ಹರಪನಹಳ್ಳಿ : ಮಾನವೀಯತೆ ತೋರಿದ ಅಭಿನವ ಭಾರತೀಯ ಸಂಘಟಕರ ಸೇವೆ ಶ್ಲ್ಯಾಘನೀಯ
ಆಟೋ, ಟ್ಯಾಕ್ಸಿ ಚಾಲಕರ ಕಲ್ಯಾಣಕ್ಕೆ ಒತ್ತು ನೀಡಬೇಕು
ರಾಜ್ಯ ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ವಿಜಯ್ ಭಾಸ್ಕರ್ ಸರ್ಕಾರಕ್ಕೆ ಆಗ್ರಹ
ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಭಾರಂಭ
ಕೊರೊನಾ ಸಾಮಾಜಿಕ ಅಂತರದ ನಡುವೆ ಪಿ.ಯು.ಸಿ. ಇಂಗ್ಲಿಷ್ ಪರೀಕ್ಷೆಗೆ ಹೋಲಿಸಿದರೆ, ಎಸ್ಸೆಸ್ಸೆಲ್ಸಿಯ ಮೊದಲ ದಿನದ ಇಂಗ್ಲಿಷ್ ಪರೀಕ್ಷೆ ಹೆಚ್ಚು ಶಿಸ್ತು ಬದ್ಧ ಹಾಗೂ ವ್ಯವಸ್ಥಿತವಾಗಿತ್ತು.
ನಿವೃತ್ತ ಇಂಜಿನಿಯರ್ ನಿವೃತ್ತಿ ಹಣ ಹೂಡಿಕೆ : ಲಾಭ ನೀಡುವುದಾಗಿ ವಂಚನೆ
ಲಾಭ ನೀಡುವುದಾಗಿ ನಂಬಿಸಿ ತಾವು ದುಡಿದ ಮತ್ತು ನಿವೃತ್ತಿಯ ಹಣವನ್ನು ಹೂಡಿಕೆ ಮಾಡಿಸಿಕೊಂಡು 21. 50 ಲಕ್ಷ ರೂ. ವಂಚಿಸಿರುವುದಾಗಿ ನಿವೃತ್ತ ಸಹಾಯಕ ಇಂಜಿನಿಯರ್ ಕೆ.ಎಂ. ಮುರುಗೇಂದ್ರಯ್ಯ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆರೋಗ್ಯ ಕಾರ್ಯಕರ್ತೆ ಸೇರಿ ಏಳು ಜನರಿಗೆ ಪಾಸಿಟಿವ್
ದಾವಣಗೆರೆ ನಗರದಲ್ಲಿ ಮೂರು, ಹೊನ್ನಾಳಿಯ ಕ್ಯಾಸಿನಕೆರೆಯಲ್ಲಿ ಎರಡು, ದಾವಣಗೆರೆ ತಾಲ್ಲೂಕಿನ ಮಾಗಾನಹಳ್ಳಿಯಲ್ಲಿ ಒಂದು ಪ್ರಕರಣ ಗಳು ದೃಢಪಟ್ಟಿವೆ. ಸೋಂಕು ದೃಢಪಟ್ಟಿರುವವರಲ್ಲಿ ಮಾಗಾನಹಳ್ಳಿಯ ಆರೋಗ್ಯ ಕಾರ್ಯಕರ್ತೆ ಸಹ ಸೇರಿದ್ದಾರೆ.
ಹರಪನಹಳ್ಳಿ: ಆತ್ಮಸ್ಥೈರ್ಯ ತುಂಬಿ ಪರೀಕ್ಷೆ ಬರೆಸಿದ ಅಧಿಕಾರಿಗಳು
ಹರಪನಹಳ್ಳಿ : ತಾಲ್ಲೂಕಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಟ್ಟು 13 ಪರೀಕ್ಷಾ ಕೇಂದ್ರಗಳಿಂದ 3788 ವಿದ್ಯಾ ರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಅದರಲ್ಲಿ 115 ಗೈರಾಗಿ, 3673 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಹರಪನಹಳ್ಳಿ: ಆತ್ಮಸ್ಥೈರ್ಯ ತುಂಬಿ ಪರೀಕ್ಷೆ ಬರೆಸಿದ ಅಧಿಕಾರಿಗಳು
ಹರಪನಹಳ್ಳಿ : ತಾಲ್ಲೂಕಿನಲ್ಲಿ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಒಟ್ಟು 13 ಪರೀಕ್ಷಾ ಕೇಂದ್ರಗಳಿಂದ 3788 ವಿದ್ಯಾ ರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಅದರಲ್ಲಿ 115 ಗೈರಾಗಿ, 3673 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.
ಸ್ಮಾರ್ಟ್ ಸಿಟಿಯಿಂದ 102 ಸ್ಮಾರ್ಟ್ ಕ್ಲಾಸ್
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಮಾಡಲು ವಿದ್ವತ್ ಎಜುಕೇಷನಲ್ ಮೊಬೈಲ್ ಆಪ್ ಸಹ ಒದಗಿಸಲಾಗುತ್ತಿದೆ. ಈ ಆಪ್ ಸರ್ಕಾರಿ ಶಾಲೆಗಳ ಹೈಸ್ಕೂಲ್ ವಿದ್ಯಾರ್ಥಿಗಳಿಗೆ 10 ತಿಂಗಳ ಕಾಲ ಉಚಿತವಾಗಿ ಸಿಗಲಿದೆ.
