ಶಾಲೆಗೆ ಕ್ರೀಡಾ ಸಾಮಗ್ರಿ ವಿತರಣೆ

ಮಲೇಬೆನ್ನೂರು, ನ.21- ಎಕ್ಕೆಗೊಂದಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಕ್ರೀಡಾ ಸಾಮಗ್ರಿಗಳಾದ ಫುಟ್‌ಬಾಲ್, ವಾಲಿಬಾಲ್, ಕ್ರಿಕೆಟ್ ಕಿಟ್, ಸ್ಕಿಪ್ಪಿಂಗ್ ರೋಪ್, ಟೆನ್ನಿಸ್ ಬಾಲ್, ಡೆಂಬಲ್ಸ್, ಬಾಸ್ಕೆಟ್ ಬಾಲ್. ಟೆನ್ನಿಕಾಟ್‌ ಅನ್ನು ನಿರ್ದೇಶಕರು ನೀಡಿದರು. ಶಿಕ್ಷಕರಾದ ಟಿ. ಹೆಚ್. ಹನುಮ ರೆಡ್ಡೇರ್, ದೈಹಿಕ ಶಿಕ್ಷಕ ಡಾ. ಲಕ್ಷ್ಮಣ, ನಾಗರಾಜ, ನಾಜಿನಿ ಬಾನು ಮತ್ತು ಧೂಳೇಹೊಳೆ ಶಾಲೆ ಶಿಕ್ಷಕ ಶರಣಕುಮಾರ ಹೆಗಡೆ ಈ ವೇಳೆ ಹಾಜರಿದ್ದರು.

error: Content is protected !!