ಟಿಎಪಿಸಿಎಂಎಸ್ ಚುನಾವಣೆ : 47 ನಾಮಪತ್ರ

ರಾಣೇಬೆನ್ನೂರು, ಅ.27- ಬ್ಯಾಡಗಿ ಪಟ್ಟಣ ದಲ್ಲಿ ಇತ್ತೀಚಿಗೆ ಶಾಲಾ ಕೊಠಡಿ ಅಡಿಪಾಯ ದಿಂದ ಬಿದ್ದು ಮೃತಪಟ್ಟ ಬಾಲಕನ ಮನೆಗೆ ತಾಲ್ಲೂಕಿನ ದೇವರಗುಡ್ಡದ ಮಾಲತೇಶ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ ಭಟ್ ಭೇಟಿ ನೀಡಿ, ಪಾಲಕರಿಗೆ ಸಾಂತ್ವನ  ಹೇಳಿ 10 ಸಾವಿರ ಸಹಾಯ ಧನ ಸಹಾಯ ನೀಡಿದರು. ಈ ಸಮಯದಲ್ಲಿ ಮಾತನಾಡಿದ ಸಂತೋಷ ಭಟ್ ಪೂಜಾರ,  ಅಮಾನುಲ್ಲಾ ಮತ್ತು  ರೇಷ್ಮಾಬಾನು ಸವಣೂರ ದಂಪತಿ ಪುತ್ರ ಮಹಮ್ಮದ್ ಜಾಫರ್ ಸವಣೂರ ಇತ್ತೀಚಿಗೆ ನೂತನ ಶಾಲಾ ಕೊಠಡಿ ಅಡಿಪಾಯ ಬಿದ್ದು ಸಾವನ್ನಪ್ಪಿದ್ದು, ಘಟನೆಗೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.

ಭಂಡಾರದ ಗುರುಗಳಾದ ಮಲ್ಲಪ್ಪಯ್ಯ ಒಡೆಯರ್, ನಿಂಗಪ್ಪ ಮುದ್ದಿ, ಫಕ್ಕೀರಪ್ಪ ಐಗಳ, ದೇವಪ್ಪ ವಾಸರದ, ಪ್ರಕಾಶ ಬಳ್ಳಾರಿ, ಚಿಕ್ಕಪ್ಪ ಸತಗಿ ಸೇರಿದಂತೆ ಮತ್ತಿತರರು ಇದ್ದರು.

error: Content is protected !!