ಮಲೇಬೆನ್ನೂರಿನಲ್ಲಿ ನಾಳೆ ಸಭೆ
ಮಲೇಬೆನ್ನೂರು : ಇಲ್ಲಿನ ಪುರಸಭೆಯ ಸಭಾ ಭವನದಲ್ಲಿ ನಾಡಿದ್ದು ದಿನಾಂಕ 10ರ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ 2025-26ನೇ ಸಾಲಿನ ಆಯ-ವ್ಯಯ ತಯಾರಿಸುವ ಸಲುವಾಗಿ ಪಟ್ಟ ಣದ ನಾಗರಿಕರ ಸಂಘ-ಸಂಸ್ಥೆಗಳ ಪದಾ ಧಿಕಾರಿಗಳ ಪೂರ್ವಭಾವಿ ಸಭೆಯನ್ನು ಕರೆಯಲಾಗಿದೆ
ಚಿತ್ರದುರ್ಗದಲ್ಲಿ ಅಯ್ಯಪ್ಪ ಸ್ವಾಮಿ ಬ್ರಹ್ಮೋತ್ಸವ
ಮೆದೆಹಳ್ಳಿ ರಸ್ತೆಯಲ್ಲಿ ರುವ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ 25ನೇ ವರ್ಷದ 60 ದಿನಗಳ ಬ್ರಹ್ಮೋತ್ಸವವು ಆರಂಭಗೊಂ ಡಿದ್ದು, ಇದೇ ದಿನಾಂಕ 13 ರವರೆಗೆ ನಡೆಯಲಿದೆ.
ಯರವನಾಗ್ತಿಹಳ್ಳಿ ಕ್ಯಾಂಪ್ನಲ್ಲಿ ನಾಳೆ ವೈಕುಂಠ ಏಕಾದಶಿ
ತಾಲ್ಲೂಕಿನ ಲೋಕಿಕೆರೆ ರಸ್ತೆಯಲ್ಲಿ ರುವ ಯರವನಾಗ್ತಿಹಳ್ಳಿ ಕ್ಯಾಂಪ್ ನಲ್ಲಿರುವ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 10ರ ಶುಕ್ರವಾರ ವೈಕುಂಠ ಏಕಾದಶಿ ನಡೆಯಲಿದೆ.
‘ಹೌದಪ್ಪ’ಗಳ ಕೈಗೆ ವಿವಿ ಆಡಳಿತ: ಎಐಡಿಎಸ್ಓ ಟೀಕೆ
ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾ ಲಯ ದೊಂದಿಗೆ ಸಂಬಂಧ ಹೊಂದಿರದ, ಕೇವಲ ಲಾಭ, ನಷ್ಟದ ಲೆಕ್ಕಾಚಾರ ಮಾಡಬಲ್ಲ ಉದ್ಯಮಿಗಳು, ಅಧಿಕಾರಿಗಳು ಮತ್ತು ಸರ್ಕಾರದ 'ಹೌದಪ್ಪ'ಗಳ ಕೈಯ್ಯಲ್ಲಿ ವಿಶ್ವವಿದ್ಯಾಲಯದ ಆಡಳಿತವನ್ನು ಒಪ್ಪಿಸುವ ಹುನ್ನಾರ ನಡೆದಿದೆ ಎಂದು ಎಐಡಿಎಸ್ಓ ಆರೋಪಿಸಿದೆ.
ಸಂಕ್ರಾಂತಿ ಕವಿಗೋಷ್ಠಿಗೆ ಆಹ್ವಾನ
ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಆಶ್ರಯದಲ್ಲಿ ಸಂಕ್ರಾಂತಿ ಪ್ರಯುಕ್ತ ಇದೇ ದಿನಾಂಕ 11 ರ ಮಂಗಳವಾರ ಕಲಾಕುಂಚ ಕಛೇರಿ ಸಭಾಂಗಣದಲ್ಲಿ ಸಂಕ್ರಾಂತಿ ಕವಿಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ
ರಾಣೇಬೆನ್ನೂರಿನಲ್ಲಿ ಚೌಡೇಶ್ವರಿ ಜಾತ್ರೆ
ರಾಣೇಬೆನ್ನೂರು : ಇಲ್ಲಿನ ನಗರದೇವತೆ ತುಂಗಾಜಲ ಚೌಡೇಶ್ವರಿ ಹಾಗೂ ಗಂಗಾಜಲ ಚೌಡೇಶ್ವರಿ ದೇವಿಯರ ಜಾತ್ರಾ ಮಹೋತ್ಸವವು ಇದೇ ದಿನಾಂಕ 13ರ ಸೋಮವಾರ ದಿಂದ ದಿನಾಂಕ 18 ಶನಿವಾರದವರೆಗೆ ನಡೆಯಲಿದೆ.
12ರಂದು ನಗರದಲ್ಲಿ `ರನ್ ಯಂಗ್ ಇಂಡಿಯಾ – 5ಕೆ ರನ್ ಮ್ಯಾರಥಾನ್’
ರಾಮಕೃಷ್ಣ ಮಿಷನ್ ವತಿಯಿಂದ `ರನ್ ಯಂಗ್ ಇಂಡಿಯಾ - 5ಕೆ ರನ್ ಮ್ಯಾರಥಾನ್' ಇದೇ ದಿನಾಂಕ 12ರ ಭಾನುವಾರ ನಗರದಲ್ಲಿ ನಡೆಯಲಿದೆ. ಮ್ಯಾರಥಾನ್ನಲ್ಲಿ 10 ವರ್ಷ ಮೇಲ್ಪಟ್ಟವರು ಭಾಗವಹಿಸಬಹುದು.
ಬಿಇಎ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ. 99 ರಷ್ಟು ಫಲಿತಾಂಶ
ದಾವಣಗೆರೆ ವಿಶ್ವವಿದ್ಯಾನಿಲಯ ನಡೆಸಿದ 2023-24 ನೇ ಸಾಲಿನ ಬಿ.ಇಡಿ 2 ನೇ ಮತ್ತು 4 ನೇ ಸೆಮಿಸ್ಟರ್ ಪರೀಕ್ಷೆಗಳಲ್ಲಿ ನಗರದ ಬಿಇಎ ಶಿಕ್ಷಣ ಮಹಾವಿದ್ಯಾಲಯಕ್ಕೆ ಶೇ. 99 ರಷ್ಟು ಫಲಿತಾಂಶ ಲಭಿಸಿದೆ.
