲಾಖೆಯ ಉಮ್ಮಣ್ಣ, ಸುಧಾ ಸಲಾಕೆ, ಸಂತೋಷ, ಸ್ವಾಮಿ, ನಾಯ್ಕ್, ನಗರಸಭೆ ಅಣ್ಣಪ್ಪ, ಕೋಡಿ ಭೀಮರಾಯ್, ಅಂಬಣ್ಣ, ಜಿ.ಕೆ. ಪ್ರವೀಣ್, ಮಹೇಶ್ ಕೊಡಬಾಳ,  ಕೆ. ಬಿ. ಬಸವರಾಜಪ್ಪ, ಅಂಗನವಾಡಿ ಶಿಕ್ಷಕಿ ಲಲಿತಾ, ರೂಪಾ ಕಾಟ್ವೆ  ಪ್ರದೀಪ್ ಹಾಗೂ ಇತರರು ಹಾಜರಿದ್ದರು.

error: Content is protected !!