ಮಾನ್ಯರೇ,
ನಿಟುವಳ್ಳಿಯ ಮುಖ್ಯರಸ್ತೆಯ ಎಸ್‌ಬಿಐ ಬ್ಯಾಂಕಿನಿಂದ ಮುಂದೆ 100 ಅಡಿ ಉದ್ದದ ದೊಡ್ಡ ಚರಂಡಿಯ ವಾಸನೆಯಿಂದ ನಾಗರಿಕರು ಬೇಸತ್ತಿದ್ದು, ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಇಲ್ಲಿನ ನಾಗರಿಕರನ್ನು ಈ ಸಮಸ್ಯೆಯಿಂದ ಮುಕ್ತಗೊಳಿಸಬೇಕು.
ಮೊನ್ನೆ ಬಿದ್ದ ಮಳೆಯ ನೀರು ಮುಂದೆ ಹೋಗದೇ ವಾಸನೆ ಹೆಚ್ಚಾಗಿದೆ. ಚರಂಡಿಯ ಮೇಲೆ ಸಿಮೆಂಟ್ ಮುಚ್ಚಳ ಹಾಕಿಸಿದರೆ, ರಸ್ತೆಯ ಎತ್ತರಕ್ಕೆ ಫುಟ್‌ಪಾತ್ ಮಾಡಿಸಿದರೆ, ಮಕ್ಕಳು , ಹಿರಿಯರಿಗೆ ರಕ್ಷೆಯಾಗಲಿದೆ. ಇನ್ನು 4ನೇ ಅಡ್ಡರಸ್ತೆಯ ಸಿಮೆಂಟ್ ಮುಚ್ಚಳದ ಕೆಳಗಿನ ಕಲ್ಲುಗಳು ಜಾರಿಬಿದ್ದು, ಮುಚ್ಚಳ ಮಾತ್ರ ಇದೆ. ಇದು ಕುಸಿದು ಬಿದ್ದರೆ ಭಾರೀ ಅನಾಹುತವಾಗಲಿದೆ.
ಇದೇ ರಸ್ತೆಯ ಕನ್ನಡ ಮತ್ತು ಉರ್ದು ಸರ್ಕಾರಿ ಶಾಲೆಗಳ ಅಂಗನ ವಾಡಿಯ ಬಿಸಿಯೂಟದ ನೀರಿಗೆ ಉಪಯೋಗಿಸುತ್ತಿದ್ದ ಬೋರ್ ಕೆಟ್ಟಿದ್ದು, ಕೂಡಲೇ ಬೋರ್ ಅನ್ನು ಸರಿಪಡಿಸುವಂತೆ ವಿನಂತಿ.
– ಕೆ.ಎನ್. ಸ್ವಾಮಿ, ತಾಲ್ಲೂಕು ಕಸಾಪ ಮಾಜಿ ಅಧ್ಯಕ್ಷರು, ದಾವಣಗೆರೆ.