ಇನ್ನೂ ಲಭ್ಯವಾಗದ ವಿದ್ಯಾರ್ಥಿ ವೇತನ : ಎಐಡಿಎಸ್ಓ ಆಕ್ರೋಶ
ಕಳೆದ ಮೂರು ವರ್ಷಗಳಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಸರಿಯಾಗಿ ವಿದ್ಯಾರ್ಥಿ ವೇತನ ಲಭ್ಯವಾಗುತ್ತಿಲ್ಲ. ಹಿಂದುಳಿದ ಮತ್ತು ಅಲ್ಪಸಂಖ್ಯಾತ ಇಲಾಖೆ ಅಡಿಯಲ್ಲಿ ಬರುವ ಪದವಿ, ಸ್ನಾತಕೋತ್ತರ ಇಂಜಿನಿಯರಿಂಗ್ ಮತ್ತು ಮೆಡಿಕಲ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಲಭ್ಯವಾಗುತ್ತಿಲ್ಲ
ಜಿಲ್ಲೆಯ ಅಭಿವೃದ್ಧಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಷ್ಠಾನ ಒತ್ತಾಯ
ಜಿಲ್ಲೆಯಲ್ಲಿ ರೀಜನಲ್ ಪ್ರಾಂತೀಯ ಕಚೇರಿ, ಸಾಫ್ಟ್ವೇರ್ ಪಾರ್ಕ್ ಮತ್ತು ಶಾಲಾ ಶಿಕ್ಷಣ ಪ್ರಾಂತೀಯ ಕಚೇರಿ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಿತ್ತೂರು ರಾಣಿ ಚೆನ್ನಮ್ಮ ಪ್ರತಿಷ್ಠಾನವು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆ.
ನಗರದ ಬಿ.ಇ.ಎ ಶಾಲೆಯಲ್ಲಿ ಪ್ರಶಸ್ತಿ ಸಮಾರಂಭ
ನಿಜಲಿಂಗಪ್ಪ ಬಡಾವಣೆಯ ಬಾಪೂಜಿ ಬಿ.ಇ.ಎ ಹೈಯರ್ ಪ್ರೈಮರಿ ಸಿಬಿಎಸ್ಇ ಶಾಲೆಯಲ್ಲಿ ಇಂದು ಬೆಳಿಗ್ಗೆ 10.30ಕ್ಕೆ ಪ್ರಶಸ್ತಿ ಸಮಾರಂಭ ನಡೆಯಲಿದೆ.
ಬ್ಯಾಟರಿ ಚಾಲಿತ ವ್ಹೀಲ್ ಚೇರ್ಗಳಿಗೆ ಅರ್ಜಿ ಆಹ್ವಾನ
ವಿಕಲ ಚೇತನ ವ್ಯಕ್ತಿಗಳಿಗೆ ಬ್ಯಾಟರಿ ಚಾಲಿತ ವ್ಹೀಲ್ ಚೇರ್ಗಳನ್ನು ವಿತರಿಸುವ ಯೋಜನೆಯಡಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಭದ್ರಾ ಮೇಲ್ದಂಡೆಗೆ ನೀರು : ವಿರೋಧ
ಭದ್ರಾ ಅಣೆಕಟ್ಟಿನಿಂದ ಭದ್ರಾ ಮೇಲ್ದಂಡೆಗೆ ಈ ವರ್ಷದಲ್ಲಿ ನಾಲ್ಕು ಟಿಎಂಸಿ ನೀರು ಹರಿಸಿದ್ದು, ಈಗಲೂ ಸಹ ವಾಣಿ ವಿಲಾಸ ಸಾಗರ ತುಂಬಿದ್ದರೂ 40 ದಿನಗಳಿಂದ ಪ್ರತಿ ದಿನ 700 ಕ್ಯೂಸೆಕ್ಸ್ ನೀರನ್ನು ಬಿಡುತ್ತಿರುವುದಕ್ಕೆ ಭಾರತೀಯ ರೈತ ಒಕ್ಕೂಟ ವಿರೋಧಿಸಿದೆ.
ಹಿಂಗಾರು ಬೆಳೆ ಸಮೀಕ್ಷೆಗೆ ರೈತರ ಆಪ್ ಬಿಡುಗಡೆ
ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ರೈತರ ಆಪ್ ಬಿಡುಗಡೆ ಮಾಡಿದ್ದು, ರೈತರು ಗೂಗಲ್ ಪ್ಲೇಸ್ಕೋರ್ನಿಂದ ಆಪ್ ಡೌನ್ಲೋಡ್ ಮಾಡಿಕೊಂಡು ತಾವು ಬೆಳೆದ ಬೆಳೆ ಮಾಹಿತಿಯೊಂದಿಗೆ ಛಾಯಾಚಿತ್ರವನ್ನು ಅಪ್ಲೋಡ್ ಮಾಡಬಹುದು
ಬಾಣಂತಿಯರ ಚಿಕಿತ್ಸೆಗೆ ನಿರ್ಲಕ್ಷ್ಯ
ರಾಜ್ಯದಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ತೀವ್ರ ನಿರ್ಲಕ್ಷ್ಯ ವಹಿಸಿರುವ ಆರೋಗ್ಯ ಸಚಿವ ದಿನೇಶ್ ಗುಂಡುರಾವ್ ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಸತ್ಯಶೋಧನ ಸಮಿತಿ ಸದಸ್ಯ, ಶಾಸಕ ಡಾ. ಚಂದ್ರು ಲಮಾಣಿ ಆಗ್ರಹಿಸಿದ್ದಾರೆ.
ನಂದಿತಾವರೆ ಪಿಎಸಿಎಸ್ ಚುನಾವಣೆ : 11 ಜನ ಆಯ್ಕೆ
ಮಲೇಬೆನ್ನೂರು : ನಂದಿತಾವರೆ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಸೋಮವಾರ ನಡೆದ ಚುನಾವಣೆಯಲ್ಲಿ 11 ಜನ ಆಯ್ಕೆಯಾಗಿದ್ದಾರೆ.
ಪ್ರಾದೇಶಿಕ ಸಾರಿಗೆ ಶಿಬಿರ
2025ನೇ ವರ್ಷದಲ್ಲಿ ದಾವಣಗೆರೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ವತಿಯಿಂದ ಶಿಬಿರಗಳನ್ನು ಆಯೋಜಿಸಲಾಗಿದೆ.
