ಜ್ಞಾನಕ್ಕೆ ಸಮನಾದದ್ದು ಬೇರೆ ಯಾವುದೂ ಇಲ್ಲ. ಆದ್ದರಿಂದ ಜ್ಞಾನದ ಬೆನ್ನು ಹತ್ತಬೇಕು ಎಂದು ಜಿಲ್ಲಾಧಿಕಾರಿ ಮಹಾಂತ ಬೀಳಗಿ ಮಕ್ಕಳಿಗೆ ಕಿವಿ ಮಾತು ಹೇಳಿದರು.
ಹಳೇಪೇಟೆ ವೀರಭದ್ರಸ್ವಾಮಿ ಕಾರ್ತಿಕ
ದಾವಣಗೆರೆ ಹಳೆಪೇಟೆಯ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಮಂಗಳವಾರ ರಾತ್ರಿ ಕಾರ್ತಿಕ ಮಹೋತ್ಸವ ನಡೆಯಿತು.
ಸಾಹಿತ್ಯವನ್ನು ಜನರ ಮನೆಗೆ ಕೊಂಡೊಯ್ಯುವ ಕೆಲಸವಾಗಲಿ : ಡಾ. ಎಂ.ಜಿ.ಈಶ್ವರಪ್ಪ ಆಶಯ
ಕನ್ನಡ ಸಾಹಿತ್ಯವನ್ನು ಅರಮನೆ, ಗುರುಮನೆಯಿದ ಜನರ ಮನೆಗೆ ಕೊಂಡೊಯ್ಯುವ ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ ನ ಜೊತೆಗೂಡಿ ನಾವೆಲ್ಲರೂ ಮಾಡಬೇಕಾಗಿದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.
ಜಿಲ್ಲೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನಿಷೇಧ
ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳ ಮತ್ತು ವಸತಿ ಸಮುಚ್ಛಯಗಳಲ್ಲಿ ಈ ಬಾರಿಯ ಹೊಸ ವರ್ಷದ ಸಂಭ್ರಮಾಚರಣೆಯನ್ನು ನಿಷೇಧ ಮಾಡಲಾಗಿದೆ.
124 ಕೋಟಿ ರೂ.ಹಳೆಬೀಡು ನೀರಾವರಿ ಯೋಜನೆಗೆ ರಾಜ್ಯ ಸಂಪುಟ ಮಂಜೂರಾತಿ
ಹಳೆಬೀಡು ಮತ್ತಿತರೆ ಕೆರೆಗಳಿಗೆ ನೀರು ಹರಿಸುವ ಅಪರೂಪದ 124 ಕೋಟಿ ರೂ.ಗಳ ನೀರಾವರಿ ಯೋಜನೆಗೆ ಸಚಿವ ಸಂಪುಟದಲ್ಲಿ ಮಂಜೂರಾತಿ ದೊರೆತಿರುವುದಕ್ಕೆ ತರಳಬಾಳು ಬೃಹನ್ಮಠದ ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಹರ್ಷ ವ್ಯಕ್ತಪಡಿಸಿದ್ದಾರೆ.
ಮರುಳಸಿದ್ದೇಶ್ವರ ಕಾರ್ತಿಕೋತ್ಸವ
ತರಳಬಾಳು ಬಡಾವಣೆಯಲ್ಲಿರುವ ಶ್ರೀ ಶಿವಕುಮಾರ ಸ್ವಾಮಿ ಮಹಾಮಂಟಪದಲ್ಲಿ ಶ್ರೀ ವಿಶ್ವಬಂಧು ಮರುಳಸಿದ್ದೇಶ್ವರ ಕಾರ್ತಿಕ ಮಹೋತ್ಸವ ಸಂಜೆ ನಡೆಯಿತು.
ಎಲ್ಲರಲ್ಲೂ `ಎನಗಿಂತ ಕಿರಿಯರಿಲ್ಲ’ ಎಂಬ ಭಾವನೆ ಅಗತ್ಯ : ಡಿಸಿ ಬೀಳಗಿ
`ಎನಗಿಂತ ಕಿರಿಯರಿಲ್ಲ' ಎಂಬ ಭಾವನೆಯನ್ನು ಹೊಂದಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಪ್ರತಿಪಾದಿಸಿದರು.
ಹೊನ್ನಾಳಿಯಲ್ಲಿ ಇಂದು ಪ್ರತಿಭಟನೆ
ಬಿಸಿ ಊಟ ಸಂಘಟನೆ ವತಿಯಿಂದ ಇಂದು ಮಧ್ಯಾಹ್ನ 1 ಗಂಟೆಗೆ ಹೊನ್ನಾಳಿ ತಾಲ್ಲೂಕು ಕಚೇರಿ ಬಳಿ ಪ್ರತಿಭಟನೆ ನಡೆಯಲಿದೆ.
ಪುರಂದರ ದಾಸರ ದೇವರ ನಾಮ, ತ್ಯಾಗರಾಜರ ಕೀರ್ತನೆ ಸ್ಪರ್ಧೆ
ಶ್ರೀ ಪುರಂದರ ದಾಸರ ಹಾಗೂ ಶ್ರೀ ತ್ಯಾಗರಾಜರ ಆರಾಧನೆ ಪ್ರಯುಕ್ತ ಶ್ರೀ ಪುರಂದರ ದಾಸರ ದೇವರ ನಾಮ ಹಾಗೂ ಶ್ರೀ ತ್ಯಾಗರಾಜರ ಕೀರ್ತನಾ ಸ್ಪರ್ಧೆಯನ್ನು ಇದೇ ದಿನಾಂಕ 16 ರ ಶನಿವಾರ ಬೆಳಿಗ್ಗೆ 10.30 ಗಂಟೆಗೆ ಶ್ರೀ ಶಾರದಾಂಬ ದೇವಸ್ಥಾನದಲ್ಲಿ ಏರ್ಪಡಿಸಲಾಗಿದೆ.
ಹರಿಹರ : 108 ಸೂರ್ಯ ನಮಸ್ಕಾರ, ಯಜ್ಞ ಕಾರ್ಯಕ್ರಮ
ಇದೇ ದಿನಾಂಕ 9 ರ ಭಾನುವಾರ ತುಂಗಭದ್ರಾ ನದಿಯ ದಂಡೆಯ ಮೇಲಿರುವ ತುಂಗಾರಾತಿ ಕಾರಿಡಾರ್ ಸ್ಥಳದಲ್ಲಿ ಬೆಳಗ್ಗೆ 5.30 ರಿಂದ 9 ಗಂಟೆಯವರೆಗೆ ರಥ ಸಪ್ತಮಿ ಪ್ರಯುಕ್ತ 108 ಸೂರ್ಯ ನಮಸ್ಕಾರ ಮತ್ತು ಯಜ್ಞ ಹಾಗೂ ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆರ್.ಜಿ. ರವೀಂದ್ರ ಸಿಂಗ್ ತಿಳಿಸಿದ್ದಾರೆ.
