ಚನ್ನಗಿರಿ : ನೀರಗಂಟಿಗಳಿಗೆ ಕೂಡಲೇ ವೇತನ ಪಾವತಿಸಲು ತೇಜಸ್ವಿ ಪಟೇಲ್ ಒತ್ತಾಯ

ಚನ್ನಗಿರಿ, ಮಾ.22- ತಾಲ್ಲೂಕಿನ ವ್ಯಾಪ್ತಿಗೆ ಬರುವ ಭದ್ರಾ ಯೋಜನೆಯ ತ್ಯಾವಣಿಗೆ ಉಪವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸು.60 ಜನ ನೀರಗಂಟಿಗಳಿಗೆ ನಾಲ್ಕು ತಿಂಗಳಿ ನಿಂದಲೂ ವೇತನ ನೀಡದಿರುವುದು ಸರಿಯಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಭದ್ರಾ ಯೋಜನಾ ಮಟ್ಟದ ನೀರು ಬಳಕೆದಾರರ ಸಹಕಾರ ಸಂಘಗಳ ಮಹಾಮಂಡಳದ ನಿರ್ದೇಶಕ ತೇಜಸ್ವಿ ಪಟೇಲ್ ಒತ್ತಾಯಿಸಿದ್ದಾರೆ.

ಹಗಲು, ಇರಳು ಎನ್ನದೇ ಕಷ್ಟಪಟ್ಟು ಕೆಲಸ ನಿರ್ವಹಿಸುವ ಈ ಕೆಲಸಗಾರರಿಗೆ  ವೇತನ ಪಾವತಿ ವಿಳಂಬ ಕುರಿತಂತೆ, ಸಿಇ ಮತ್ತು ಎಸ್‌ಇಯವರಿಗೆ ದೂರವಾಣಿ ಕರೆ ಮಾಡಿದರೆ  ಅವರು ಸ್ವೀಕರಿ ಸುತ್ತಿಲ್ಲ.  ಅರ್ಹ ಮೂಲಗಳ  ಪ್ರಕಾರ ನೀರುಗಂಟಿ ಗಳಿಗೆ ಕೂಡಲೇ ವೇತನ ಸಿಗುವುದು ಕಷ್ಟಸಾಧ್ಯ. ಹಾಗಾಗಿ ಲೋಕಸಭೆ ಚುನಾವಣಾ ಕಾರ್ಯದಲ್ಲಿ ನಿರತ ಸಿಬ್ಬಂದಿ ವಶಪಡಿಸಿಕೊಳ್ಳುವ ಅಕ್ರಮ ಹಣದಲ್ಲಾದರೂ ವೇತನ  ನೀಡಿ, ನಂತರ  ಇಲಾಖೆಗಳು ಮರುಹೊಂದಾಣಿಕೆ ಮಾಡಿಕೊಳ್ಳ ಬೇಕು ಎಂದು ಅವರು ಒತ್ತಾಯಿಸಿದ್ದಾರೆ.

error: Content is protected !!