ಕಾನೂನು ಪದವೀಧರರಿಗೆ ತರಬೇತಿ
ಹಿಂದುಳಿದ ವರ್ಗಗಳಿಗೆ ಸೇರಿದ ಕಾನೂನು ಪದವೀಧರರಿಗೆ ಆಡಳಿತ ನ್ಯಾಯಾಧೀಕರಣದಲ್ಲಿ ತರಬೇತಿ ಭತ್ಯೆ ನೀಡಲು ಅರ್ಹ ಕಾನೂನು ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಅಂತಿಮ ಮತದಾರರ ಪಟ್ಟಿ ಪ್ರಕಟ : ಜಿಲ್ಲೆಯಲ್ಲೀಗ ಮತದಾರರ ಸಂಖ್ಯೆ 14,96,819
ಚುನಾವಣಾ ಆಯೋಗದ ನಿರ್ದೇಶನದನ್ವಯ ಕರಡು ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ಅಂತಿಮ ಮತದಾರರ ಪಟ್ಟಿಯನ್ನು ಮತಗಟ್ಟೆ ವಾರು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ.ತಿಳಿಸಿದ್ದಾರೆ.
ಹಿರೇಕೆರೂರಿನಲ್ಲಿ 10-11ರಂದು ಕನ್ನಡದ ಹಬ್ಬ
ಹಾವೇರಿ ಜಿಲ್ಲೆ ಹಿರೇಕೆರೂರಿನ ಪೊಲೀಸ್ ಮೈದಾನದಲ್ಲಿ ಇದೇ ದಿನಾಂಕ 10 ಹಾಗೂ 11 ರಂದು ನಡೆಯುವ 14ನೇ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇಂದು ನಡೆದಿದ್ದು, ಎರಡೂ ದಿನ ವಿವಿಧ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ನಗರ ಪಾಲಿಕೆ ಬಜೆಟ್ : ಇಂದು ನಾಗರಿಕರ ಸಭೆ
ಮಹಾನಗರ ಪಾಲಿಕೆಯ 2025-26ನೇ ಸಾಲಿನ ಆಯ-ವ್ಯಯ ಅಂದಾಜು ಪಟ್ಟಿ ತಯಾರಿಸಬೇಕಾಗಿದ್ದು, ಈ ಸಂಬಂಧ ಸಲಹೆ ಸೂಚನೆಗಳನ್ನು ನೀಡಲು ಇಂದು ಬೆಳಿಗ್ಗೆ 11 ಗಂಟೆಗೆ ಸಂಘ-ಸಂಸ್ಥೆಗಳು ಮತ್ತು ಸಾರ್ವಜನಿಕರ ಸಭೆಯನ್ನು ಕರೆಯಲಾಗಿದೆ.
ಇಂದು ರಾಜ್ಯ ಎಐಟಿಯುಸಿ ಸಮಿತಿ ಸಭೆ
ಎಐಟಿಯುಸಿ ರಾಜ್ಯ ಸಮಿತಿ ಸಭೆಯು ಮೈಸೂರಿನ ಇಂಟರ್ ನ್ಯಾಷನಲ್ ಯೂತ್ ಹಾಸ್ಟೆಲ್ ನಲ್ಲಿ ಇಂದು ಮತ್ತು ನಾಳೆ ನಡೆಯ ಲಿದೆ ಎಂದು ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಕಾಂ. ಆವರಗೆರೆ ಚಂದ್ರು ತಿಳಿಸಿದ್ದಾರೆ.
ಮಹಿಳೆಯರಿಗೆ ಕೈ ಕಸೂತಿ ತರಬೇತಿ
ಭಾರತ ವಿಕಾಸ ಪರಿಷತ್ ಗೌತಮ ಶಾಖೆ ದಾವಣಗೆರೆ ವತಿಯಿಂದ ಇಲ್ಲಿನ ವಿದ್ಯಾನಗರದಲ್ಲಿ ಮಹಿಳೆಯರಿಗೆ ಉಚಿತ ಕೈ ಕಸೂತಿ ತರಬೇತಿ ಅರ್ಜಿ ಆಹ್ವಾನಿಸಲಾಗಿದೆ.
ಜಾನಪದ ನೃತ್ಯ, ಜಾನಪದ ಗೀತೆ ಸ್ಪರ್ಧೆಯಲ್ಲಿ ಮಂಡ್ಯ ಪ್ರಥಮ
ನಗರದಲ್ಲಿ ಎರಡು ದಿನಗಳ ಕಾಲ ನಡೆದ ರಾಜ್ಯಮಟ್ಟದ ಯುವಜನೋತ್ಸವದಲ್ಲಿ ಉತ್ತಮ ಪ್ರದರ್ಶನ ನೀಡಿದ ಮಂಡ್ಯ ಜಿಲ್ಲೆಯ ಕಲಾವಿದರು ಜಾನಪದ ನೃತ್ಯ ಮತ್ತು ಜಾನಪದ ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದರು.
ಸಂಭ್ರಮದ ಬಸಾಪುರ ಶ್ರೀನಿವಾಸ ಶಾಲೆಯಲ್ಲಿ ರಜತ ಮಹೋತ್ಸವ
ಬಸಾಪುರದ ಶ್ರೀನಿವಾಸ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಿನ್ನೆ ಜರುಗಿದವು.