ವ್ಯಾಸಂಗ ವೇತನಕ್ಕೆ ಅರ್ಜಿ : ಅವಧಿ ವಿಸ್ತರಣೆ
ಪಿಹೆಚ್ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಹೊಸ ವಿದ್ಯಾರ್ಥಿಗಳಿಗೆ ಮಾಸಿಕ ವ್ಯಾಸಂಗ ವೇತನ, ಫೆಲೋಶಿಪ್ ನೀಡಲು ಅರ್ಹ ವಿದ್ಯಾರ್ಥಿಗಳಿಂದ ಆಫ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು, ಅರ್ಜಿ ಸಲ್ಲಿಸುವ ಅವಧಿಯನ್ನು ಇದೇ ದಿನಾಂಕ 10 ರವರೆಗೆ ವಿಸ್ತರಿಸಲಾಗಿದೆ
ಕುಂಬಳೂರಿನಲ್ಲಿ ಇಂದು ದಂತ, ನೇತ್ರಾ ತಪಾಸಣಾ ಶಿಬಿರ
ಲಯನ್ಸ್ ಕ್ಲಬ್, ಮಲೇಬೆನ್ನೂರು ಮತ್ತು ನೇತ್ರಾಲಯ ಐ-ಕೇರ್ ಹಾಗೂ ಬಾಪೂಜಿ ದಂತ ವೈದ್ಯಕೀಯ ಕಾಲೇಜು, ಆಸ್ಪತ್ರೆ ವತಿಯಿಂದ ಶಾಲಾ ಮಕ್ಕಳಿಗೆ ಹಾಗೂ ಗ್ರಾಮಸ್ಥರಿಗೆ ಉಚಿತ ದಂತ ಹಾಗೂ ನೇತ್ರಾ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ
ಹೊನ್ನಾಳಿಯಲ್ಲಿ ನಾಳೆ ದಿಂಡಿ ಮಹೋತ್ಸವ
ಹೊನ್ನಾಳಿ : ಪಟ್ಟಣದ ದೊಡ್ಡಪೇಟೆ ಪಾಂಡುರಂಗ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 7ರಿಂದ 9ರ ವರೆಗೆ 107ನೇ ದಿಂಡಿ ಮಹೋತ್ಸವ ನಡೆಯಲಿದೆ ಎಂದು ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ಹೆಚ್.ಪಿ ಶ್ರೀಹರ ಹೊವಳೆ ತಿಳಿಸಿದ್ದಾರೆ.
ಸ್ನಾತಕ ಪದವಿ ಪರೀಕ್ಷೆ: ಎವಿಕೆ ಮಹಿಳಾ ಕಾಲೇಜಿಗೆ 10 ರ್ಯಾಂಕ್
ದಾವಣಗೆರೆ ವಿಶ್ವವಿದ್ಯಾನಿಲಯದ 2023-24ನೇ ಸಾಲಿನ ಸ್ನಾತಕ ಪದವಿ ಪರೀಕ್ಷೆಯಲ್ಲಿ ನಗರದ ಎ.ವಿ. ಕಮಲಮ್ಮ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರು 10 ರ್ಯಾಂಕ್ ಪಡೆದಿರುತ್ತಾರೆ.
ತುಮ್ಮಿನಕಟ್ಟೆಯಲ್ಲಿ ಇಂದಿನಿಂದ 3 ದಿನ ಶ್ರೀ ಬಸವೇಶ್ವರ ಜಾತ್ರಾ ಮಹೋತ್ಸವ
ರಾಣೇಬೆನ್ನೂರು ತಾಲ್ಲೂಕು ತುಮ್ಮಿನಕಟ್ಟೆ ಗ್ರಾಮದ ಬೆಲ್ಲದ ಪತೇಯಲ್ಲಿರುವ ಶ್ರೀ ಬಸವೇಶ್ವರ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಇಂದಿನಿಂದ ಇದೇ ದಿನಾಂಕ 7 ರವರೆಗೆ ಶ್ರೀ ಬಸವೇಶ್ವರ ರಥೋತ್ಸವ ಹಾಗೂ ಗುಗ್ಗಳ ಮಹೋತ್ಸವ ನಡೆಯಲಿದೆ.
ಹರಿಹರದಲ್ಲಿ ಬೀಡಾ ಸ್ಟಾಲ್ಗೆ ಬೆಂಕಿ
ಹರಿಹರ : ಹರಿಹರೇಶ್ವರ ದೇವಸ್ಥಾನ ರಸ್ತೆಯ ತೇರುಗಡ್ಡೆ ವೃತ್ತದಲ್ಲಿರುವ ಬೀಡಾ ಸ್ಟಾಲ್ನಲ್ಲಿ ಇಂದು ಸಂಜೆ ಬೆಂಕಿ ಅನಾಹುತ ಸಂಭವಿಸಿದೆ. ಸ್ಥಳಕ್ಕೆ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಬೆಂಕಿಯನ್ನು ನಂದಿಸಿದರು.
ಅಪರಿಚಿತ ಶವ ಪತ್ತೆ
ಸುಮಾರು 50 ವರ್ಷದ ವ್ಯಕ್ತಿಯ ಮೃತ ದೇಹ ಕಂಡು ಬಂದಿದ್ದು, ಕಂದು ಮೈಬಣ್ಣ, ತೆಳ್ಳನೆಯ ಮೈಕಟ್ಟು ಹೊಂದಿರುವ ಅಪರಿಚಿತ ಶವದ ವಾರಸುದಾರರ ಮಾಹಿತಿ ಕಂಡು ಬಂದಲ್ಲಿ ವಿದ್ಯಾನಗರ ಪೊಲೀಸ್ ಠಾಣೆ (08192-262688) ಯನ್ನು ಸಂಪರ್ಕಿಸಬಹುದು.
ನಗರದಲ್ಲಿ ಇಂದು ಕಾಂಗ್ರೆಸ್ ಸಭೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಶೀಘ್ರ ನಡೆಯಲಿದ್ದು, ಈ ಚುನಾವಣೆಗೆ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವ ಉದ್ದೇಶದಿಂದ ದಾವಣಗೆರೆ ಜಿಲ್ಲೆಯಲ್ಲಿ ಪೂರ್ವಭಾವಿ ಸಭೆಯನ್ನು ಇಂದು ಮಧ್ಯಾಹ್ನ 1 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಎಸ್.ಎಸ್.ಭವನದಲ್ಲಿ ಕರೆಯಲಾಗಿದೆ.
