ವಿದೇಶಿ ಆಕ್ರಮಣಕಾರರಿಂದ ಭಾರತ ರಕ್ಷಿಸಿದ್ದು ಛತ್ರಪತಿ ಶಿವಾಜಿ

ಹರಿಹರ, ಏ.18- ವಿದೇಶಿ ಆಕ್ರಮಣಕಾ ರರಿಂದ ಭಾರತವನ್ನು ರಕ್ಷಿಸಿದ ಖ್ಯಾತಿ ಛತ್ರಪತಿ ಶಿವಾಜಿ ಮಹಾರಾಜರಿಗೆ ಸಲ್ಲುತ್ತದೆ ಎಂದು ಶಾಸಕ ಎಸ್.ರಾಮಪ್ಪ ಹೇಳಿದರು.

ತಾಲ್ಲೂಕಿನ ಪಾಮೇನಹಳ್ಳಿ ಗ್ರಾಮದಲ್ಲಿ ಯಲ್ಲಮ್ಮ ದೇವಸ್ಥಾನ ಮುಂಭಾಗ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬ್ರಿಟಿಷರು, ಪೋರ್ಚುಗೀಸರು, ಮೊಘ ಲರು, ಫ್ರೆಂಚರು, ಮಂಗೋಲಿಯನ್ನರು ಸೇರಿದಂತೆ ಹತ್ತಾರು ವಿದೇಶಿಯರು ಭಾರತ ವನ್ನು ನೂರಾರು ವರ್ಷ ಆಳಿದರು. ಆಳುವ ಜೊತೆಗೆ ಇಲ್ಲಿನ ಅಪಾರ ಸಂಪತ್ತನ್ನು ಲೂಟಿ ಮಾಡಿ ಸಾಗಿಸಿದರು. ಇಂತಹ ವಿದೇಶಿ ಅಕ್ರಮ ಣಕಾರರ ವಿರುದ್ಧ ವೀರಾವೇಶದಿಂದ ಹೋರಾ ಡಿದ ಭಾರತದ ಆಡಳಿತಗಾರರಲ್ಲಿ ಶಿವಾಜಿ ಮಹಾರಾಜರು ಪ್ರಮುಖರಾಗಿದ್ದಾರೆಂದರು.

ಸಾಮಾನ್ಯ ವ್ಯಕ್ತಿಯಾಗಿದ್ದ ಶಿವಾಜಿ, ರಾಷ್ಟ್ರ ಭಕ್ತಿ ಹೊಂದಿದ ಗೆಳೆಯರ ಗುಂಪನ್ನು ಕಟ್ಟಿ ಕೊಂಡು, ಗೆರಿಲ್ಲಾ ವಾರ್‍ನಲ್ಲಿ ತರಬೇತಿ ಪಡೆದು ವಿದೇಶಿಯರ ವಿರುದ್ಧ ಮಾರಣಾಂತಿಕ ಆಘಾತ ನೀಡಿದರು. ಬೆರಳೆಣಿಕೆಯಷ್ಟು ಶಿವಾಜಿ ಗೆಳೆ ಯರ ಗುಂಪು ದೊಡ್ಡ ಪ್ರಮಾಣದ ವಿದೇಶಿ ಸೈನಿ ಕರನ್ನು ಮಣ್ಣು ಮುಕ್ಕಿಸುವಲ್ಲಿ ಸಫಲವಾಯಿತು.

ದೇಶದ ಸಂಪತ್ತು, ಸಂಸ್ಕೃತಿ ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಈ ಗ್ರಾಮದಲ್ಲಿ ಸ್ಥಾಪಿಸುತ್ತಿರುವುದು ಶ್ಲ್ಯಾಘನೀಯ. ಇದಕ್ಕಾಗಿ ಅಗತ್ಯ ಸಹಕಾರ ನೀಡುವುದಾಗಿ ಶಾಸಕರು ಭರವಸೆ ನೀಡಿದರು. ನಂತರ ಶಾಸಕರನ್ನು ಗ್ರಾಮಸ್ಥರು ಸತ್ಕರಿಸಿದರು. 

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಹೆಚ್.ಮರಿಯೋಜಿರಾವ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಲ್.ಬಿ.ಹನುಮಂತಪ್ಪ, ಸಾರಥಿ ಗ್ರಾ.ಪಂ ಅಧ್ಯಕ್ಷೆ ಮಂಜಮ್ಮ ಕಠಾರಿ, ಉಪಾಧ್ಯಕ್ಷೆ ದ್ಯಾಮಮ್ಮ ಕಜರಿ, ಸದಸ್ಯರಾದ ಪಿ.ಎಸ್.ಹನುಮಂತಪ್ಪ, ಪದ್ಮಶಾಲಿ ರತ್ನಮ್ಮ, ಗ್ರಾ.ಪಂ ಮಾಜಿ ಅಧ್ಯಕ್ಷ ಮಾರುತಿರಾವ್, ಸೇವಾದಳ ಜಿಲ್ಲಾ ಉಪಾಧ್ಯಕ್ಷ ಮಂಜುನಾಥ ಸಂಭೋಜಿ, ನಿವೃತ್ತ ಪಿಡಿಒ ಸ್ವಾಮಿಲಿಂಗಪ್ಪ, ಹೆಚ್.ಅಂಜಿನಪ್ಪ, ಸೆಂಟ್ರಿಂಗ್ ಪರಸಪ್ಪ ಶ್ಯಾಮನೂರು, ಸಾರಥಿ ನಾಗರಾಜ್ ಸ್ವಾಮಿ ಹಾಗೂ ಗ್ರಾಮದ ಹಿರಿಯರಿದ್ದರು.

error: Content is protected !!