ಮನುಕುಲದ ಅಭಿವೃದ್ಧಿಗೆ ಇತಿಹಾಸದ ದಾಖಲೆಗಳೇ ಮಾರ್ಗಸೂಚಿ
ಹರಿಹರ : ಮನುಕುಲದ ಅಭಿವೃದ್ಧಿಗೆ ಇತಿಹಾಸದ ದಾಖಲೆಗಳೇ ಮಾರ್ಗಸೂಚಿ ಯಾಗಿದ್ದು, ಇತಿಹಾಸ ಎಂಬುದು ಮಾನವನ ಎಲ್ಲಾ ಬಗೆಯ ಚಟುವಟಿಕೆಗಳಿಗೆ ಸಂಬಂಧಿಸಿದ ಅಧ್ಯಯನದ ಅಂಗವಾಗಿದೆ
ಯಲವಟ್ಟಿ ಕೃಷಿ ಪತ್ತಿನ ಸಂಘದ ಅಧ್ಯಕ್ಷರಾಗಿ ಡಿ. ಬಸವನಗೌಡ, ಉಪಾಧ್ಯಕ್ಷರಾಗಿ ಖಲಂದರ್ ಸಾಬ್
ಮಲೇಬೆನ್ನೂರು : ಯಲವಟ್ಟಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಡಿ. ಬಸವನಗೌಡ ಮತ್ತು ಉಪಾಧ್ಯಕ್ಷರಾಗಿ ಖಲಂದರ್ ಸಾಬ್ ಅವರು ಬುಧವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನದಿಯಲ್ಲಿ ನಗ-ನಾಣ್ಯ ಬೆದಕುವ ತಂಡ.!
ಹರಿಹರ : ತುಂಗಭದ್ರಾ ನದಿಯಲ್ಲಿನ ನೀರು ಬಹಳಷ್ಟು ಕಡಿಮೆಯಾ ಗಿರುವ ಕಾರಣ, ನದಿ ತಳದಲ್ಲಿ ನಗ-ನಾಣ್ಯ ಬೆದಕುವ ತಂಡವೊಂದು ಕಂಡುಬಂದಿದೆ.
ಅಂತಾರಾಷ್ಟ್ರೀಯ ಕರಾಟೆ : ವಿಕಾಸ್ಗೆ ದ್ವಿತೀಯ ಸ್ಥಾನ
ಅಂತರಾಷ್ಟ್ರೀಯ ಮುಕ್ತ ಕರಾಟೆ ಚಾಂಪಿಯನ್ಶಿಪ್ ಸ್ಪರ್ಧೆಯಲ್ಲಿ ತಾಲ್ಲೂಕಿನ ಕುಂಚೂರು ಕೆರೆ ತಾಂಡಾದ ನಾಗರಾಜನಾಯ್ಕ ಅವರ ಪುತ್ರ 7ನೇ ತರಗತಿ ವಿದ್ಯಾರ್ಥಿವಿಕಾಸ್ ದ್ವಿತೀಯ ಸ್ಥಾನ ಪಡೆಯುವ ಮೂಲಕ ತಾಲ್ಲೂಕಿನ ಕೀರ್ತಿ ಹೆಚ್ಚಿಸಿದ್ದಾನೆ.
ಎಸ್ಸೆಸ್ ಆರೋಗ್ಯ ವಿಚಾರಿಸಿದ ಜಾಧವ್
ಖಾಸಗಿ ಆಸ್ಪತ್ರೆಯಲ್ಲಿರುವ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರನ್ನು ದೂಡಾ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಅವರು ಇಂದು ಭೇಟಿ ಮಾಡಿ,
ಆರೋಗ್ಯ ವಿಚಾರಿಸಿದರು.
ವೆಂಕಟೇಶ್ವರಪುರದಲ್ಲಿ ವೈಕುಂಠ ಏಕಾದಶಿ
ಧನುರ್ಮಾಸದ ಶುಕ್ಲ ಪಕ್ಷ ವೈಕುಂಠ ಏಕಾದಶಿಯಂದು ನಾಡಿದ್ದು ದಿನಾಂಕ 10ರ ಶುಕ್ರವಾರ ಬೆಳಗಿನ ಜಾವ 3.30 ರಿಂದ ಉತ್ತರ ದ್ವಾರ ದರ್ಶನ, ವಿಶೇಷ ಪಂಚಾಮೃತ ಅಭಿಷೇಕ, ದಿವ್ಯ ವಜ್ರ ಖಚಿತ ಆಭರಣ ಅಲಂಕಾರ ಸೇವೆಯನ್ನು ನಡೆಸಲಾಗುತ್ತದೆ.
ಪಂಚಪೀಠದ ಜಗದ್ಗುರುಗಳಿಂದ ಎಸ್ಸೆಸ್ಗೆ ಆಶೀರ್ವಾದ
ಇಲ್ಲಿನ ಮಣಿಪಾಲ್ ಆಸ್ಪತ್ರೆಯಲ್ಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಹಾಗೂ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರನ್ನು ಬೆಂಗಳೂರಿನಲ್ಲಿ ಪಂಚಪೀಠದ ಮೂವರು ಜಗದ್ಗುರುಗಳು ಇಂದು ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ರಾಷ್ಟ್ರೀಯ ಯುವಜನೋತ್ಸವ : ಅಶ್ವಿನಿ ಆಯ್ಕೆ
ನಗರದ ಎ.ವಿ.ಕೆ ಕಾಲೇಜಿನ ವಿದ್ಯಾರ್ಥಿನಿ ಅಶ್ವಿನಿ ಬಾಯಿ ಅವರು ದೆಹಲಿಯಲ್ಲಿ ಇದೇ ದಿನಾಂಕ 11 ಮತ್ತು 12ರಂದು ನಡೆಯಲಿರುವ `ವಿಕಸಿತ್ ಭಾರತ್ ಯಂಗ್ ಲೀಡರ್ಸ್ ಡೈಲಾಗ್' ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ.
ಮುಕ್ತಿ-ಧಾಮದ ಅಭಿವೃದ್ಧಿಗಾಗಿ ದಾನಿಗಳು ಮುಂದೆ ಬನ್ನಿ
ಭರಮಸಾಗರ : ಇಲ್ಲಿನ ಮುಕ್ತಿ-ಧಾಮದ ಅಭಿವೃದ್ಧಿಗಾಗಿ ಸಾಮಾಜಿಕ ಕಳಕಳಿ ಹೊಂದಿದ ದಾನಿಗಳು ದಾನದ ರೂಪದಲ್ಲಿ ಹಣ ಸಹಾಯ ಮಾಡಬಹುದಾಗಿದೆ.
