ಅಭಿವೃದ್ಧಿ ಕಾರ್ಯಗಳೇ ನನ್ನ ಕೈ ಹಿಡಿದವು

ಅಭಿವೃದ್ಧಿ ಕಾರ್ಯಗಳೇ ನನ್ನ ಕೈ ಹಿಡಿದವು

ಹರಿಹರದಲ್ಲಿ ಶಾಸಕ ಬಿ.ಪಿ. ಹರೀಶ್

ಹರಿಹರ, ಮೇ 15- ಹಿಂದೆ ತಾವು ಶಾಸಕರಾಗಿದ್ದ ಸಮಯದಲ್ಲಿ  ಕ್ಷೇತ್ರದಲ್ಲಿ, ಮತದಾರರು ನಿರೀಕ್ಷೆ ಮಾಡದೇ ಇರುವಷ್ಟು ಅಭಿವೃದ್ಧಿ  ಮಾಡಿದ್ದೇನೆ. ಆ ಕೆಲಸಗಳನ್ನು ಮೆಚ್ಚಿ ಮತ್ತೊಮ್ಮೆ ನನಗೆ ಆಶೀರ್ವಾದ ಮಾಡಿದ್ದಾರೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

ಮತದಾರರ ನಿರೀಕ್ಷೆಗೆ ತಕ್ಕಂತೆ ತಾಲ್ಲೂಕಿನ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ರಾಜ್ಯದಲ್ಲಿ ಮಾದರಿ ತಾಲ್ಲೂಕು ಮಾಡುವ ನಿಟ್ಟಿನಲ್ಲಿ ಹೆಜ್ಜೆಗಳನ್ನು ಹಾಕುವು ದಾಗಿ ಅವರು ಹೇಳಿದರು.  ಚುನಾವಣೆಯಲ್ಲಿ ಗೆದ್ದ ನಂತರ ನಗರದ ಮಾಜೇನಹಳ್ಳಿ ಊರಮ್ಮದೇವಿಗೆ ವಿಶೇಷ ಪೂಜೆ ಯನ್ನು ಸಲ್ಲಿಸಿ ನಂತರ ಹರೀಶ್ ಮಾತನಾಡಿದರು.

ನಾನು ಹಿಂದೆ   ಕ್ಷೇತ್ರದ ಶಾಸಕರಾಗಿದ್ದ ಸಮಯದಲ್ಲಿ ಹಲವಾರು ಕೋಟಿ ರೂಪಾಯಿ ಅನುದಾನವನ್ನು ತಂದು ಸಾಕಷ್ಟು ಪ್ರಮಾಣದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಕ್ಷೇತ್ರದ ಮತದಾರರ ಮನಸ್ಸನ್ನು ಗೆದ್ದಿದ್ದೆ. ಆದರೆ ಕಳೆದ ಬಾರಿ ಚುನಾವಣೆಯಲ್ಲಿ ಯಾವುದೋ ಒಂದು ಸಣ್ಣ ತಪ್ಪಾಗಿ ಕಡಿಮೆ ಮತಗಳ ಅಂತರದಿಂದ ಸೋಲುವಂತಾಗಿತ್ತು. ಆದರೆ ಈ ಬಾರಿ ಮತದಾರರು ನನಗೆ ಮತ್ತೊಮ್ಮೆ ಆಶೀರ್ವಾದ ಮಾಡಿದ್ದಾರೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಮಾತನಾಡಿ, ತಾಲ್ಲೂಕಿನ ಅಭಿವೃದ್ಧಿ ಕುಂಠಿತವಾಗಿದ್ದನ್ನು ಜನರು ಮನಗಂಡು  ಬಿ.ಪಿ. ಹರೀಶ್   ಗೆಲ್ಲಿಸುವ ಕಾರ್ಯವನ್ನು ಮಾಡಿದ್ದಾರೆ. ಆದರೆ ರಾಜ್ಯದಾದ್ಯಂತ ಪಕ್ಷಕ್ಕೆ ಹಿನ್ನಡೆ ಆಗಿದೆ. ಈ ತರಹ ಫಲಿತಾಂಶ ಬರುತ್ತದೆ ಎಂದು ನಿರೀಕ್ಷೆ ಮಾಡಿರಲಿಲ್ಲ.  ಮತದಾರರು ಕೊಟ್ಟಿರುವ ತೀರ್ಪನ್ನು ಸ್ವಾಗತಿಸಿ, ಮುಂದಿನ ದಿನಗಳಲ್ಲಿ ಎಲ್ಲಿ ತಪ್ಪಾಗಿದೆಯೋ ಅದನ್ನು ಸರಿಪಡಿಸಲು ಮುಂದಾಗುವ ನಿಟ್ಟಿನಲ್ಲಿ ಹೆಜ್ಜೆಗಳನ್ನು ಹಾಕಲಾಗುತ್ತದೆ ಎಂದರು.

ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್ ಮಾತನಾಡಿ, ತಾಲ್ಲೂಕಿನಲ್ಲಿ    ಹರೀಶ್‌ರನ್ನು ಗೆಲ್ಲಿಸುವ ಮೂಲಕ ಮತದಾರರು ತಮ್ಮ ಪ್ರಬುದ್ಧತೆಯನ್ನು ಮೆರೆದಿದ್ದಾರೆ  ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನಗರ ಬಿಜೆಪಿ ಅಧ್ಯಕ್ಷ ಅಜಿತ್ ಸಾವಂತ್, ಪ್ರಧಾನ ಕಾರ್ಯದರ್ಶಿ ಹೆಚ್. ಮಂಜಾನಾಯ್ಕ್, ತುಳಜಪ್ಪ ಭೂತೆ, ಗ್ರಾಮಾಂತರ ಘಟಕದ ಅಧ್ಯಕ್ಷ ಲಿಂಗರಾಜ್, ನಗರಸಭೆ ಸದಸ್ಯರಾದ ಅಶ್ವಿನಿ ಕೃಷ್ಣ, ವಿಜಯಕುಮಾರ್, ಹನುಮಂತಪ್ಪ, ರಜನಿಕಾಂತ್, ಮುಖಂಡರಾದ ಅರ್ಜುನ್ ಬಿ.ಪಿ. ಹರೀಶ್, ಬಾತಿ ಚಂದ್ರಶೇಖರ್, ರಾಜು ರೋಖಡೆ, ನಿರಂಜನ ದೀಟೂರು, ಗಂಗನಹರಸಿ ಉಮೇಶ್, ಚಂದ್ರಕಾಂತ, ಬಸವನಗೌಡ, ವೀರೇಶ್ ಅಜ್ಜಣ್ಣನವರ್, ನಾಗರಾಜ್ ಭಂಡಾರಿ, ಮಹಾಂತೇಶ್, ಕೊಂಡಜ್ಜಿ ರಾಘವೇಂದ್ರ, ಸಂತೋಷ ಗುಡಿಮನಿ, ಅಂಬುಜಾ ಪಿ. ರಾಜೊಳ್ಳಿ, ಆನಂದ ವಕೀಲ, ಸುನೀಲ್, ರವಿ ರಾಯ್ಕರ್, ವರಪ್ರಸಾದ್, ಅಶೋಕ ಕುಂಬಳೂರು, ಆಟೋ ರಾಜು, ಎನ್.ಇ. ಸುರೇಶ್, ಬೆಣ್ಣೆ ಸಿದ್ದೇಶ್, ಮಂಜುನಾಥ್ ಅಗಡಿ, ಪ್ರಕಾಶ್, ಪ್ರವೀಣ್ ಪವಾರ್, ರೂಪಾ, ಇತರರು ಹಾಜರಿದ್ದರು.

error: Content is protected !!