ಹರಿಹರ, ನ.28- ನಗರದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಸಾರ್ವ ಜನಿಕರು ಅನೇಕ ದೂರುಗಳನ್ನು ನೀಡಿದ್ದರಿಂದ ಸ್ಥಳ ಪರಿಶೀಲನೆ ನಡೆಸಿ, ಎಲ್ಲಿ ವ್ಯತ್ಯಾಸಗಳು ಆಗಿವೆ ಅವುಗಳನ್ನು ಸರಿಪಡಿಸುವುದಕ್ಕೆ ಆಡಳಿತ ವೈದ್ಯಾಧಿಕಾರಿ ಡಾ. ಹನುಮಾನಾಯ್ಕ್ ಅವರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾ ನೋಡಲ್ ಅಧಿಕಾರಿ ನಟರಾಜ್ ತಿಳಿಸಿದ್ದಾರೆ.
ಇಲ್ಲಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಯುತ್ತಿರುವ ಅವ್ಯವಸ್ಥೆ ಮತ್ತು ಅಕ್ರಮಗಳ ಬಗ್ಗೆ ಸಾರ್ವಜನಿಕರು ನೀಡಿರುವ ದೂರಿನ ಮೇರೆಗೆ ಆಸ್ಪತ್ರೆಯಲ್ಲಿ ಪರಿಶೀಲನೆ ನಡೆಸಿ ನಂತರದಲ್ಲಿ ಅವರು, ಪತ್ರಕರ್ತರೊಂದಿಗೆ ಮಾತನಾಡಿದರು.
ಆಸ್ಪತ್ರೆಯ ವಾರ್ಷಿಕ ಲೆಕ್ಕ ಪತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಅಕ್ರಮ ನಡೆದಿದೆ ಎನ್ನ ಲಾಗುತ್ತದೆ. ಇದರ ಬಗ್ಗೆ ಇನ್ನಷ್ಟು ದಾಖಲೆಗ ಳನ್ನು ಪರಿಶೀಲನೆ ನಡೆಸಿ ಅಕ್ರಮವೆಸಗಿದ್ದು ಕಂಡುಬಂದರೆ ಹಿರಿಯ ಅಧಿಕಾರಿಗಳ ಗಮ ನಕ್ಕೆ ತಂದು ಸೂಕ್ತ ಕ್ರಮಗಳನ್ನು ಕೈಗೊಳ್ಳ ಲಾಗುತ್ತದೆ. ಆಸ್ಪತ್ರೆಯಲ್ಲಿ ವಿದ್ಯುತ್ ಕೈ ಕೊಟ್ಟ ಸಮಯದಲ್ಲಿ ಜನರೇಟರನ್ನು ಆನ್ ಮಾಡದೇ ಇರುವುದು, ಇದರಿಂದಾಗಿ ರೋಗಿಗಳು ಕತ್ತಲಿ ನಲ್ಲಿ ಚಿಕಿತ್ಸೆ ಪಡೆಯುವಂತಾಗಿದೆ ಎನ್ನಲಾಗಿದೆ. ಕಿಡ್ನಿ ಡಯಾಲಿಸಿಸ್ ಚಿಕಿತ್ಸೆ ನೀಡುವುದಕ್ಕೆ ಯಂತ್ರಗಳು ದುರಸ್ತಿಯಲ್ಲಿದ್ದು, ಅವನ್ನು ಸರಿಪಡಿಸಲು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಕಿಡ್ನಿ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಸಾಕಷ್ಟು ಪ್ರಮಾಣದಲ್ಲಿ ತೊಂದರೆಗಳಾಗು ತ್ತಿದ್ದು ಸರಿಪಡಿಸುವುದಕ್ಕೆ ಸೂಚಿಸಲಾಗಿದೆ. ಜನರೇಟರ್ ಅವ್ಯವಸ್ಥೆಯಾಗದಂತೆ ಸರಿಯಾಗಿ ಬಳಸುವುದಕ್ಕೆ ತಿಳಿಸಲಾಗಿದೆ ಎಂದು ಅವರು ಹೇಳಿದರು.
ಲ್ಯಾಬ್ ಕೊಠಡಿಯಲ್ಲಿ ರೋಗಿಗಳಿಗೆ ಸರಿಯಾಗಿ ತಿಳಿಯುವಂತೆ ಯಾವ ರೋಗಕ್ಕೆ ಯಾವ ರೀತಿಯಲ್ಲಿ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ದೊಡ್ಡ ಪೋಸ್ಟರ್ ಹಚ್ಚುವುದಕ್ಕೆ ಮತ್ತು ಪ್ರತಿನಿತ್ಯವೂ ಎಷ್ಟು ಜನರನ್ನು ರಕ್ತ ತಪಾಸಣೆ ಮಾಡಲಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಪುಸ್ತಕದಲ್ಲಿ ಸರಿಯಾಗಿ ದಾಖಲು ಮಾಡಬೇಕು. ಆಸ್ಪತ್ರೆಯಲ್ಲಿ ಸ್ವಚ್ಚತೆ ಇಲ್ಲದಿದ್ದರ ಬಗ್ಗೆ ಕಳೆದ ಸಾರಿ ಆಗಮಿಸಿದಾಗ ಸೂಚಿಸಲಾಗಿತ್ತು. ಆದಾಗ್ಯೂ ಸ್ವಚ್ಚತೆ ಮಾಡುವಲ್ಲಿ ವಿಫಲತೆ ಕಂಡುಬಂದಿದೆ ಮತ್ತು ಸರಿಯಾದ ರೀತಿಯಲ್ಲಿ ನೀರು ಸರಬರಾಜು ಇಲ್ಲದೇ ಇರುವುದನ್ನು ಆದಷ್ಟು ಬೇಗ ನಿರಂತರವಾಗಿ ನೀರು ಇರುವಂತೆ ವ್ಯವಸ್ಥೆ ಮಾಡುವುದಕ್ಕೆ ಸೂಚನೆ ನೀಡಲಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯಾಧಿ ಕಾರಿ ಡಾ ಹನುಮನಾಯ್ಕ್, ಲ್ಯಾಬ್ ಟೆಕ್ನೀಷಿ ಯನ್ ಆಶ್ರಫ್ ಅಲಿ ಇತರರು ಹಾಜರಿದ್ದರು.