ಆವರಗೆರೆಯಲ್ಲಿ ಗುರುವಂದನಾ, ಹಳೇ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ
ಸಮೀಪದ ಆವರಗೆರೆ ಗ್ರಾಮದ ಚಿಂದೋಡಿ ಲೀಲಾ ಕಲಾ ಭವನದಲ್ಲಿ ಭಾನು ವಾರ ಇಲ್ಲಿನ ಸರ್ಕಾರಿ ಪ್ರೌಢ ಶಾಲೆಯ 2001ನೇ ಸಾಲಿನ ಹಳೇ ವಿದ್ಯಾರ್ಥಿಗಳಿಂದ `ಗುರು ವಂದನಾ' ಹಾಗೂ `ಸ್ನೇಹ ಸಮ್ಮಿಲನ' ಕಾರ್ಯಕ್ರಮ ನಡೆಯಿತು.
ಜಗಳೂರಲ್ಲಿ ನಾಡಿದ್ದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ
ಇದೇ ಜ. 11 ಮತ್ತು 12 ರಂದು ದಾವಣಗೆರೆ ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನವು ಜಗಳೂರಿನ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.
ರಾಣೇಬೆನ್ನೂರು `ಮೆಗಾ ಮಾರ್ಕೆಟ್’ಗಿಲ್ಲ ಮುಕ್ತಿ !
ತಾಲ್ಲೂಕಿನ ಹೂಲಿಹಳ್ಳಿ ಹಾಗೂ ಕೂನಬೇವು ಗ್ರಾಮಗಳ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ರಾಣೇಬೆನ್ನೂರು ಕೃಷಿ ಉತ್ಪನ್ನ ಮಾರಾಟ ಸಮಿತಿಯ ಮೆಗಾ ಮಾರುಕಟ್ಟೆ ನಿರ್ಮಾಣಗೊಂಡು ಎರಡು ವರ್ಷಗಳಾಗುತ್ತಾ ಬಂದರೂ ಅಲ್ಲಿ ವ್ಯಾಪಾರ-ವಹಿವಾಟು ನಡೆಸುವ ಭಾಗ್ಯ ದೊರಕುತ್ತಿಲ್ಲ.
ಸರ್ಕಾರಿ ಬ್ಲಡ್ ಬ್ಯಾಂಕ್ ತೆರೆಯಲು ಒತ್ತಾಯ
ಕೊಟ್ಟೂರು : ಪಟ್ಟಣದಲ್ಲಿ ಸರ್ಕಾರಿ ಬ್ಲಡ್ ಬ್ಯಾಂಕ್ ಸ್ಥಾಪನೆ ಹಾಗೂ ಇಲ್ಲಿನ ಕ್ರೀಡಾಂಗಣ ಅಭಿವೃದ್ಧಿ ಮಾಡಬೇಕೆಂದು ಆಗ್ರಹಿಸಿ, ಹಳೇ ಕೊಟ್ಟೂರು ಸೇವಾ ಟ್ರಸ್ಟ್ ಸೋಮವಾರ ತಹಶೀಲ್ದಾರ್ ಮುಖೇನ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ
ಕೀಟಗಳ ನಿರ್ವಹಣೆಗೆ ಜೈವಿಕ ತಂತ್ರಜ್ಞಾನ ಬಳಕೆ ಸೂಕ್ತ
ಜಗಳೂರು : ಕಡಲೆ ಬೆಳೆಗಳಲ್ಲಿ ಕೀಟಗಳ ನಿರ್ವಹಣೆಗೆ ಜೈವಿಕ ತಂತ್ರಜ್ಞಾನ ಬಳಸುವುದು ಸೂಕ್ತ ಎಂದು ಸಸ್ಯ ಸಂರಕ್ಷಣಾ ತಜ್ಞ ಡಾ.ಟಿ.ಜಿ. ಅವಿನಾಶ್ ತಿಳಿಸಿದರು.
ಮಾತುಕತೆಗೆ ಮುಂದಾಗದಿದ್ದರೆ ರೈತ ಸಂಘದಿಂದ ಚಳವಳಿ: ಕೇಂದ್ರಕ್ಕೆ ಎಚ್ಚರಿಕೆ
ಹರಿಯಾಣದ ಶಂಭು ಗಡಿ ಯಲ್ಲಿ ರೈತರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹದ ಒತ್ತಾಯಗಳನ್ನು ತಕ್ಷಣವೇ ಸರ್ಕಾರ ಪರಿಹರಿಸಿ ಜೀವನ್ಮರಣದ ಮಧ್ಯೆ ಹೋರಾಡುತ್ತಿರುವ ಜಗತ್ ಸಿಂಗ್ ದಲ್ಲೈವಾಲಾರವರ ಪ್ರಾಣ ಉಳಿಸಬೇಕೆಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.
ವಾಲ್ಮೀಕಿ ಜಾತ್ರೆ ಸಮಿತಿ ಅಧ್ಯಕ್ಷ ಹಿರೇಮೇಗಳಗೇರಿ ಲಕ್ಕಳ್ಳಿ ಹನುಮಂತಪ್ಪ ಅವರಿಗೆ ಸನ್ಮಾನ
ಹರಪನಹಳ್ಳಿ : ಹರಿಹರ ತಾಲ್ಲೂಕು ರಾಜನಹಳ್ಳಿಯಲ್ಲಿ ಫೆಬ್ರವರಿ 8 ಮತ್ತು 9ರಂದು ಜರುಗುವ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರೆಮೇಗಳಗೇರಿ ಲಕ್ಕಳ್ಳಿ ಹನುಮಂತಪ್ಪ ಅವರನ್ನು ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಸನ್ಮಾನಿಸಿದರು.
ಅಥಣಿ ಪದವಿ ಪೂರ್ವ ಕಾಲೇಜಿನಲ್ಲಿ ಕೌಶಲ್ಯ ಆಧಾರಿತ ಕಾರ್ಯಕ್ರಮ
ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ಓದಿನಲ್ಲಿ ನೆನಪಿನ ಶಕ್ತಿ ಹೆಚ್ಚಾಗಲು, ಓದಿದ್ದನ್ನು ಟಿಪ್ಪಣಿಯ ರೂಪದಲ್ಲಿ ಬರೆದಿಟ್ಟುಕೊಳ್ಳುವುದರಿಂದ ಪರೀಕ್ಷೆಯಲ್ಲಿ ಯಶಸ್ವಿಯಾಗಲು, ಉತ್ತಮ ಅಂಕ ಗಳಿಸಲು ಸಾಧ್ಯವೆಂದು ಡಾ. ವಿವೇಕಾನಂದ ಜಿ. ತಿಳಿಸಿದರು.
