ಮಲೇಬೆನ್ನೂರಿನಲ್ಲಿ ಮೇ 14ಕ್ಕೆ ನೂತನ ದೇವಾಲಯ ಲೋಕಾರ್ಪಣೆ

ಮಲೇಬೆನ್ನೂರು, ಏ.12- ಪಟ್ಟಣದ ಹೊರವಲಯದಲ್ಲಿ ನೂತ ನವಾಗಿ ನಿರ್ಮಾಣಗೊಂಡಿರುವ ಶ್ರೀ ವೀರಭದ್ರೇಶ್ವರ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮವನ್ನು ಕೊರೊನಾ ಹಿನ್ನೆಲೆಯಲ್ಲಿ ಮೇ 14 ರಂದು ಸರಳವಾಗಿ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಸದಸ್ಯ ಹಾಗೂ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ ತಿಳಿಸಿದರು.

ಇಂದು ಮಲೇಬೆನ್ನೂರು-ಕುಂಬಳೂರು ಮಧ್ಯೆ ರಾಜ್ಯ ಹೆದ್ದಾರಿಯಲ್ಲಿರುವ ನೂತನ ದೇವಾಲಯದಲ್ಲಿ ಕರೆದಿದ್ದ ಸುದ್ದಿಗೋ ಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ತಿಂಗಳು ಮಾರ್ಚ್ 7 ರಂದು ನಡೆದ ಪುರ್ವಭಾವಿ ಸಭೆ ಯಲ್ಲಿ ಮೇ 14, 15 ಮತ್ತು 16 ರಂದು ವಿವಿಧ ಕಾರ್ಯಕ್ರಮಗಳ ಮೂಲಕ ದೇವಸ್ಥಾನವನ್ನು ಲೋಕಾರ್ಪಣೆ ಮಾಡಲು ತೀರ್ಮಾನಿಸಲಾಗಿತ್ತು.

ಆದರೆ ಕೊರೊನಾ ಪ್ರತಿ ದಿನ ಹೆಚ್ಚಾಗುತ್ತಿ ರುವುದರಿಂದ ಸರ್ಕಾರದ ಸೂಚನೆಯಂತೆ 3 ದಿನಗಳ ಕಾರ್ಯಕ್ರಮಗಳನ್ನು ರದ್ದು ಮಾಡಿ, ಮೇ 14 ರಂದು ರಂಭಾಪುರಿ ಜಗದ್ಗುರುಗಳ ಸಮ್ಮುಖದಲ್ಲಿ ನೂತನ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ದೇವಾಲಯ ಲೋಕಾರ್ಪಣೆ, ಕಳಾಸರೋಹಣವನ್ನು ಮಾತ್ರ ಅತ್ಯಂತ ಸರಳವಾಗಿ ಹಮ್ಮಿಕೊಂಡಿದ್ದು, ಸಾಮೂಹಿಕ ವಿವಾಹ, ಸಿ.ಎಂ. ಹಾಗೂ ಮಾಜಿ ಸಿ.ಎಂ., ವಿವಿಧ ಮಠಾಧೀಶ್ವರ ಕಾರ್ಯಕ್ರಮಗಳನ್ನು ರದ್ದು ಪಡಿಸಲಾಗಿದೆ ಎಂದರು.

ಪುರಪ್ರವೇಶ: ಇದೇ ದಿನಾಂಕ 15ರ ಗುರುವಾರ ಬೆಳಿಗ್ಗೆ 10.30 ರಿಂದ ಮಲೇಬೆ ನ್ನೂರಿನ ನೀರಾವರಿ ಇಲಾಖೆ ಆವರಣದಲ್ಲಿರುವ ಶ್ರೀ ಚೌಡೇಶ್ವರಿ ದೇವಸ್ಥಾನದಿಂದ ನೂತನ ಶಿಲಾಮೂರ್ತಿಗಳಾದ ಶ್ರೀ ವೀರಭದ್ರೇಶ್ವರ, ಮಹಾಗಣಪತಿ, ಭದ್ರಕಾಳಿ, ಕಾಲಭೈರವ ಹಾಗೂ ನಾಗ ಪರಿವಾರದ ಪುರ ಪ್ರವೇಶವನ್ನು ಸಕಲ ವಾದ್ಯಗಳೊಂದಿಗೆ ಮಲೇಬೆನ್ನೂರು ಮತ್ತು ಕುಂಬಳೂರಿನ ರಾಜ ಬೀದಿಗಳಲ್ಲಿ ಮೆರವಣಿಗೆ ಮೂಲಕ ಹಮ್ಮಿಕೊಳ್ಳಲಾಗಿದೆ.

ಈ ಶಿಲಾಮೂರ್ತಿಗಳನ್ನು ಹೊನ್ನಾಳಿ ತಾಲ್ಲೂಕಿನ ಬೀರಗೊಂಡನಹಳ್ಳಿ ಗ್ರಾಮದ ಲೋಕೇಶ್ ಆಚಾರ್ ಮತ್ತು ಧನಂಜಯ ಆಚಾರ್ ಎಂಬುವವರು ಕೆತ್ತನೆ ಮಾಡಿದ್ದಾರೆ.

ಪುರ ಪ್ರವೇಶದ ನಂತರ ಶಿಲಾಮೂರ್ತಿಗಳನ್ನು ಗುರುವಾರ ಸಂಜೆ 5.30 ರಿಂದ ಮೇ 14 ರವರೆಗೂ ಜಲಾಧಿವಾಸ, ಕ್ಷೀರಾಧಿ ವಾಸ, ಧಾನ್ಯಾಧಿವಾಸ ಮತ್ತು ಪುಷ್ಪಾಧಿವಾಸ ಸೇರಿದಂತೆ ವಿವಿಧ ಧಾರ್ಮಿಕ ವಿಧಿ- ವಿಧಾನಗಳನ್ನು ನೆರವೇರಿಸ ಲಾಗುವುದು ಎಂದು ಚಿದಾನಂದಪ್ಪ ತಿಳಿಸಿದರು. 

ಟ್ರಸ್ಟ್ ಕಮಿಟಿ ಅಧ್ಯಕ್ಷ ಬಿ. ಪಂಚಪ್ಪ, ಉಪಾಧ್ಯಕ್ಷ ಬಿ. ನಾಗೇಂದ್ರಪ್ಪ, ಟ್ರಸ್ಟಿಗಳಾದ ಕೆ. ವೃಷಭೇಂದ್ರಪ್ಪ, ಬಿ. ಶಂಭುಲಿಂಗಪ್ಪ, ಬಿ. ಉಮಾಶಂಕರ್, ಬಿ. ವೀರೇಶ್, ಬಿ.ವಿ. ರುದ್ರೇಶ್, ಎನ್.ಕೆ. ಬಸವರಾಜ್, ಬಿ.ಸಿ. ಸತೀಶ್, ಹೆಚ್.ಸಿ. ವಿಜಯಕುಮಾರ್, ಬಿ.ಎನ್. ಕಿರಣ್, ಬಟ್ಟೆ ಅಂಗಡಿ ವಿಶ್ವನಾಥ್, ಬಿ.ಎನ್. ಸಚ್ಚಿನ್ ಇನ್ನಿತರರು ಸುದ್ದಿಗೋಷ್ಠಿಯಲ್ಲಿದ್ದರು.

error: Content is protected !!