ಇಂದು ಸವಿತಾ ಮಹರ್ಷಿ ಜಯಂತಿ
ಜಿಲ್ಲಾಡಳಿತದಿಂದ ಇಂದು ಬೆಳಿಗ್ಗೆ 10. 30ಕ್ಕೆ ಜಿಲ್ಲಾಡಳಿತ ಭವನದಲ್ಲಿ ಶ್ರೀ ಸವಿತಾ ಮಹರ್ಷಿ ಜಯಂ ತ್ಯೋತ್ಸವ ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ, ವಕೀಲ ಎನ್. ರಂಗಸ್ವಾಮಿ ತಿಳಿಸಿದ್ದಾರೆ.
ನಗರದಲ್ಲಿ ಇಂದಿನಿಂದ 9 ರವರೆಗೆ 60 ನೇ ವರ್ಷದ ದಿಂಡಿ ಮಹೋತ್ಸವ
ಬಂಬೂಬಜಾರ್ ಗೋಂದಳಿ ಸಮಾಜದ ಶ್ರೀ ವಿಠಲ ರುಖುಮಾಯಿ ಹರಿ ಮಂದಿರದಲ್ಲಿ 60 ನೇ ವರ್ಷದ ದಿಂಡಿ ಮಹೋತ್ಸವದ ಅಂಗವಾಗಿ ವಿಶ್ವಶಾಂತಿಗಾಗಿ ಶ್ರೀ ಗ್ರಂಥರಾಜ ಜ್ಞಾನೇಶ್ವರಿಯ ಸಾಮುದಾಯಿಕ ಪಾರಾಯಣ ಮತ್ತು ಅಖಂಡ ಹರಿನಾಮ ಸಪ್ತಾಹ ಇಂದಿನಿಂದ ಇದೇ ದಿನಾಂಕ 9 ರವರೆಗೆ ನಡೆಯಲಿದೆ.
ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ
ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಸಂದರ್ಭದಲ್ಲಿ ಪ್ರಶಸ್ತಿ ನೀಡಲು ಆತ್ಮಸ್ಥೈರ್ಯ ದಿಂದ ಹೋರಾಡಿ ಜೀವ ನೋಪಾಯದಿಂದ ಪಾರು ಮಾಡಿದಂ ತಹ ಮಹಿಳೆಯ ರನ್ನು ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಪರಿಗಣಿಸಲು ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ನಗರದಲ್ಲಿ ಇಂದು ಪುಸ್ತಕ ಬಿಡುಗಡೆ
ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕರು, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಗೌರವ ಸಲಹೆಗಾರರಾದ ಹೆಚ್.ಕೆ. ಲಿಂಗರಾಜ್ ಅವರು ರಚಿಸಿದ `ಶಿಕ್ಷಕರಿಗಾಗಿ ಸೇವಾ ನಿಯಮಗಳು' ಎಂಬ ಪುಸ್ತಕ ಇಂದು ಬಿಡುಗಡೆಯಾಗಲಿದೆ.
ಎಐಟಿಯುಸಿ ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ ಮುಂದಕ್ಕೆ
ಫೆಬ್ರವರಿ 3 ರಿಂದ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಎಐಟಿಯುಸಿ ಸಂಯೋಜಿತ ಅಂಗನವಾಡಿ ಕಾರ್ಯಕ ರ್ತೆಯರ ಮತ್ತು ಸಹಾಯಕಿಯರ ಫೆಡರೇಶನ್ ರಾಜ್ಯ ಸಮಿತಿ ನೇತೃತ್ವದಲ್ಲಿ ಆರಂಭವಾಗಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಮುಖ್ಯ ಮಂತ್ರಿಗಳ ಭರವಸೆ ಮೇರೆಗೆ ಮುಂದೂಡಲಾಗಿದೆ
ಹರಿಹರ ಪಿಎಲ್ಡಿ ಬ್ಯಾಂಕಿನ 4 ಸ್ಥಾನಗಳ ಪೈಕಿ 3 ಸ್ಥಾನಗಳ ಫಲಿತಾಂಶ ಪ್ರಕಟ
ಹರಿಹರ ಪಿಎಲ್ಡಿ ಬ್ಯಾಂಕಿನ ಆಡಳಿತ ಮಂಡಳಿಯ 4 ನಿರ್ದೇಶಕ ಸ್ಥಾನಗಳಿಗೆ ನಿನ್ನೆ ಚುನಾವಣೆ ನಡೆಯಿತು. 10 ಸ್ಥಾನಗಳು ಅವಿರೋಧ ಆಯ್ಕೆಯಾಗಿದ್ದವು.
ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ : 340 ಮೆಟ್ರಿಕ್ ಟನ್ ಮರಳು ಜಪ್ತಿ
340 ಮೆಟ್ರಿಕ್ ಟನ್ ಅಕ್ರಮವಾಗಿ ಮರಳನ್ನು ದಾಸ್ತಾನು ಮಾಡಿದ ಅಡ್ಡೆಗಳ ಮೇಲೆ ದಿಢೀರ್ ದಾಳಿ ನಡೆಸಿದ ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್, ತಹಶೀಲ್ದಾರ್ ಗುರುಬಸವರಾಜ್ ಮತ್ತು ಗಣಿ ಮತ್ತು ಭೂ ವಿಜ್ಞಾನಿ ತಂಡಗಳೊಂದಿಗೆ ಸೋಮವಾರ ಜಪ್ತಿ ಮಾಡಲಾಯಿತು
ನಗರಕ್ಕೆ 7ರಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಭೇಟಿ
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಅವರು ಇದೇ ದಿನಾಂಕ 7ರಂದು ಭೇಟಿ ನೀಡಲಿದ್ದಾರೆ.
ರಾಣೇಬೆನ್ನೂರಿನಲ್ಲಿ ಇಂದು ಮೌನೇಶ್ವರ ಜಯಂತಿ – ಸಾಮೂಹಿಕ ವಿವಾಹ
ಮೌನೇಶ್ವರ ದೇವಸ್ಥಾನ, ವಿಶ್ವಕರ್ಮ ಸಮಾಜ, ಕಾಳಿಕಾದೇವಿ ಮಹಿಳಾ ಮಂಡಳ ಹಾಗೂ ನೌಕರರ ಸಂಘದಿಂದ ಜಗದ್ಗುರು ಮೌನೇಶ್ವರ ಜಯಂತಿಯನ್ನು ಇಂದು ಆಚರಿಸಲಾಗುವುದು ಎಂದು ಸಮಾಜದ ಗೌರವ ಸಮಿತಿ ಅಧ್ಯಕ್ಷ ಬಸವರಾಜ ಬಡಿಗೇರ ತಿಳಿಸಿದರು.