ಗೊಲ್ಲರಹಳ್ಳಿಯಲ್ಲಿ 10ರಂದು ವೈಕುಂಠ ಏಕಾದಶಿ
ಸಮೀಪದ ಗೊಲ್ಲರಹಳ್ಳಿ ಶ್ರೀ ಲಕ್ಷ್ಮೀ ವೆಂಕಟೇಶ್ವರ ಸ್ವಾಮಿ ಶ್ರೀದೇವಿ ಭೂದೇವಿ ದೇವಸ್ಥಾನದಲ್ಲಿ ಇದೇ ದಿನಾಂಕ 10ರ ಶುಕ್ರವಾರ ವೈಕುಂಠ ಏಕಾದಶಿಯ ವಿಶೇಷ ಪೂಜೆ ನೆರವೇರಿಸಲಾಗುವುದು.
ಜಿಗಳಿ : ಸರ್ಕಾರಿ ಶಾಲೆಯಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಗುದ್ಧಲಿ ಪೂಜೆ
ಮಲೇಬೆನ್ನೂರು : ಜಿಗಳಿ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಂಗಳೂರಿನ ಕಾಲಿನ್ಸ್ ಏರೋ ಸ್ಪೇಸ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಶೌಚಾಲಯ ನಿರ್ಮಾಣಕ್ಕೆ ಬುಧವಾರ ಗುದ್ಧಲಿ ಪೂಜೆ ಮಾಡಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಮನಸ್ಸಿಗೆ ಉಲ್ಲಾಸ ನೀಡುವ ಶಕ್ತಿ ಸಂಗೀತಕ್ಕಿದೆ
ಮನುಷ್ಯನ ಜೀವನದಲ್ಲಿ ರಂಜನೆ ಬಹಳ ಅವಶ್ಶ, ಜಂಜಾಟದ ಜೀವನದಲ್ಲಿ ಮನಸ್ಸಿಗೆ ಉಲ್ಲಾಸ ದೊರೆಯುವುದು ಸಂಗೀತದಿಂದ ಮಾತ್ರ ಸಾಧ್ಯ ಎಂದು ಸಮಾಜ ಸೇವಕರಾದ ಶ್ರೀಮತಿ ಪುಷ್ಪಾ ಗುಂಡಿ ಸಿದ್ದೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ರಮಬದ್ಧ ಅಭ್ಯಾಸ ವಿದ್ಯಾರ್ಥಿ ಜೀವನದ ಅಡಿಪಾಯ
ವಿದ್ಯಾರ್ಥಿಗಳು ಪಠೇತರ ಚಟುವಟಿಕೆಗಳ ಜೊತೆಗೆ ನಿರಂತರವಾದ ಕಲಿಕೆಗೆ ಒತ್ತು ನೀಡಬೇಕು. ಕ್ರಮಬದ್ಧ ಅಭ್ಯಾಸ ವಿದ್ಯಾರ್ಥಿ ಜೀವನದ ಅಡಿಪಾಯವಾಗಿದೆ ಎಂದು ಹಿರಿಯ ನ್ಯಾಯಾಧೀಶರಾದ ಸಿ. ನಾಗೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಳ್ಳಿ : ನಾಳೆ ವೈಕುಂಠ ಏಕಾದಶಿ ಪೂಜೆ, ತಿರುಕಲ್ಯಾಣ, ಪಲ್ಲಕ್ಕಿ ಉತ್ಸವ
ಮಲೇಬೆನ್ನೂರು : ಭಾನುವಳ್ಳಿ ಗ್ರಾಮದ ಆರಾಧ್ಯ ದೈವ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ನಾಡಿದ್ದು ದಿನಾಂಕ 10ರ ಶುಕ್ರವಾರ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ಹಾಗೂ ದ್ವಿತೀಯ ಬಾರಿಗೆ ತಿರುಕಲ್ಯಾಣ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ರಾಜನಹಳ್ಳಿ ಮಠದಲ್ಲಿ ಇಂದು ವಾಲ್ಮೀಕಿ ಜಾತ್ರೆಯ ಪೂರ್ವಭಾವಿ ಸಭೆ
7 ನೇ ವರ್ಷದ ವಾಲ್ಮೀಕಿ ಜಾತ್ರೆ ಅಂಗವಾಗಿ ಇಂದು ಮಧ್ಯಾಹ್ನ 2 ಗಂಟೆಗೆ ಹರಿಹರ ತಾಲ್ಲೂಕಿನ ವಾಲ್ಮೀಕಿ ನಾಯಕ ಸಮಾಜದವರ ಪೂರ್ವಭಾವಿ ಸಭೆಯನ್ನು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ಕರೆಯಲಾಗಿದೆ
ರಾಣೇಬೆನ್ನೂರಿನಲ್ಲಿ `ಕರ್ನಾಟಕ ವೈಭವ’
ರಾಣೇಬೆನ್ನೂರು : ಬರುವ ಫೆಬ್ರವರಿ 7, 8 ಮತ್ತು 9 ರಂದು ನಗರದಲ್ಲಿ ನಡೆಯುವ `ಕರ್ನಾಟಕ ವೈಭವ' ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಜೋಗತಿ ಮಂಜಮ್ಮ, ಹಿನ್ನೆಲೆ ಗಾಯಕರಾದ ಸಂಗೀತಾ ಕಟ್ಟಿ ಮುಂತಾದವರು ಆಗಮಿಸುವರು
ತಾಜ್ ಶೌಕತ್ ಅಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ
ದಾವಣಗೆರೆ ದಕ್ಷಿಣ ವಲಯದ ಆಶ್ರಯದಲ್ಲಿ 2024-25ನೇ ಸಾಲಿನ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮವು ನಗರದ ಬಿಇಎ ಪ್ರೌಢ ಶಾಲೆಯಲ್ಲಿ ಕಳೆದ ವಾರ ನಡೆಯಿತು.
