ಹರಪನಹಳ್ಳಿ,ಜ.8- ಹರಿಹರ ತಾಲ್ಲೂಕು ರಾಜನಹಳ್ಳಿಯಲ್ಲಿ ಫೆಬ್ರವರಿ 8 ಮತ್ತು 9ರಂದು ಜರುಗುವ ವಾಲ್ಮೀಕಿ ಜಾತ್ರಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಹಿರೆಮೇಗಳಗೇರಿ ಲಕ್ಕಳ್ಳಿ ಹನುಮಂತಪ್ಪ ಅವರನ್ನು ಶಾಸಕರಾದ ಎಂ.ಪಿ.ಲತಾ ಮಲ್ಲಿಕಾರ್ಜುನ್ ಸನ್ಮಾನಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ.ಅಂಜಿನಪ್ಪ, ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಕಂಚಿಕೇರಿ ಜಯಲಕ್ಷ್ಮಿ, ವಾಲ್ಮೀಕಿ ನಾಯಕ ಸಮಾಜದ ಪ್ರಧಾನ ಕಾರ್ಯದರ್ಶಿ ಜಿಟ್ಟಿನಕಟ್ಟಿ ಎಚ್.ಕೆ.ಮಂಜುನಾಥ. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ, ಸದಸ್ಯರಾದ ಡಿ.ಅಬ್ದುಲ್ ರಹಿಮಾನ್ ಸಾಬ್, ಗೊಂಗಡಿ ನಾಗರಾಜ, ಲಾಟಿ ದಾದಾಪೀರ್, ಮುಖಂಡರಾದ ಬಾಣದ ಅಂಜಿನಪ್ಪ, ಸಾಸ್ವಿಹಳ್ಳಿ ನಾಗರಾಜ, ಮೈದೂರು ರಾಮಣ್ಣ, ನೀಲಗುಂದ ವಾಗೀಶ ಸೇರಿದಂತೆ ಇತರರು ಇದ್ದರು.