ಪತ್ತೆಯಾಗದ ಬಾಲಕನ ಶವ
ತಾಲೂಕಿನ ಕುರ್ಕಿ ಬಳಿ ಭದ್ರಾ ನಾಲೆಯಲ್ಲಿ ಭಾನುವಾರ ಕೊಚ್ಚಿ ಹೋಗಿರುವ ಗಣೇಶ್ ಶವ ಸೋಮವಾರವೂ ಪತ್ತೆಯಾಗಲಿಲ್ಲ.
ನಗರದಲ್ಲಿ ಇಂದು ಕ್ಯಾನ್ಸರ್ ಜಾಗೃತಿ ಜಾಥಾ
ಜಿ.ಎಂ. ವಿಶ್ವವಿದ್ಯಾಲಯ, ಜಿ.ಎಂ.ಇನ್ಸ್ಟಿಟ್ಯೂಟ್ ಆಫ್ ಫಾರ್ಮಾಸ್ಯೂಟಿಕಲ್ ಸೈನ್ಸ್ ಅಂಡ್ ರಿಸರ್ಚ್ ವಿಭಾಗ ಮತ್ತು ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆ ಸಂಯುಕ್ತಾಶ್ರಯದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಾ (ವಾಕಥಾನ್) ನಾಳೆ ದಿನಾಂಕ 4 ರ ಮಂಗಳವಾರ ಬೆಳಿಗ್ಗೆ 7.30 ಕ್ಕೆ ಹಮ್ಮಿಕೊಳ್ಳಲಾಗಿದೆ
ಬೇಸಿಗೆ ಹಂಗಾಮು : ಜಿಲ್ಲೆಯಲ್ಲಿ 65 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಗುರಿ
ಜಿಲ್ಲೆಯಾದ್ಯಂತ ಬೇಸಿಗೆ ಹಂಗಾಮಿನಲ್ಲಿ ಒಟ್ಟಾರೆ 65 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತವನ್ನು ಬೆಳೆಯುವ ಗುರಿ ಹೊಂದಲಾಗಿದೆ ಎಂದು ಕೃಷಿ ಅಧಿಕಾರಿಗಳು ತಿಳಿಸಿದ್ದಾರೆ.
ನಾಳೆ ಕಾಂಗ್ರೆಸ್ ಸಭೆ : ಎಐಸಿಸಿ ಪ್ರಧಾನ ಕಾರ್ಯದರ್ಶಿ ಆಗಮನ
ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳು ಶೀಘ್ರ ನಡೆಯಲಿದ್ದು, ಈ ಚುನಾವಣೆಗೆ ಪಕ್ಷವನ್ನು ತಳಮಟ್ಟದಲ್ಲಿ ಸಂಘಟಿಸುವ ಉದ್ದೇಶದಿಂದ ದಾವಣಗೆರೆ ಜಿಲ್ಲೆಯಲ್ಲಿ ಪೂರ್ವಭಾವಿ ಸಭೆಯನ್ನು ನಾಡಿದ್ದು ದಿನಾಂಕ 5ರ ಬುಧವಾರ ಮಧ್ಯಾಹ್ನ 1 ಗಂಟೆಗೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಎಸ್.ಎಸ್.ಭವನದಲ್ಲಿ ಕರೆಯಲಾಗಿದೆ.
ಮಕ್ಕಳ ಬುದ್ಧಿಶಕ್ತಿ ಬೆಳವಣಿಗೆಗೆ ಚದುರಂಗ ಆಟ ಸಹಕಾರಿ
ಮಕ್ಕಳಲ್ಲಿ ಚಾಣಾಕ್ಷತೆ ಹಾಗೂ ತಾಳ್ಮೆಯ ಮನೋ ಭಾವ ಬೆಳೆಯಲು ಚದುರಂಗ ಆಟ ಸಹಕಾರಿ ಎಂದು ಲಯನ್ಸ್ ಅಧ್ಯಕ್ಷ ಎಸ್.ಜಿ. ಉಳುವಯ್ಯ ಹೇಳಿದರು.
ಆವರಗೆರೆ : ಶ್ರೀ ಬಾಲ ಶನೇಶ್ವರಸ್ವಾಮಿ ಮಹಾಕ್ಷೇತ್ರದಲ್ಲಿ 3ನೇ ವಾರ್ಷಿಕೋತ್ಸವ
ಆವರಗೆರೆಯ (ಶ್ರೀ ಮಹಾಲಕ್ಷ್ಮೀ ಲೇ ಔಟ್ ಪಕ್ಕ) ಎತ್ತಿನ ಸಂತೆ ಹಿಂಭಾಗ ದಲ್ಲಿ ಶ್ರೀ ಗುರು ಬಾಲ ಶನೇಶ್ವರ ಸ್ವಾಮಿ ಮಹಾಕ್ಷೇತ್ರದಲ್ಲಿ 3ನೇ ವರ್ಷದ ವಾರ್ಷಿಕೋತ್ಸವ ಕಾರ್ಯ ಕ್ರಮವನ್ನು ನಾಡಿದ್ದು ದಿನಾಂಕ 7 ಮತ್ತು 8ರಂದು ಏರ್ಪಡಿಸಲಾಗಿದೆ.
33ನೇ ವಾರ್ಡಿನಲ್ಲಿ ಅಭಿವೃದ್ಧಿ ಕಾಮಗಾರಿಗೆ ಚಾಲನೆ
ಮಹಾನಗರ ಪಾಲಿಕೆಯ 15ನೇ ಹಣಕಾಸಿನ ಅನುದಾನದಲ್ಲಿ 33ನೇ ವಾರ್ಡಿನಲ್ಲಿ 55 ಲಕ್ಷದ ಅನುದಾನದಲ್ಲಿ ಜಯ ನಗರ `ಎ' ಬ್ಲಾಕ್ ನಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಯ ಗುದ್ದಲಿ ಪೂಜೆಗೆ 33ನೇ ವಾರ್ಡಿನ ಮಹಾನಗರ ಪಾಲಿಕೆ ಸದಸ್ಯ ಕೆ.ಎಂ. ವೀರೇಶ್ ಚಾಲನೆ ನೀಡಿದರು.
