ಕೊಟ್ಟೂರೇಶ್ವರ ಸ್ವಾಮಿಯ ಹುಂಡಿ ಪೆಟ್ಟಿಗೆ ಎಣಿಕೆ ಮೊತ್ತ ರೂ. 47,90,920

ಕೊಟ್ಟೂರೇಶ್ವರ ಸ್ವಾಮಿಯ ಹುಂಡಿ ಪೆಟ್ಟಿಗೆ ಎಣಿಕೆ ಮೊತ್ತ ರೂ. 47,90,920

ಕೊಟ್ಟೂರು, ಏ. 19 –  ಪಟ್ಟಣದ ಆರಾಧ್ಯ ದೈವ, ಪವಾಡ ಪುರುಷ ಎಂದೇ ಪ್ರಖ್ಯಾತವಾಗಿರುವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಹುಂಡಿ ಪೆಟ್ಟಿಗೆ ಎಣಿಕೆ ದೇವಸ್ಥಾನದ ಹಿಂಭಾಗದಲ್ಲಿ ಇರುವ ಸಭಾಂಗಣದಲ್ಲಿ ಪ್ರಾರಂಭಿಸಲಾ ಯಿತು. 6 ತಾತ್ಕಾಲಿಕ, 6 ದೊಡ್ಡ ಹುಂಡಿ ಪೆಟ್ಟಿಗೆ ಸೇರಿದಂತೆ ಒಟ್ಟು 12 ಹುಂಡಿ ಪೆಟ್ಟಿಗೆ ಎಣಿಕೆ  ಮಾಡುತ್ತಿದ್ದಾರೆ ಎಂದು  ದೇವಸ್ಥಾನದ ಕಾರ್ಯನಿರ್ವಣಾಧಿಕಾರಿ ಪಿ. ಶಾಂತಮ್ಮ ತಿಳಿಸಿದರು. ಶ್ರೀ ಗುರು ಬಸವೇಶ್ವರ ಸ್ವಾಮಿ ದೇವಸ್ಥಾನದ ಹುಂಡಿ ಎಣಿಕೆ ಮೊತ್ತ ರೂ 47,90,920 ಗಳು ಸಂಗ್ರಹಣೆ ಆಗಿರುತ್ತದೆ. 

ಈ ಸಂದರ್ಭದಲ್ಲಿ ಹಣ ಎಣಿಕೆಯಲ್ಲಿ ಇಂದು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಧರ್ಮಕರ್ತರಾದ ಶೇಖರಯ್ಯ, ಬ್ಯಾಂಕಿನ ಮ್ಯಾನೇಜರ್ ಶಿವರಾಜ್, ಅಧೀಕ್ಷಕರು ಭುವನೇಶ್ವರಿ, ಪ್ರದೀಪ್, ಕಾರ್ತಿಕ, ಸುರೇಶ್ ಸೇರಿ ದಂತೆ ಅನೇಕರು ಉಪಸ್ಥಿತರಿದ್ದರು

error: Content is protected !!