19 ವರ್ಷಗಳಾದರೂ ಹೆಚ್ಚಿನ ಪ್ರಗತಿ ಹೊಂದದ ಡಿಡಿಸಿಸಿ ಬ್ಯಾಂಕ್‍

19 ವರ್ಷಗಳಾದರೂ ಹೆಚ್ಚಿನ ಪ್ರಗತಿ ಹೊಂದದ ಡಿಡಿಸಿಸಿ ಬ್ಯಾಂಕ್‍ - Janathavaniದಾವಣಗೆರೆ, ನ.8- ದಾವಣಗೆರೆ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆಯಾದರೂ, ಈ ಬ್ಯಾಂಕ್‌ ಸ್ಥಾಪನೆಗೊಂಡು ಸುಮಾರು 19 ವರ್ಷಗಳಾಗಿದ್ದರೂ ಹೆಚ್ಚಿನ ಪ್ರಗತಿ ಹೊಂದಿಲ್ಲ ಎಂದು ಡಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಐಗೂರು ಸಿ. ಚಂದ್ರಶೇಖರ್ ವ್ಯಾಕುಲತೆ ವ್ಯಕ್ತಪಡಿಸಿದ್ದಾರೆ.

ಬ್ಯಾಂಕಿನ 20 ನೇ ವರ್ಷದ ವಾರ್ಷಿಕ ಮಹಾಸಭೆ ನಡೆದಿದ್ದು, ಬ್ಯಾಂಕಿನ ಪ್ರಗತಿಯ ಪಕ್ಷಿನೋಟ ಆಶಾದಾಯ ಕವಾಗಿದೆ. 2002ನೇ ಸಾಲಿನಲ್ಲಿ  ಚಿತ್ರದುರ್ಗ ಜಿಲ್ಲೆ ಯಿಂದ ಬೇರ್ಪಟ್ಟು ಮಾಜಿ ಸಚಿವ ಎಸ್.ಎಸ್. ಮಲ್ಲಿ ಕಾರ್ಜುನ್‍ ಮುಖಂಡತ್ವ ಹಾಗೂ ಬಿ.ವಿ.ಚಂದ್ರಶೇಖರ್ ಮತ್ತಿತರರ ನೇತೃತ್ವದಲ್ಲಿ  ದಾವಣಗೆರೆಯಲ್ಲಿ ಸ್ಥಾಪನೆ ಯಾದ ಡಿಡಿಸಿಸಿ ಬ್ಯಾಂಕ್ ಉತ್ತಮವಾಗಿ ಕಾರ್ಯ ನಿರ್ವ ಹಿಸುತ್ತಾ ಬಂದಿದ್ದರೂ ಸಹ ಹೆಚ್ಚಿನ ಪ್ರಗತಿ ತೋರಿರಲಿಲ್ಲ. 

ಈ ಮಧ್ಯೆ  2007 ರಲ್ಲಿ  ಹೊನ್ನಾಳಿ ಶಾಖೆಯಲ್ಲಿ ನಡೆದ 7 ಕೋಟಿ ಹಣ ದುರುಪಯೋಗ ಪ್ರಕರಣ ಇಂದಿಗೂ ಪೂರ್ಣ ಪರಿಹಾರ ಕಂಡಿಲ್ಲ. ಕಳೆದ 18 ವರ್ಷಗಳಿಂದ ಬ್ಯಾಂಕಿನ ಪ್ರಗತಿಗೆ ಪ್ರಯತ್ನಗಳು ನಡೆ ದಿದ್ದು, ಹೆಚ್ಚು ಹೆಚ್ಚು ರೈತರಿಗೆ ಬೆಳೆ ಸಾಲ ವಿತರಿಸುವಲ್ಲಿ ಸಫಲವಾದರೂ ಚಿತ್ರದುರ್ಗ ಬ್ಯಾಂಕಿನಿಂದ ಬಳುವಳಿ ಯಾಗಿ ಬಂದ  ಎಸ್‌ಐಡಿಬಿಐ ಸಾಲದ ವಸೂಲಾತಿಯಿ ಲ್ಲದೆ ಹಾಗೂ ವರ್ಷದಿಂದ ವರ್ಷಕ್ಕೆ ಶರವೇಗದಲ್ಲಿ  ಹೆಚ್ಚುವ ಆಡಳಿತಾತ್ಮಕ  ವೆಚ್ಚದ ಹೊರೆಯಿಂದ ಆರ್ಥಿಕ ವಾಗಿ ಪ್ರಗತಿ ಸಾಧಿಸಲಾಗದೆ ಬ್ಯಾಂಕು ತನ್ನ ಅಸ್ತಿತ್ವ ಉಳಿಸಿ ಕೊಂಡಿದ್ದೇ ಸಾಧನೆಯಾದಂತಾಗಿತ್ತು. ಕಳೆದ 3 ವರ್ಷಗಳ ಹಿಂದೆ ಬಂದ ಆಡಳಿತ ಮಂಡಳಿ ಜೆ.ಆರ್. ಷಣ್ಮುಖಪ್ಪ ನವರ ಅಧ್ಯಕ್ಷತೆಯಲ್ಲಿ  ಕೆಲವು ದೃಢ ನಿರ್ಧಾರಗಳನ್ನು ತೆಗೆದುಕೊಂಡು ಅಪೆಕ್ಸ್‍ ಬ್ಯಾಂಕ್ ಮತ್ತು ನಬಾರ್ಡ್‌ನಿಂದ ಹೆಚ್ಚು ಸಾಲ ತಂದು ಹೆಚ್ಚು ರೈತರಿಗೆ ಸಾಲ ವಿತರಿಸಿ,  ಇರುವ ಸಾಲಗಾರ ರೈತರಿಗೆ ಹೆಚ್ಚಿನ ಮಿತಿ ನಿಗದಿಗೊಳಿಸಿ ರೈತರಿಗೆ ಸಹಕಾರ ನೀಡುವಲ್ಲಿ ಸಫಲವಾಗಿದೆ.