ಕರ್ಕಶ ಶಬ್ಧಗಳ ಸೈಲೆನ್ಸರ್ ನಾಶ: ದ್ವಿಚಕ್ರ ಸವಾರರಿಗೆ ಎಚ್ಚರಿಕೆ
ಹರಿಹರ : ದ್ವಿಚಕ್ರ ವಾಹನ ಚಾಲಕರು ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಕರ್ಕಶ ಶಬ್ಧ ಹೊರಡಿಸುವ ಸೈಲೆನ್ಸರ್ ಮತ್ತು ಕಣ್ಣಿಗೆ ಕುಕ್ಕುವಂತಹ ಹೆಡ್ ಲೈಟ್ಗಳನ್ನು ಅಳವಡಿಸದಂತೆ ನಗರ ಪೊಲೀಸ್ ವೃತ್ತ ನಿರೀಕ್ಷಕ ಎಸ್. ದೇವಾನಂದ್ ಎಚ್ಚರಿಸಿದ್ದಾರೆ.
ಹಿರಿಯ ಸಾಹಿತಿ ಕಲೀಂ ಬಾಷಾ ಅವರಿಗೆ ನುಡಿನಮನ
ಹರಿಹರ : ಮೊನ್ನೆ ನಿಧನರಾದ ಬಂಡಾಯ ಸಾಹಿತಿ ಜೆ.ಕಲೀಂ ಬಾಷ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಜಾನಪದ ಪರಿಷತ್ತು ಮತ್ತು ಪರಸ್ಪರ ಬಳಗದಿಂದ ವತಿಯಿಂದ ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಲಾಯಿತು.
ಜರ್ಮನ್ ಪ್ರವಾಸದಲ್ಲಿ ಸಚಿವ ಎಸ್ಸೆಸ್ಸೆಂ ತಂತ್ರಜ್ಞಾನ ಉಪಯೋಗಗಳ ಅಧ್ಯಯನ
ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು ಜರ್ಮನ್ ಪ್ರವಾಸದಲ್ಲಿದ್ದು, ಆ ದೇಶದಲ್ಲಿನ ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕಾ ವಿಷಯಗಳು, ತಂತ್ರಜ್ಞಾನ ಬೆಳವಣಿಗೆ ಹಾಗೂ ಅವುಗಳ ಉಪಯೋಗದ ಮಾಹಿತಿಯನ್ನು ಸಚಿವರು ಪಡೆದರು.
ಶ್ರೀ ಹರಿಹರೇಶ್ವರ ರಥೋತ್ಸವಕ್ಕೆ ಸಿದ್ಧತೆ
ಹರಿಹರ : ನಗರದ ಐತಿಹಾಸಿಕ ಪ್ರಸಿದ್ಧ ಶ್ರೀ ಹರಿಹರೇಶ್ವರ ಸ್ವಾಮಿಯ ರಥೋತ್ಸವವು ಇದೇ ದಿನಾಂಕ 12 ರಂದು ನಡೆಯುವುದರ ನಿಮ್ಮಿತ್ತವಾಗಿ, ಶ್ರೀ ಹರಿಹರೇಶ್ವರ ಮತ್ತು ಮಹಾಲಕ್ಷ್ಮಿ ದೇವಸ್ಥಾನಕ್ಕೆ ವಿದ್ಯುತ್ ದೀಪಗಳಿಂದ ಶೃಂಗಾರ ಮಾಡಲಾಗಿದ್ದು, ಭಕ್ತರನ್ನು ಆಕರ್ಷಿಸುತ್ತದೆ.
ಸರ್ಕಾರಿ ಪ್ರ.ದ.ಕಾಲೇಜಿಗೆ 3 ರ್ಯಾಂಕ್
ನಗರದ ಸರ್ಕಾರಿ ಪ್ರಥಮ ಕಾಲೇಜಿನ ಸ್ನಾತಕೊತ್ತರ ನಿರ್ವಹಣಾ ಶಾಸ್ತ್ರ (ಎಂಬಿಎ) ವಿಭಾಗದ ವಿದ್ಯಾರ್ಥಿಗಳು ದಾವಣಗೆರೆ ವಿಶ್ವವಿದ್ಯಾನಿಲಯದ 2023-24 ಸಾಲಿನ ಸೆಪ್ಟಂಬರ್ನಲ್ಲಿ ನಡೆದ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿ ಅತಿ ಹೆಚ್ಚು ಅಂಕಗಳನ್ನು ಪಡೆದು ಅತ್ಯುನ್ನತ ಶ್ರೇಣಿಯನ್ನು ಪಡೆದಿರುತ್ತಾರೆ.
7 ರಿಂದ 17 ರವರೆಗೆ ನಗರದಲ್ಲಿ ಶ್ರೀ ಕೊಟ್ಟೂರೇಶ್ವರ ಸ್ವಾಮಿ ಪ್ರವಚನ
ಕೊಟ್ಟೂರು ಶ್ರೀ ಗುರು ಬಸವರಾಜೇಂದ್ರ ಸ್ವಾಮಿ ಪಾದಯಾತ್ರೆ ಟ್ರಸ್ಟ್ ವತಿಯಿಂದ ಭಕ್ತರು ಪಾದಯಾತ್ರೆ ಕೈಗೊಳ್ಳುವ ಮುನ್ನ ವಿರಕ್ತಮಠದ ಆವರಣದಲ್ಲಿ ಇದೇ ದಿನಾಂಕ 7 ರಿಂದ 17 ರವರೆಗೆ ಪ್ರತಿ ದಿನ ಸಂಜೆ 6 ರಿಂದ 8.30 ರವರೆಗೆ ಶ್ರೀ ಕೊಟ್ಟೂರು ಗುರು ಬಸವೇಶ್ವರರ ಪುರಾಣ-ಪ್ರವಚನ ಹಮ್ಮಿಕೊಳ್ಳಲಾಗಿದೆ
ಮಲೇಬೆನ್ನೂರಿನಲ್ಲಿ ಇಂದು ಗಂಧ, ನಾಳೆ ಉರುಸ್
ಹಿಂದೂ-ಮುಸ್ಲಿಂ ಬಾಂಧವರ ಭಾವೈಕ್ಯತೆಯ ಸಂಕೇತವಾದ ಸೂಫಿ ಸಂತ ಹಜರತ್ ಸೈಯದ್ ಹಬೀಬುಲ್ಲಾ ಷಾ ಖಾದ್ರಿ ಅವರ ಗಂಧ (ಸಂದಲ್) ಮತ್ತು ಉರುಸ್ ಇಂದು ಮತ್ತು ನಾಳೆ ಅಪಾರ ಭಕ್ತರ ಸಮ್ಮುಖದಲ್ಲಿ ಅತ್ಯಂತ ವೈಭವದಿಂದ ಹಾಗೂ ಶ್ರದ್ಧಾ-ಭಕ್ತಿಯಿಂದ ಜರುಗಲಿದೆ.
