ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದಿಂದ ಪುರಸ್ಕಾರ

ಹರಪನಹಳ್ಳಿ, ನ.8 – ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ತಾಲ್ಲೂಕು ಘಟಕದ ವತಿಯಿಂದ ಪಟ್ಟಣದ ಶಾದಿಮಹಲ್‍ನಲ್ಲಿ ನಿವೃತ್ತ ಮುಸ್ಲಿಂ ನೌಕರರಿಗೆ ಹಾಗೂ ಎಸ್.ಎಸ್.ಎಲ್.ಸಿ. ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೆ.ಎಸ್ ಉಸ್ಮಾನ್ ವಹಿಸಿದ್ದರು. ಅಂಜುಮನ್ ಅಧ್ಯಕ್ಷ ಡಿ.ಮುಜೀಬುರ್ ರಹಿಮಾನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಈ ವೇಳೆ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಮುಸ್ಲಿಮರ ಪಾತ್ರ ಕುರಿತು ಶಿಕ್ಷಕರಾದ ಮಮ್ತಾಜ್ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ವಿಜಯನಗರ ಜಿಲ್ಲೆಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಸವರಾಜ ಸಂಗಪ್ಪನವರಿಗೆ ಗೌರವಿಸಿ ಸನ್ಮಾನಿಸಲಾಯಿತು. 

ಈ ವೇಳೆ ಜಿಲ್ಲಾ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಎಂ.ದಾದಾ ಖಲಂದರ್‌, ಖಜಾಂಚಿ ಷರೀಫ್ ಮಕರಬ್ಬಿ, ಸಂಘಟನಾ ಕಾರ್ಯದರ್ಶಿ ಮಮ್ತಾಜ್‌, ಕರ್ನಾಟಕ ರಾಜ್ಯ ಸರ್ಕಾರಿ ಮುಸ್ಲಿಂ ನೌಕರರ ಕ್ಷೇಮಾಭಿವೃದ್ದಿ ಸಂಘದ  ಸಂಸ್ಥಾಪಕ ಅಧ್ಯಕ್ಷ ಸಲೀಮ್ ಹಂಚಿನ ಮನೆ, ಕಾರ್ಯದರ್ಶಿ ಡಾ.ಸಯ್ಯದ್ ಇಸ್ಮಾಯಿಲ್,  ಸಂಘದ 
ಎನ್. ಇಸ್ಮಾಯಿಲ್, ಅಸ್ಲಾಂ ಭಾಷಾ, ಹೆಚ್.ಸಲಿಂ, ರಫೀಕ್ ರಿಜ್ವಿ, ಕೆ.ಮನ್ಸೂರ್, ಅರ್ಜುಮುನ್ನೀಸಾ, ಎಂ.ಯಾಹ್ಯಾ ಎಸ್.ಶಫಿ, ಮಹಬೂಬ್ ಬಡಿಗಿ, ಅಬ್ದುಲ್ ಸಲಾಮ್, ಅಲೀಂ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ  ಕೆ.ಸಿದ್ದಲಿಂಗನಗೌಡ, ಬಿ.ಆರ್.ಸಿ ಹುಸೇನ್ ಪೀರ್,  ಶಿಕ್ಷಕರಾದ  ಚಮನ್‍ಬಿ, ಮಾದಿಹಳ್ಳಿ ಮಂಜುನಾಥ, ಹಡ ಗಲಿಯ ಮುಸ್ತಾಫ್‌ ಸೇರಿದಂತೆ ಇತರರಿದ್ದರು.

error: Content is protected !!