ಭತ್ತ ಕಟಾವು ಯಂತ್ರಗಳಿಗೆ ಪರಿಷ್ಕೃತ ದರ ನಿಗದಿ : ಡಿಸಿ

ಭತ್ತ ಕಟಾವು ಯಂತ್ರಗಳಿಗೆ ಪರಿಷ್ಕೃತ ದರ ನಿಗದಿ : ಡಿಸಿ - Janathavaniದಾವಣಗೆರೆ ನ.28 – ಖಾಸಗಿ ಭತ್ತ ಕಟಾವು ಯಂತ್ರಗಳಿಗೆ ಪ್ರತಿ ಗಂಟೆಗೆ ಬೆಲ್ಟ್ ಅಥವಾ ಚೈನ್ ಟೈಪ್ ಯಂತ್ರಗಳಿಗೆ ರೂ.2250 ಹಾಗೂ ಟೈರ್ ಟೈಪ್ ಭತ್ತ ಕಟಾವು ಯಂತ್ರಗಳಿಗೆ ರೂ.1800 ದರ ನಿಗದಿಪಡಿ ಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

  ಜಿಲ್ಲೆಯ 66245 ಹೆಕ್ಟೇರ್‌ ಪ್ರದೇಶದಲ್ಲಿ ಭತ್ತದ ಬೆಳೆ ಕ್ಷೇತ್ರವಿದೆ. ರೈತರು ಸಮೀಪದ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಲಭ್ಯವಿರುವ ಕಟಾವು ಯಂತ್ರಗಳ ಪ್ರಯೋಜನ ಪಡೆಯಬಹುದು ಎಂದವರು ಹೇಳಿದ್ದಾರೆ.

 ಖಾಸಗಿ ಭತ್ತ ಕಟಾವು ಯಂತ್ರಗಳ ಮಾಲೀಕರು ಪ್ರತಿ ಘಂಟೆಗೆ 2800 ರಿಂದ 3800ರೂಗಳವರೆಗೆ ಬಾಡಿಗೆ ಹಣ ನಿಗದಿಪಡಿಸುತ್ತಿರುವುದು ಗಮನಕ್ಕೆ ಬಂದ ನಂತರ, ಜಿಲ್ಲಾಡಳಿತ ಪರಿಷ್ಕೃತ ದರ ನಿಗದಿ ಪಡಿಸಿದೆ.

ಹೆಚ್ಚಿನ ಬಾಡಿಗೆ ಪಡೆಯುವ ಮಾಲೀಕರ ವಿರುದ್ದ ವಿಪತ್ತು ನಿರ್ವಹಣಾ ಕಾಯ್ದೆ 2005ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಹೆಚ್ಚು ಹಣಕ್ಕೆ ಒತ್ತಾಯಿಸಿದರೆ, ರೈತರು ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಬಹುದೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

error: Content is protected !!