ಹರಪನಹಳ್ಳಿ : ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ರಾಜಕುಮಾರ ಭರ್ಮಪ್ಪ
ಹರಪನಹಳ್ಳಿ : ಸ್ಥಳೀಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಉಚ್ಚಂಗಿದುರ್ಗ ರಾಜಕುಮಾರ ಭರ್ಮಪ್ಳ, ಉಪಾಧ್ಯಕ್ಷರಾಗಿ ನಾಗರಾಜ ಗೊಂಗಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ
ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ನೀಡುವ ಸಂಕಲ್ಪ ಮಾಡೋಣ
ಮಲೇಬೆನ್ನೂರು : ಹೊಳೆಸಿರಿಗೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ ಕಾರ್ಯಕ್ರಮವನ್ನು ವೈದ್ಯಾಧಿಕಾರಿ ಡಾ. ಚೇತನ್ ದೀಪ ಬೆಳಗಿಸಿ ಉದ್ಘಾಟಿಸಿದರು.
ಮಡಿವಾಳ ಮಾಚಿದೇವರ ಜಯಂತಿ ಆಚರಣೆ
ಮಲೇಬೆನ್ನೂರು : ಶ್ರೇಷ್ಠ ಶರಣ ಮಡಿವಾಳ ಮಾಚಿದೇವರು ವೀರ ಸೇನಾನಿಯಾಗಿ ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ನಂದಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷರೂ ಆದ ಪುರಸಭೆ ನಾಮಿನಿ ಸದಸ್ಯ ಬಿ. ವೀರಯ್ಯ ಹೇಳಿದರು.
ನ್ಯಾಮತಿ : 13ರಿಂದ ಸೇವಾಲಾಲ್ ಮಹಾರಾಜರ ಜಯಂತ್ಯುತ್ಸವ
ನ್ಯಾಮತಿ : ತಾಲ್ಲೂಕಿನ ಸೂರಗೊಂಡನಕೊಪ್ಪದಲ್ಲಿ ಇದೇ ದಿನಾಂಕ 13ರಿಂದ 15ರ ವರೆಗೆ ಸಂತ ಸೇವಾಲಾಲ್ ಮಹಾರಾಜರ 285ನೇ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಈ ಸಂಭ್ರಮದಲ್ಲಿ ಯಾವುದೇ ಲೋಪ ಆಗದಂತೆ ಜಿಲ್ಲಾಧಿಕಾರಿಗಳು ಇಲ್ಲೇ ಇದ್ದು, ಸಿದ್ಧತಾ ಕಾರ್ಯದ ಬಗ್ಗೆ ನಿಗಾವಹಿಸಬೇಕು
ರಾಜ್ಯ ವಕ್ಫ್ ಮಂಡಳಿಯಿಂದ ಹರಿಹರಕ್ಕೆ ಹೈಟೆಕ್ ಆಂಬ್ಯುಲೆನ್ಸ್
ಹರಿಹರ : ನಗರದ ಅಂಜುಮಾನ್ ಇಸ್ಲಾಮಿಯಾ ಸಮಿತಿಗೆ ರಾಜ್ಯ ವಕ್ಫ್ ಮಂಡಳಿ ಹೈಟೆಕ್ ಆಂಬ್ಯುಲೆನ್ಸ್ ನೀಡಿದ್ದು, ಅತಿ ಶೀಘ್ರದಲ್ಲೇ ಅದನ್ನು ಲೋಕಾರ್ಪಣೆ ಮಾಡಲಾಗುತ್ತದೆ
ವಿಶ್ವಚೇತನ ವಿದ್ಯಾನಿಕೇತನ ಕಾಲೇಜಿನಲ್ಲಿ ಇಸ್ರೋ ವಿಜ್ಞಾನಿ ಡಾ. ಮಲ್ಲಿಕಾರ್ಜುನ್ ಕಂಡೆ
ನಗರದ ಸರ್ ಎಂ.ವಿ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಇದೇ ದಿನಾಂಕ 22ರ ಸಂಜೆ 4ಕ್ಕೆ ಸರ್.ಎಂ.ವಿ ವೈಭವ-2024 ವಾರ್ಷಿಕೋತ್ಸವ ಹಾಗೂ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.
ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ಗೆ ನೇಮಕ
ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿ ಯನ್ನ ರಾಜ್ಯ ಉಪಾಧ್ಯಕ್ಷರಾಗಿ ನಗರದ ಕೆ.ವಿಶ್ವನಾಥ್ ಬಿಲ್ಲವ ನೇಮಕವಾಗಿದ್ದಾರೆ.
ಮಡಿವಾಳ ಸಮಾಜ ಮುಖ್ಯವಾಹಿನಿಗೆ ಬರದಿರಲು ಆರ್ಥಿಕ ಸಂಕಷ್ಟವೇ ಕಾರಣ
ಹರಿಹರ : ಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ಮಡಿವಾಳ ಬಂಧುಗಳು ತಮ್ಮ ಕಾಯಕದಿಂದಲೇ ಬದುಕು ಸಾಗಿಸುತ್ತಿದ್ದಾರೆ. ಇವರೆಲ್ಲಾ ಮುಖ್ಯ ವಾಹಿನಿಗೆ ಬರದಿರಲು ಆರ್ಥಿಕ ಸಂಕಷ್ಠವೇ ಮೂಲ ಕಾರಣವಾಗಿದೆ ಶಾಸಕ ಬಿ.ಪಿ.ಹರೀಶ್ ಹೇಳಿದರು.
ಗಡಿ ಭದ್ರತಾ ಪಡೆಯ ಬಲ್ಲೂರು ಬಸವರಾಜ ಮುದೇನೂರು ಅವರಿಗೆ ಆತ್ಮೀಯ ಸ್ವಾಗತ
23 ವರ್ಷಗಳ ಕಾಲ ಗಡಿ ಭದ್ರತಾ ಪಡೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿ ತಾಯ್ನಾಡಿಗೆ ಮರಳಿದ ದಾವಣಗೆರೆ ತಾಲ್ಲೂಕಿನ ಬಲ್ಲೂರು ಬಸವರಾಜ ಮುದೇನೂರು ಅವರನ್ನು ದಾವಣಗೆರೆ ಜಿಲ್ಲಾ ಪ್ಯಾರಾ ಮಿಲಿಟರಿ ಸಂಘ, ಜಿಲ್ಲಾ ರೈತರ ಒಕ್ಕೂಟದಿಂದ ಇಂದು ಸ್ವಾಗತಿಸಲಾಯಿತು.
