ಹೊನ್ನಾಳಿ-ನ್ಯಾಮತಿಯನ್ನು ಅತಿವೃಷ್ಟಿ ಪೀಡಿತ ಎಂದು ಘೋಷಿಸಲು ಮನವಿ

ಅಜ್ಜ-ಅಜ್ಜಿ ಹೆಸರಿನಲ್ಲಿ ಜಮೀನು ಇರುವ ವಿದ್ಯಾರ್ಥಿಗಳಿಗೂ ಶಿಷ್ಯ ವೇತನ ನೀಡುವ ಮನವಿಗೆ ಸಿಎಂ ಸಕಾರಾತ್ಮಕ ಸ್ಪಂದನೆ 

– ಎಂ.ಪಿ. ರೇಣುಕಾಚಾರ್ಯ

ಬೆಂಗಳೂರು, ನ.23- ಹೊನ್ನಾಳಿ-ನ್ಯಾಮತಿ ಅವಳಿ ತಾಲ್ಲೂಕಿನಲ್ಲಿ ಅಕಾಲಿಕ ಮಳೆಯಿಂದ ಸಾಕಷ್ಟು ಹಾನಿ ಉಂಟಾಗಿದ್ದು,  ಅವಳಿ ತಾಲ್ಲೂಕುಗಳನ್ನು ಅತಿವೃಷ್ಟಿ ಪೀಡಿತ ತಾಲ್ಲೂಕುಗಳು ಎಂದು ಘೋಷಣೆ ಮಾಡಿ, ಕೂಡಲೇ ಪರಿಹಾರ ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಗೆ ಮನವಿ ಸಲ್ಲಿಸಿದರು.

ಬೆಂಗಳೂರಿನ ಸಿಎಂ ನಿವಾಸದಲ್ಲಿ ಮನವಿ ಸಲ್ಲಿಸಿದ ಅವರು, ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಮ್ಮ ಮನವಿಗೆ ಮುಖ್ಯಮಂತ್ರಿಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿಸಿದರು.

ಅವಳಿ ತಾಲ್ಲೂಕಿನಲ್ಲಿ ವಾಯುಭಾರ ಕುಸಿತದಿಂದ ಅತೀವ ಮಳೆಯಾಗಿದ್ದು, ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಜೊತೆಗೆ, ಸಾಕಷ್ಟು ಮನೆಗಳಿಗೆ ಹಾನಿಯಾಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಇನ್ನು ಕೃಷಿ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯ ಜಂಟಿ ಸುತ್ತೋಲೆಯಲ್ಲಿ ರಾಜ್ಯದ ರೈತರ ಮಕ್ಕಳಿಗೆ ಪ್ರೌಢ ಶಿಕ್ಷಣದ ನಂತರದ ವಿದ್ಯಾಭ್ಯಾಸ ಕ್ಕಾಗಿ ಶಿಷ್ಯ ವೇತನ ಜಾರಿಗೆ ತರಲಾಗಿದೆ. ಅದರಂತೆ ಶಿಷ್ಯ ವೇತನಕ್ಕಾಗಿ ರಾಜ್ಯ ವಿದ್ಯಾರ್ಥಿ ತಂತ್ರಾಂಶದಲ್ಲಿ ತಮ್ಮ ಹಾಗೂ ತಮ್ಮ ತಂದೆ-ತಾಯಿಯ ಆಧಾರ್ ಸಂಖ್ಯೆ ಯೊಂದಿಗೆ ನೋಂದಣಿ ಮಾಡಿಕೊಳ್ಳ ಬೇಕಾಗಿರುತ್ತದೆ. 

ಸುತ್ತೋಲೆಯಲ್ಲಿ ತಂದೆ ಹಾಗೂ ತಾಯಿಯ ಹೆಸರಿ ನಲ್ಲಿ ಜಮೀನು ಹೊಂದಿರಬೇಕೆಂದು ಷರತ್ತು ವಿಧಿಸಲಾ ಗಿರುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳ ಅಜ್ಜ-ಅಜ್ಜಿಯ ಹೆಸರಿನಲ್ಲಿ ಜಮೀನು ಹೊಂದಿರುವವರಿಗೆ ಅನ್ಯಾಯವಾ ಗುತ್ತಿದೆ. ಆದ್ದರಿಂದ ರಾಜ್ಯದ ಸಮಗ್ರ ರೈತ ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದ ಸದರಿ ಸುತ್ತೋಲೆಗೆ ತಿದ್ದುಪಡಿ ಹೊರಡಿಸಿ, ಅಜ್ಜ ಹಾಗೂ ಅಜ್ಜಿಯ ಹೆಸರಿನಲ್ಲಿ ಜಮೀನು ಹೊಂದಿದವರಿಗೂ ಶಿಷ್ಯ ವೇತನ ಲಭ್ಯವಾಗು ವಂತೆ ಅನುಕೂಲ ಮಾಡಿಕೊಡುವಂತೆ ಸಂಬಂಧಪಟ್ಟವರಿಗೆ ಸೂಚಿಸ ಬೇಕೆಂದು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದು, ತಮ್ಮ ಮನವಿಗೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ರೇಣುಕಾಚಾರ್ಯ ತಿಳಿಸಿದ್ದಾರೆ.

error: Content is protected !!