2018-19ರಲ್ಲಿ  301 ಕೋಟಿ ಸಾಲ ನೀಡಿದ್ದರೆ 2021ರ ಮಾರ್ಚ್ ಅಂತ್ಯಕ್ಕೆ ಸಾಲದ ಮೊತ್ತ 656 ಕೋಟಿ ತಲುಪಿ ದ್ವಿಗುಣಗೊಂಡು ಉತ್ತಮ ಸಾಧನೆಗೈ ದಿದೆ. ಈ ಸಾಧನೆಗೆ ಮತ್ತೊಂದು ಕಾರಣ  ಜಿಲ್ಲೆಯ ಸಕ್ಕರೆ ಕಾರ್ಖಾನೆಗಳ ಆಡಳಿತ ಮಂಡಳಿಯ ಮನವೊಲಿಸಿ, ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿ ಅವರಿಗೆ ಸಾಲ ವಿತರಿಸಿ ಆದಾಯ ವೃದ್ದಿಸಿಕೊಂಡಿರುವುದು.

ಬ್ಯಾಂಕಿನ 19 ವರ್ಷಗಳ ಇತಿಹಾಸದಲ್ಲಿ ಹಿಂದಿನ ವರ್ಷ ಪ್ರಪ್ರಥಮ ಬಾರಿಗೆ ಬ್ಯಾಂಕ್‍  ಆಡಿಟ್ ವರ್ಗ `ಎ’ ಗೆ ಏರಿಕೆಯಾಗಿದ್ದು ಈ ವರ್ಷವೂ ಸಹ ಆ ಸ್ಥಾನವನ್ನು ಉಳಿಸಿಕೊಂಡಿದೆ. ಬಹು ವರ್ಷಗಳ ನಂತರ 1 ಕೋಟಿಯ ಮೇಲೆ ಅಂದರೆ 1.23 ಕೋಟಿ ನಿವ್ವಳ ಲಾಭ ಹೊಂದಿ ಪ್ರಗತಿ ಪಥದತ್ತ ಅಡಿಯಿಡುತ್ತಿದೆ. ಇದೇ ರೀತಿ ಬ್ಯಾಂಕ್‌ ಇನ್ನೂ ಹೆಚ್ಚಿನ ಪ್ರಗತಿ ಹೊಂದಲಿ, ಆ ಮೂಲಕ ರೈತ ಬಾಂಧವರ ಬಾಳಿಗೆ ಬೆಳಕಾಗಲಿ ಎಂದು ಆಶಿಸಿದ್ದಾರೆ.

ಇತ್ತೀಚೆಗೆ ನಡೆದ ಅನಿರೀಕ್ಷಿತ ಬೆಳವಣಿಗೆಯಲ್ಲಿ ಜೆ.ಎಸ್. ವೇಣುಗೋಪಾಲ ರೆಡ್ಡಿಯವರು ಬ್ಯಾಂಕಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಈ ಹಿಂದೆ ಸಣ್ಣ ರೈತರಿಗೆ ನೀಡಿದ್ದ ರೂ 5 ರಿಂದ 10 ಸಾವಿರ ಸಾಲವನ್ನು ರೂ 25 ಸಾವಿರದವರೆಗೆ ಏರಿಸಿದ್ದು  ಮುಂದೆ ಪ್ರತಿಯೊಬ್ಬ ರೈತರಿಗೂ ಕನಿಷ್ಟ ರೂ 50 ಸಾವಿರ ಸಾಲ ವಿತರಿಸುವ ಗುರಿ ಹೊಂದಿದ್ದಾರೆ. ಅವರ ಈ ಗುರಿ ಆದಷ್ಟು ಜಾಗ್ರತೆ ಈಡೇರಿ, ಜಿಲ್ಲೆಯ ರೈತಬಾಂಧವರಿಗೆ ಆರ್ಥಿಕ ಸೌಲಭ್ಯ ಸುಲಭವಾಗಿ ದೊರಕುವಂತಾಗಲಿ. ಬ್ಯಾಂಕಿನ ಹಳೇ ಸುಸ್ತಿ ಸಾಲಗಳು, ಹೊಸ ಸುಸ್ತಿ ಸಾಲಗಳ, ಹೊನ್ನಾಳಿ ಹಗರಣ ಹಾಗೂ ಎಸ್‍.ಐ.ಡಿ.ಬಿ.ಐ ಸಾಲಗಳ ವಸೂಲಾತಿಗೆ ಸೂಕ್ತ ಕ್ರಮವಿಟ್ಟು ಬ್ಯಾಂಕನ್ನು ಅಭಿವೃದ್ದಿ ಗೊಳಿಸುವ ಜೊತೆಗೆ ರೈತ ಸಮೂಹವನ್ನು ಮೇಲಕ್ಕೆತ್ತುವ, ಬ್ಯಾಂಕಿನ ಪ್ರತಿಷ್ಠೆ ಯನ್ನು ಉತ್ತುಂಗಕ್ಕೇರಿಸುವ ಪ್ರಯತ್ನ ಆಡಳಿತ ಮಂಡಳಿ ಯಿಂದಾಗಲಿ ಎಂದು ಅವರು ಕಳಕಳಿ ವ್ಯಕ್ತಪಡಿಸಿದ್ದಾರೆ.

error: Content is protected !!