ಕ್ಯಾನ್ಸರ್ ದಿನಾಚರಣೆ: ಜಿಎಂ ವಿ.ವಿ.ಕಾಲ್ನಡಿಗೆ ಜಾಥಾ
ನಗರದ ಜಿಎಂ ವಿಶ್ವವಿದ್ಯಾಲಯ ಹಾಗೂ ವಿಶ್ವಾರಾಧ್ಯ ಕ್ಯಾನ್ಸರ್ ಆಸ್ಪತ್ರೆಯ ಸಹಯೋಗದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆಯ ಅಂಗವಾಗಿ ಹಮ್ಮಿಕೊಂಡಿದ್ದ ಕ್ಯಾನ್ಸರ್ ನಿರೋಧಕತೆ ಮತ್ತು ಬೆಂಬಲ ಕುರಿತ ಕಾಲ್ನಡಿಗೆಯ ಜಾಗೃತಿ ಜಾಥಾ ನಡೆಯಿತು.
ಕಕ್ಕರಗೊಳ್ಳ ಪ್ರಾ.ಕೃ. ಪ. ಸ. ಸಂಘಕ್ಕೆ ಸುಭಾಶ್ಚಂದ್ರ ಅಧ್ಯಕ್ಷ, ಕಲ್ಲಿಂಗಪ್ಪ ಉಪಾಧ್ಯಕ್ಷ
ತಾಲ್ಲೂಕಿನ ಕಕ್ಕರಗೊಳ್ಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಇಂದು ನಡೆದ ನಿರ್ದೇಶಕರ ಚುನಾವಣೆಯಲ್ಲಿ ಲಾಟರಿ ಮೂಲಕ ಅಧ್ಯಕ್ಷ- ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
ಸ್ವಾಭಿಮಾನಿಗಳಾಗಿ ಬದುಕುವ ಗಟ್ಟಿ ನಿರ್ಧಾರದ ಕ್ರಾಂತಿ ಆಗಲಿ
ಹೊನ್ನಾಳಿ : ಉತ್ತಮ ಗುಣಗಳನ್ನು ಬೆಳೆಸಿಕೊಂಡು ಸ್ವಾಭಿಮಾನಿಗಳಾಗಿ ಬದುಕುವ ಗಟ್ಟಿ ನಿರ್ಧಾರದ ಕ್ರಾಂತಿ ಆಗಬೇಕು ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ತಿಳಿಸಿದರು.
ವಯಸ್ಸಿನ ಮಕ್ಕಳು ಶಾಪವೂ ಹೌದು, ವರವೂ ಹೌದು
ವಯಸ್ಸಿನ ಮಕ್ಕಳು ಶಾಪವೂ ಹೌದು, ವರವೂ ಹೌದು ಎಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ನುಡಿದರು.
ನೀರು ಕಾಯಿಸುವ ಬಾಯ್ಲರ್ ಬಿದ್ದು ವಿದ್ಯಾರ್ಥಿಯ ಸಾವು
ನೀರು ಕಾಯಿಸುವ ಬಾಯ್ಲರ್ಗೆ ಉರಿ ಹಾಕುತ್ತಿರುವಾಗ ಶಿಥಿಲಗೊಂಡಿದ್ದ ಬಾಯ್ಲರ್ ಇದ್ದಕ್ಕಿದ್ದಂತೆ ಮೈಮೇಲೆ ಬಿದ್ದು ವಿದ್ಯಾರ್ಥಿಯೋರ್ವ ಹಾಸ್ಟೆಲ್ನಲ್ಲಿ ಸಾವಿಗೀಡಾಗಿರುವ ಘಟನೆ ಮಂಗಳವಾರ ನಗರದಲ್ಲಿ ನಡೆದಿದೆ.
ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕಾತಿ ಸಮಿತಿ ಸದಸ್ಯರಾಗಿ ಮಂಜಪ್ಪ
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರ ನೇಮಕಾತಿ ಸಮಿತಿ ಸದಸ್ಯರನ್ನಾಗಿ ಪರಿಸರ ತಜ್ಞ ಡಾ. ಎಸ್. ಮಂಜಪ್ಪ ಸಾರಥಿ ಅವರನ್ನು ನೇಮಕ ಮಾಡಿ ಕರ್ನಾಟಕ ಸರ್ಕಾರ ಆದೇಶ ಹೊರಡಿಸಿದೆ.
ಪರಮಾತ್ಮನ ಮರೆತ ಮನುಷ್ಯನಿಗೆ ಮುಕ್ತಿ ಸಿಗದು
ರಾಣೇಬೆನ್ನೂರು : 'ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ, ನಿಮ್ಮ ದಾನವನುಂಡು ಅನ್ಯರ ಪೊಗಳುವ ಕುನ್ನಿಗಳನೇನೆಂಬೆ ರಾಮನಾಥ' ಎನ್ನುವಂತೆ ಇಲ್ಲಿರುವುದೆಲ್ಲ ಪರಮಾತ್ಮನದೆ. ಈ ದೇಹ ಪರಮಾತ್ಮನದೆ. ಈ ದೇಹ ದಾನ ನೀಡಿದ ಪರಮಾತ್ಮನನ್ನು ಮರೆಯಬಾರದು
ವ್ಯಕ್ತಿ ಶಕುನಿಯಾಗದೇ ವೀರಭದ್ರನಾದರೆ ಸಮಾಜ ಸುಭದ್ರ
ಹೊನ್ನಾಳಿ : ವ್ಯಕ್ತಿ ಶಕುನಿ ಯಾದರೆ ಸಮಾಜವು ಛಿದ್ರಗೊಳ್ಳುತ್ತದೆ, ಶಿವನ ಅಪಮಾನ ತಡೆದು ದುಷ್ಟಶಕ್ತಿ ನಿರ್ನಾಮ ಮಾಡಿದ ವೀರಭದ್ರನಂತಾ ದರೆ ಸಮಾಜವು ಸುಭದ್ರವಾಗಿ ರುತ್ತದೆ ಎಂದು ರಂಭಾಪುರಿ ಡಾ. ವೀರ
ಸೋಮೇಶ್ವರ ಜಗದ್ಗುರುಗಳು ಹೇಳಿದರು.
ಬೆಳ್ಳಕ್ಕಿ ಹಿಂಡು ….