ಕರಾಟೆ : ಡ್ರಾಗನ್ ವಾರಿಯರ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ಮಕ್ಕಳಿಗೆ ಪ್ರಶಸ್ತಿ
ಶಿವಮೊಗ್ಗ ಡಿಸ್ಟಿಕ್ ಸ್ಫೋರ್ಟ್ಸ್ ಕರಾಟೆ ಅಸೋಸಿಯೇಷನ್ ಆಯೋಜಿಸಿದ್ದ 2 ನೇ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಸ್ಪರ್ಧೆಗಳಲ್ಲಿ ನಗರದ ಡ್ರಾಗನ್ ವಾರಿಯರ್ ಮಾರ್ಷಲ್ ಆರ್ಟ್ಸ್ ಅಸೋಸಿಯೇಷನ್ ತಂಡದ ಮಕ್ಕಳು ಭಾಗವಹಿಸಿ ಪ್ರಶಸ್ತಿ ಪಡೆದಿರುತ್ತಾರೆ.
ಯುವ ಪೀಳಿಗೆಗೆ ಪರಂಪರೆ ಪರಿಚಯಿಸುವ ಕೆಲಸ ಆಗಬೇಕು
ಹರಿಹರ : ಮುಂದಿನ ಪೀಳಿಗೆಗೆ ಸಾಹಿತ್ಯದ ಮೂಲಕ ಸಾಂಸ್ಕೃತಿಕ ಪರಂಪರೆಗಳನ್ನು ಪರಿಚಯಿಸುವಂತಹ ಕೆಲಸವು ಹಿರಿಯ ಸಾಹಿತಿ ಗಳಿಂದ ಆಗುವಂತಾಗಲಿ ಎಂದು ಶಾಸಕ ಬಿ.ಪಿ ಹರೀಶ್ ಆಶಿಸಿದರು.
ಪೋಷಕರು ಮಕ್ಕಳ ಮೇಲೆ ಒತ್ತಡ ಹೇರುತ್ತಿದ್ದಾರೆ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪೋಷಕರು ಮಕ್ಕಳ ಮೇಲೆ ತೀವ್ರ ಒತ್ತಡ ಹೇರುತ್ತಿದ್ದಾರೆ, ಇದು ಸೂಕ್ತವಲ್ಲ ಎಂದು ಡಾ. ಮನೋಜ್ಕುಮಾರ್ ಎಸ್. ಪೂಜಾರ್ ಅಭಿಪ್ರಾಯಪಟ್ಟರು.
ಮೈದೂರು ಗ್ರಾಮ ಪಂಚಾಯ್ತಿ ಅಧ್ಯಕ್ಷರಾಗಿ ಸರಸ್ವತಿ : ಲಾಟರಿ ಮೂಲಕ ಒಲಿದ ಅದೃಷ್ಟ
ಹರಪನಹಳ್ಳಿ : ತಾಲ್ಲೂಕಿನ ಮೈದೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮತ್ತಿಹಳ್ಳಿ ಸರಸ್ವತಿ ಆಯ್ಕೆಯಾಗಿದ್ದಾರೆ.
ಡಿಸೋಜ ಭಾವಚಿತ್ರ ಸೆರೆ ಹಿಡಿದಿದ್ದ ಹೆಚ್ಬಿಎಂ
ನಿನ್ನೆ ದೈವಾಧೀನ ರಾದ ನಾಡಿನ ಖ್ಯಾತ ಸಾಹಿತಿ ನಾ. ಡಿಸೋಜ ಅವರು ಈಗ್ಗೆ ಸುಮಾರು 35 ವರ್ಷಗಳ ಹಿಂದೆ ನಗರದ ಹಿರಿಯ ಪತ್ರಿಕಾ ಛಾಯಾಗ್ರಾಹಕ ಹೆಚ್.ಬಿ. ಮಂಜುನಾಥರ ಫೈನ್ ಆರ್ಟ್ ಫೋಟೋ ಸ್ಟುಡಿಯೋಗೆ ಬಂದು ತೆಗೆಸಿಕೊಂಡ ಅವರು ತುಂಬಾ ಮೆಚ್ಚಿಕೊಂಡ ಫೋಟೋ ಇದು.
ವಿಕಸಿತ ಭಾರತ ಯಂಗ್ ಲೀಡರ್ ಡೈಲಾಗ್ ಚಾಂಪಿಯನ್ಶಿಪ್ಗೆ ಜಿ. ರೇವತಿ ಆಯ್ಕೆ
ನಗರದ ಜಿಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿದ್ಯಾರ್ಥಿನಿ ಜಿ. ರೇವತಿ ಅವರು ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ ಕಾರ್ಯಕ್ರಮಕ್ಕಾಗಿ ದೇಶಾದ್ಯಂತ ಆಯ್ಕೆಯಾಗಿರುವ ವಿದ್ಯಾರ್ಥಿಗಳಲ್ಲೊಬ್ಬರಾಗಿ ಮಾನ್ಯತೆ ಪಡೆದಿದ್ದಾರೆ.
ನಗರದ ಲಯನ್ಸ್ ಕ್ಲಬ್ಗೆ ಇಂದು ಪ್ರಾಂತೀಯ ಅಧ್ಯಕ್ಷ ಸತೀಶ್ ಭೇಟಿ
ಲಯನ್ಸ್ ಪ್ರಾಂತೀಯ ಅಧ್ಯಕ್ಷ ವೈ.ಬಿ. ಸತೀಶ್ ಅವರು ದಾವಣಗೆರೆ ಲಯನ್ಸ್ ಕ್ಲಬ್ಗೆ ಇಂದು ಅಧಿಕೃತ ಭೇಟಿ ನೀಡಲಿದ್ದು, ಈ ಸಂಬಂಧ ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.