ದಾವಣಗೆರೆ, ಜ. 12- ನಗರದ ಜಾಗೃತ ಮಹಿಳಾ ಸಂಘದ ವತಿಯಿಂದ ಭಾರತ ಸರ್ಕಾರವು ಮಹಿಳೆಯರ ವಿವಾಹದ ವಯಸ್ಸನ್ನು 18 ವರ್ಷದಿಂದ 21 ವರ್ಷಕ್ಕೆ ಹೆಚ್ಚಿಸುವುದರ ವಿಚಾರವಾಗಿ ಚರ್ಚಾಗೋಷ್ಠಿ ಹಮ್ಮಿಕೊಳ್ಳಲಾಗಿತ್ತು.
ಈ ಚರ್ಚಾಗೋಷ್ಠಿಯಲ್ಲಿ 18 ವರ್ಷ ಮತ್ತು 21 ವರ್ಷದ ಪರ ಎಂಬ ಎರಡು ಗುಂಪುಗಳನ್ನು ರಚಿಸಿ 18 ಮತ್ತು 21 ರ ವಯಸ್ಸಿನ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸಲಾಯಿತು.
ಕಾರ್ಯದರ್ಶಿ ಶ್ರೀಮತಿ ಅಮೀನಾ ಭಾನು, ಉಪಾಧ್ಯಕ್ಷರಾದ ಶ್ರೀಮತಿ ಉಮಾ ವೀರಭದ್ರಪ್ಪ, ಸದಸ್ಯರುಗಳಾದ ಶ್ರೀಮತಿ ಶಾಂತಮ್ಮ ದಿಳ್ಳೆಪ್ಪ, ಶ್ರೀಮತಿ ಆಶಾ ಕಲ್ಲನಗೌಡರ, ಶ್ರೀಮತಿ ಗೀತಾ ಮಾರುತೇಶ್, ಶ್ರೀಮತಿ ಸತ್ಯಭಾಮ ಮಂಜುನಾಥ, ವಕೀಲರಾದ ಶ್ರೀಮತಿ ಭಾಗ್ಯ ಜೆ ಎಸ್, ಶ್ರೀಮತಿ ಎಂ.ಎನ್. ಮಧುರ, ಪ್ರಾಧ್ಯಾಪಕರುಗಳಾದ ಶ್ರೀಮತಿ ದೀಪಾ ಬಿಎಸ್, ಜಯರಾಜ್, ವೇದ ವರ್ಮ, ಶ್ರೀಮತಿ ಅನ್ನಪೂರ್ಣ ಪಾಟೀಲ್, ಡಾ. ಅನಿತಾ ದೊಡ್ಡಗೌಡರ್, ಶ್ರೀಮತಿ ಸುಭಾಷಿಣಿ ಮಂಜುನಾಥ, ಸಾಮಾಜಿಕ ಕಾರ್ಯ ಕರ್ತ ತಜ್ ಮುಲ್ ಅಹಮದ್, ಮಹೇಶ್ ಕುಮಾರ್, ಆಪ್ತ ಸಮಾ ಲೋಚಕರಾದ ಶ್ರೀಮತಿ ಕೆ.ಬಿ. ಸುಮಾ, ಎಸ್. ಕುಮಾರ, ಶ್ವೇತಾ, ಸಿಬ್ಬಂದಿಗಳಾದ ಶ್ರೀಮತಿ ಮಮತಾ, ಶ್ರೀಮತಿ ಹೇಮಲತಾ, ನಿಶ್ಚಿತಾ, ಸಂಪನ್ಮೂಲ ವ್ಯಕ್ತಿಗಳಾಗಿದ್ದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಪ್ರಾಂಶುಪಾಲ ಬಸವರಾಜ್ ಎರಡು ತಂಡಗಳ ಚರ್ಚೆಯನ್ನು ಆಲಿಸಿ 21ವರ್ಷ ಸೂಕ್ತ ಎಂದು ಅಭಿಪ್ರಾಯಪಟ್ಟರು.