ಮಲೇಬೆನ್ನೂರು ಸಮೀಪದ ನಿಟ್ಟೂರು ರಸ್ತೆ ಅಕ್ಕಪಕ್ಕದಲ್ಲಿರುವ ಭದ್ರಾ ಅಚ್ಚುಕಟ್ಟು ಪ್ರದೇಶದ ಗದ್ದೆಗಳಲ್ಲಿ ಒಂದೆಡೆ ಮಹಿಳೆಯರು ಭತ್ತದ ನಾಟಿ ಮಾಡುತ್ತಿದ್ದರೆ, ಇನ್ನೊಂದಡೆ ಭತ್ತದ ನಾಟಿ ಮಾಡಲು ಟ್ರಾಕ್ಟರ್ ಗಳು ರೊಳ್ಳಿ ಹೊಡೆಯುತ್ತಿರುವ ಕೆಸರಿನ ಹುಳಗಳನ್ನು ತಿನ್ನಲು ಬೆಳ್ಳಕ್ಕಿ ಹಿಂಡು ಲಗ್ಗೆ ಇಟ್ಟಿರುವ ದೃಶ್ಯ ಸೋಮವಾರ ಕ್ಯಾಮರಾ ಕಣ್ಣಿಗೆ ಸೆರೆ ಸಿಕ್ಕಿತು.
ಸಾಲಗಾರರಿಗೆ ಕಿರುಕುಳ ನೀಡಿದರೆ ಗಡಿಪಾರು
ರಾಣೇಬೆನ್ನೂರು : ಸಾಲಗಾರರಿಗೆ ಅಥವಾ ಅವರ ಕುಟುಂಬದ ಸದಸ್ಯರ ಮೇಲೆ ಒತ್ತಡ ಹೇರು ವುದು, ಅಸಹ್ಯಪಡಿಸುವುದು ಅಥವಾ ಹಿಂಸಿಸು ವುದು, ಇಂತಹ ಯಾವುದೇ ರೀತಿಯ ಘಟನೆಗಳು ಮೈಕ್ರೋ ಫೈನಾನ್ಸ್ ನವರಿಂದ ಎರಡನೇ ಬಾರಿ ನಡೆದರೆ ಅವರನ್ನು ಗಡಿಪಾರು ಮಾಡಲಾಗುವುದು
ಒಳ್ಳೆಯ ಆಲೋಚನೆಯಿಂದ ಉತ್ತಮ ಜೀವನ ರೂಪಿಸಿಕೊಳ್ಳಿ
ನ್ಯಾಮತಿ : ಪರಮಾತ್ಮ ಸರ್ವವ್ಯಾಪಿಯಾ ಗಿದ್ದಾನೆ. ಹಾಗಾಗಿ ಮನುಷ್ಯ ಸದಾ ಒಳಿತನ್ನೇ ಯೋಚಿಸುತ್ತಾ ಒಳ್ಳೆಯ ಜೀವನ ರೂಪಿಸಿಕೊಳ್ಳ ಬೇಕು ಎಂದು ಹಿರೇಕಲ್ಮಠದ ಡಾ. ಚನ್ನಮಲ್ಲಿ ಕಾರ್ಜುನ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಹರಪನಹಳ್ಳಿ : ಸಹಕಾರಿ ಕೃಷಿ – ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಅಧ್ಯಕ್ಷರಾಗಿ ಬಿ. ರಾಜಕುಮಾರ್ ಆಯ್ಕೆ
ಹರಪನಹಳ್ಳಿ : ತಾಲ್ಲೂಕು ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ (ಪಿಕಾರ್ಡ್) ಅಧ್ಯಕ್ಷರಾಗಿ ಉಚ್ಚಂಗಿದುರ್ಗ ಕ್ಷೇತ್ರದ ಬಿ. ರಾಜಕುಮಾರ್ ಹಾಗೂ ಉಪಾಧ್ಯಕ್ಷರಾಗಿ ಹರಪನಹಳ್ಳಿಯ ಗೊಂಗಡಿ ನಾಗರಾಜ್ ಅವರು ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ದೇವರಬೆಳಕೆರೆ, ಕುಣೆಬೆಳಕೆರೆ ಮಾರ್ಗವಾಗಿ ಹರಿಹರ, ದಾವಣಗೆರೆಗೆ ಬಸ್ ಸಂಚಾರ
ಮಲೇಬೆನ್ನೂರು : ದಾವಣಗೆರೆಯಿಂದ ದೇವರಬೆಳಕೆರೆ, ಕುಣಿಬೆಳಕೆರೆ, ನಂದಿತಾವರೆ ಮಾರ್ಗವಾಗಿ ಹರಿಹರಕ್ಕೆ ಮತ್ತು ಹರಿಹರದಿಂದ ನಂದಿತಾವರೆ, ದೇವರಬೆಳಕೆರೆ, ಕುಣಿಬೆಳಕೆರೆ ಮಾರ್ಗವಾಗಿ ದಾವಣಗೆರೆ ತಲುಪುವ ಕೆಎಸ್ಸಾರ್ಟಿಸಿಯ ಹೊಸ ಬಸ್ ಸಂಚಾರ ಭಾನುವಾರದಿಂದ ಆರಂಭವಾಗಿದ್ದು, ಕುಣಿಬೆಳಕೆರೆಯಲ್ಲಿ ಗ್ರಾಮಸ್ಥರು ಬಸ್ಗೆ ಪೂಜೆ ಸಲ್ಲಿಸಿ ಸ್ವಾಗತಿಸಿದರು.
ಹೊನ್ನಾಳಿ : ಇಂದಿನಿಂದ ನಾಟಕ ಪ್ರರ್ದಶನ
ಹೊನ್ನಾಳಿ ಅಭಿವ್ಯಕ್ತಿ ಮತ್ತು ಯುವಶಕ್ತಿ, ಹಿರೇಕಲ್ಮಠ ಚನ್ನಪ್ಪಸ್ವಾಮಿ ಜನ ಕಲ್ಯಾಣ ಸೇವಾ ಟ್ರಸ್ಟ್ ಆಶ್ರಯದಲ್ಲಿ ಇಂದಿನಿಂದ ಮೂರು ದಿನ 3 ಪ್ರತ್ಯೇಕ ನಾಟಕಗಳ ಉಚಿತ ಪ್ರರ್ದಶನ ಪ್ರತಿದಿನ ಸಂಜೆ 7 ಗಂಟೆಗೆ ಕನಕದಾಸ ರಂಗ ಮಂದಿರದಲ್ಲಿ ನಡೆಯಲಿದೆ