ಮೀಸಲಾತಿ ಬಚಾವೋದಿಂದ 68 ಕ್ಷೇತ್ರಗಳ ಮೇಲೆ ಪರಿಣಾಮ

ಮೀಸಲಾತಿ ಬಚಾವೋದಿಂದ 68 ಕ್ಷೇತ್ರಗಳ ಮೇಲೆ ಪರಿಣಾಮ

ಹೊನ್ನಾಳಿ ತಾಲ್ಲೂಕು ಬಂಜಾರ ಸಮಾಜದ ಮುಖಂಡ ಡಾ.ಈಶ್ವರನಾಯ್ಕ

ಹೊನ್ನಾಳಿ, ಮೇ 15- ರಾಜ್ಯ ಬಿಜೆಪಿ ಸರ್ಕಾರವು ಸಂವಿಧಾನದ ಆಶಯಗಳನ್ನು ದುರ್ಬಲಗೊಳಿಸಲು ನ್ಯಾ.ಸದಾಶಿವ ಆಯೋಗದ ವರದಿಯ ವಿಷಯಗಳಿಗೆ ಮುಂದಾಗಿದ್ದರಿಂದ ರಾಜ್ಯದ 68 ಕ್ಷೇತ್ರಗಳಲ್ಲಿ ಪರಿಣಾಮ ಬೀರುವಂತೆ ಸ್ವಾಭಿಮಾನಿ ಬಂಜಾರರು ಮುಂದಾಗಿರುವುದಾಗಿ ತಾಲ್ಲೂಕು ಬಂಜಾರ ಸಮಾಜದ ಮುಖಂಡ ಡಾ.ಈಶ್ವರನಾಯ್ಕ ಹೇಳಿದರು.

ಹೊನ್ನಾಳಿಯಲ್ಲಿ ಪತ್ರಿಕಾಗೋಷ್ಥಿಯಲ್ಲಿ  ಮಾತನಾಡಿದ ಅವರು, ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ 101 ಸಮುದಾಯಗಳ ನಡುವೆ ಶಾಶ್ವತ ದ್ವೇಷದ ಪರಿಣಾಮ ಬೀರುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿತ್ತೆಂದರು.

ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಬಿಜೆಪಿಗೆ ಹಿನ್ನಡೆಯಾಗು ವುದನ್ನು ಮರೆಮಾಚಲು ಒಳಮಿಸಲಾತಿಯ ದೊಡ್ಡ ಷಡ್ಯಂತರಕ್ಕೆ ಮುಂದಾಗಿತ್ತೆಂದರು ಹಾಗು ಸಮಾಜದ ಒತ್ತಾಸೆಯು ಸದಾಶಿವ ಆಯೋಗ ಯತಾವತ್ತಾಗಿ ಜಾರಿಗೆ ಮುಂದಾಗದಿರುವಂತೆ ಒತ್ತಾಯವಾಗಿದ್ದಿತು.

ದೇಶದ ಯಾವುದೇ ರಾಜ್ಯದಲ್ಲಿ ಒಳಮಿಸಲಾತಿ ಜಾರಿಗೊಳಿಸಿಲ್ಲ. ಕಾರಣ ಇದನ್ನು ಜಾರಿಗೊಳಿಸಲು ಸಂವಿಧಾನದಲ್ಲಿ ಅವಕಾಶಗಳಿಲ್ಲ ಎಂಬ ಸತ್ಯವು ಈ ಹಿಂದೆ ಆಂಧ್ರಪ್ರದೇಶಕ್ಕೆ ಸುಪ್ರೀಂ ಕೊರ್ಟ್ ಸ್ಪಷ್ಟ ತೀರ್ಪು ನೀಡಿದ್ದನ್ನು ಸ್ಮರಿಸಬಹುದಾಗಿದೆ ಎಂದರು.

ಈ ನಡುವೆ ಒಳ ಮೀಸಲಾತಿ ಜಾರಿಗೊಳಿಸಲು ಮುಂದಾಗುವುದಾದರೆ 7 ಜನರ ಸಂವಿಧಾನಿಕ ಪೀಠವನ್ನು ರಚಿಸಿ ಸಂವಿಧಾನಕ್ಕೆ ತಿದ್ದುಪಡಿ ತರುವ ಮೂಲಕ ಪ್ರಯತ್ನಿಸಬಹುದಾಗಿದೆ ಎಂದರು. ಕೆಳ ಸಮುದಾಯದ ಮತ ಪಡೆಯಲು ವಸ್ತುನಿಷ್ಠ ಅಧ್ಯಯನವಿಲ್ಲದೆ ಅಸಂವಿಧಾನಿಕ ಹಾಗು ಅವೈಜ್ಞಾನಿಕವಾಗಿ ಮೀಸಲಾತಿ ವರ್ಗೀಕರಿಸುವುದು ಸಂವಿಧಾನ ಬಾಹಿರ ಮತ್ತು ಸುಪ್ರೀಂ ಕೊರ್ಟ್ ತೀರ್ಪಿನ ಉಲ್ಲಂಘನೆ ಯಾಗಿರುತ್ತದೆ ಎಂದರು.

ಬಿಜೆಪಿಯ ಈ ಧೋರಣೆ ಖಂಡಿಸಿ ಕರ್ನಾಟಕ ಮೀಸಲಾತಿ ಒಕ್ಕೂಟವು ಪ್ರತಿಭಟನೆಗೆ ಕರೆ ನೀಡಿತ್ತು. ಈ ಹಿನ್ನಲೆಯಲ್ಲಿ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳು ರಾಜ್ಯವ್ಯಾಪಿ ಪ್ರತಿಭಟಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವ ವರದಿ ಹಿಂಪಡೆದು ಪರಿಶೀಲನೆ ನಡೆಸುವ ಒತ್ತಾಯವಾಗಿದ್ದರಿಂದ ಚುನಾವಣೆಯ ನಿರ್ಣಾಯಕದ  68 ಕ್ಷೇತ್ರಗಳಲ್ಲಿ ಪರಿಣಾಮವನ್ನು ಬಿಜೆಪಿ ಎದುರಿಸಿದೆ ಎಂದರು.

ಗೋಷ್ಠಿಯಲ್ಲಿ ರಾಜ್ಯ ಮೀಸಲಾತಿ ಸಂರಕ್ಷಣಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ರುದ್ರು ಪುನೀತ್, ಸಮಾಜದ ಮುಖಂಡರಾದ ತಿಮ್ಮಲಾಪುರ ಪ್ರಭುದೇವ ನಾಯ್ಕ, ಚನ್ನೇನಹಳ್ಳಿ ರಾಜಶೇಖರ್ ನಾಯ್ಕ, ನೆಲಹೊನ್ನಿಯ ಮಲ್ಲೇಶ ನಾಯ್ಕ, ಮುರುಳೀಧರ್, ಅವಿನಾಶ್, ತಿಮ್ಮೇಶ್, ಕಮ್ಮಾರಗಟ್ಟಿ ಸಚಿನ್ ಸೇರಿದಂತೆ ಇನ್ನಿತರರಿದ್ದರು.

error: Content is protected !!