ಹರಿಹರ, ಜ.12 – ನಗರದ ವಿವಿಧ ಬಡಾವಣೆಗಳ ರಸ್ತೆಗಳು ಯುಜಿಡಿ ಮತ್ತು 24×7 ನೀರಿನ ಕಾಮಗಾರಿಯಿಂದ ಹಾಳಾಗಿ ಸಾರ್ವಜನಿ ಕರಿಗೆ ಓಡಾಡಲು ತೊಂದರೆಗಳು ಆಗುತ್ತಿರುತ್ತವೆ. ಇದರ ವಿರುದ್ಧ ಆಟೋ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಆಟೋ ಚಾಲಕರು ಮತ್ತು ಮಾಲೀಕರ ಸಂಘದವರು ಹಾಗೂ ಕನ್ನಡ ಪರ ಸಂಘಟನೆಗಳು ತಿಳಿಸಿವೆ.
ಇಲ್ಲಿನ ರಚನಾ ಕ್ರೀಡಾ ಟ್ರಸ್ಟ್ನಲ್ಲಿ ನಿನ್ನೆ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಈಗಾಗಲೇ ತಹಶೀಲ್ದಾರರ ಮತ್ತು ನಗರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ನಾವು ನೀಡಿದ ಗಡುವು ಮುಗಿದರೂ ರಸ್ತೆ ದುರಸ್ತಿಯಾಗಿಲ್ಲ ಎಂದು ಹೇಳಿದ್ದಾರೆ.
31ನೇ ವಾರ್ಡಿನಲ್ಲಿ ಸಿಸಿ ರಸ್ತೆಗಳು ಯುಜಿಡಿ ಕಾಮಗಾರಿ ಹಾಳಾಗಿದ್ದು ಮತ್ತು ಅವೈಜ್ಞಾನಿಕ ವಾಗಿ ಹಾಕಿರುವ ರಸ್ತೆ ತಡೆಗಳಿಂದ ಆಟೋರಿಕ್ಷಾಗಳು ಬೈಕ್ ಸವಾರರು, ಶಾಲಾ – ಕಾಲೇಜು ಮಕ್ಕಳು ಮತ್ತು ಆಸ್ಪತ್ರೆಗೆ ಆಟೋದಲ್ಲಿ ಗರ್ಭಿಣಿ ಯರನ್ನು, ಅನಾರೋಗ್ಯ ಪೀಡಿತರನ್ನು ಕರೆದುಕೊಂಡು ಹೋಗುವುದಕ್ಕೆ ಬಹಳ ತೊಂದರೆಗಳಾಗುತ್ತಿವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ನಗರ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಗೌರವಾಧ್ಯಕ್ಷ ಸಿ.ಎಂ. ಸಿದ್ದಲಿಂಗ ಸ್ವಾಮಿ, ಅಧ್ಯಕ್ಷ ಜಿ.ಎಸ್.ಮೋಹನ್, ಉಪಾಧ್ಯಕ್ಷ ಟಿ.ಹೆಚ್. ನಾಗರಾಜ್, ಕನ್ನಡ ಪರ ಸಂಘಟನೆಯ ಮುಖಂಡರಾದ ಪ್ರೀತಂ ಬಾಬು, ಗೋವಿಂದ್, ಇಲಿಯಾಸ್ ಅಹಮದ್, ರಮೇಶ್ ಮಾನೆ, ಆನಂದ್, ಚಂದ್ರಪ್ಪ, ನಫೀಜ್ ಆಹ್ಮದ್ ಮತ್ತಿತರರು ಉಪಸ್ಥಿತರಿದ್ದರು.