ಬೆಳೆ ಹಾನಿ ಪ್ರದೇಶಗಳಿಗೆ ಸಂಸದ ಸಿದ್ದೇಶ್ವರ ಭೇಟಿ

ಪರಿಹಾರಕ್ಕೆ ಒತ್ತಾಯ

ಮಲೇಬೆನ್ನೂರು, ನ.23- ಇತ್ತೀಚೆಗೆ ಸುರಿದ ಭಾರೀ ಮಳೆಯಿಂ ದಾಗಿ ಭತ್ತದ ಬೆಳೆ ಹಾನಿಯಾಗಿರು ವುದನ್ನು ಮಂಗಳವಾರ ಸಂಸದ ಜಿ.ಎಂ.ಸಿದ್ದೇಶ್ವರ ಅವರು ದೇವರ ಬೆಳಕೆರೆ, ಕಡ್ಲೆಗೊಂದಿ, ಬೂದಿಹಾಳ್, ಸಂಕ್ಲೀಪುರ, ಹರಳಹಳ್ಳಿ, ಕುಂಬಳೂರು, ಜಿಗಳಿ, ಯಲವಟ್ಟಿ, ಹೊಳೆಸಿರಿಗೆರೆ, ಕಮಲಾಪುರ ಮತ್ತು ಗೋವಿನಹಾಳ್ ಗ್ರಾಮಗಳಿಗೆ ಭೇಟಿ ನೀಡಿ ವೀಕ್ಷಿಸಿದರು.

ಈ ವೇಳೆ ಕುಂಬಳೂರಿನಲ್ಲಿ ಸುದ್ದಿ ಗಾರರೊಂದಿಗೆ ಮಾತನಾಡಿದ ಸಂಸದ ಸಿದ್ದೇಶ್ವರ ಅವರು, ದಾವಣಗೆರೆ ಜಿಲ್ಲೆ ಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿ ದ್ದರಿಂದ ರೈತರಿಗೆ ಬಹಳ ತೊಂದರೆಯಾಗಿದೆ.

ನವೆಂಬರ್‌ನಲ್ಲಿ 144 ಮಿ.ಮೀ ಮಳೆ ಆಗಬೇಕಿತ್ತು. ಆದರೆ, 299 ಮಿ.ಮೀ ಮಳೆ ಯಾಗಿದೆ. 104 ಮಿ.ಮೀ ಹೆಚ್ಚು ಮಳೆಯಾಗಿರು ವುದರಿಂದ ಜಿಲ್ಲೆಯಲ್ಲಿ 2847 ಹೆಕ್ಟೇರ್ ಭತ್ತದ ಬೆಳೆ ಮತ್ತು 169 ತೋಟಗಾರಿಕೆ ಬೆಳೆ ಹಾನಿಯಾಗಿದೆ.

ನವೆಂಬರ್ ತಿಂಗಳಲ್ಲೇ ಜಿಲ್ಲೆಯಲ್ಲಿ 418 ಮನೆಗಳಿಗೆ ಹಾನಿಯಾಗಿದ್ದು, ಮೂವರು ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಗಳ ಕುಟುಂಬದವರಿಗೆ ಈಗಾಗಲೇ ಸರ್ಕಾರದಿಂದ ತಲಾ 5 ಲಕ್ಷ ರೂ. ಪರಿಹಾರ ಜಮಾ ಆಗಿದ್ದು, ತಾವು  ಕೂಡಾ ವೈಯಕ್ತಿಕವಾಗಿ ತಲಾ 25 ಸಾವಿರ ರೂ. ಪರಿಹಾರ ನೀಡುತ್ತೇನೆಂದರು. ಮಳೆಯಿಂದ ಬೆಳೆ, ಮನೆಗಳಿಗೆ ಅಷ್ಟೇ ಅಲ್ಲದೇ, ರಸ್ತೆ, ಶಾಲಾ ಕೊಠಡಿಗಳಿಗೂ ಹಾನಿಯಾಗಿದ್ದು, ಜಿಲ್ಲೆಯಲ್ಲಿ ಒಟ್ಟು 38 ಕೋಟಿ ರೂ. ನಷ್ಟವಾಗಿದೆ ಎಂದು ಸರ್ವೆಯಿಂದ ತಿಳಿದು ಬಂದಿದೆ.

ಭತ್ತಕ್ಕೆ ಸೂಕ್ತ ದರ ಇಲ್ಲದ ಈ ಸಂದರ್ಭದಲ್ಲಿ ಭತ್ತದ ಬೆಳೆ ಹಾನಿಯಾಗಿರುವುದು ರೈತರಿಗೆ ಬಹಳ ತೊಂದರೆಯಾಗಿರುವುದು ನನಗೂ ನೋ ವುಂಟು ಮಾಡಿದೆ. ಆದ್ದರಿಂದ ಎಸ್‌ಡಿಆರ್ ಎಫ್‌ನಲ್ಲಿ ಬೆಳೆ ಹಾನಿಯಾಗಿರುವ ಎಲ್ಲಾ ರೈತ ರಿಗೆ ಪರಿಹಾರ ನೀಡುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆಂದು ಸಿದ್ದೇಶ್ವರ ಹೇಳಿದರು.

ದೇವರಬೆಳಕೆರೆ ಪಿಕಪ್ ಜಲಾಶ ಯದಲ್ಲಿ ಸಸ್ಯ ರಾಶಿ ಸಂಗ್ರಹವಾಗಿ ಹಿನ್ನೀರಿನಲ್ಲಿ ಸಂಕ್ಲೀಪುರ ಮತ್ತಿತರ ಹಳ್ಳಿಗಳ ರೈತರಿಗೆ ತೊಂದರೆಯಾಗಿದೆ. ಸಸ್ಯ ರಾಶಿ ತೆರವು ಕಾರ್ಯಾಚರಣೆ ಯನ್ನು ನೋಡಿ ಬಂದಿದ್ದೇನೆ. ಜಲಾಶ ಯದ ಕಲ್ಲಿನ ತಡೆಗೋಡೆ ಬಿರುಕು ಬಿಟ್ಟಿರುವುದನ್ನು ಕೂಡಲೇ ದುರಸ್ಥಿ ಪಡಿಸಲು ಕ್ರಮ ಕೈಗೊಳ್ಳುತ್ತೇವೆಂದು ಸಿದ್ದೇಶ್ವರ ತಿಳಿಸಿದರು.

ಗೋವಿನಾಳ್ ಗ್ರಾಮಕ್ಕೆ ಭೇಟಿ ನೀಡಿದ ಸಂಸದರು, ಮನೆ ಕುಸಿದು ಸಾವನ್ನಪ್ಪಿದ ಬಸವರಾಜಪ್ಪ ಕುಟುಂಬಕ್ಕೆ ಸಾಂತ್ವನ ಹೇಳಿ ವೈಯಕ್ತಿಕ ನೆರವು ನೀಡಿದರು.

ಮಾಜಿ ಶಾಸಕ ಬಿ.ಪಿ.ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿ.ಪಂ. ಮಾಜಿ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ, ಹರಿಹರ ತಾ. ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಹಿಂಡಸಘಟ್ಟ ಲಿಂಗರಾಜ್, ಪ್ರಧಾನ ಕಾರ್ಯದರ್ಶಿ ಆದಾಪುರ ವೀರೇಶ್ ಸೇರಿದಂತೆ ಇನ್ನೂ ಅನೇಕರು ಸಂಸದರ ಜೊತೆಗಿದ್ದರು.

error: Content is protected !!