ಕೊಪ್ಪದಲ್ಲಿ ಸಂಭ್ರಮದ ಉಚ್ಛಾಯ

ಕೊಪ್ಪದಲ್ಲಿ ಸಂಭ್ರಮದ ಉಚ್ಛಾಯ

ಮಲೇಬೆನ್ನೂರು, ಮೇ 12 – ಕೊಪ್ಪ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಆಂಜನೇಯ ಸ್ವಾಮಿಯ ಉಚ್ಛಾಯದ (ಸಣ್ಣ ರಥ)  ರಥೋತ್ಸವವು ಶುಕ್ರವಾರ ಬೆಳಿಗ್ಗೆ ಸಂಭ್ರಮದಿಂದ ಜರುಗಿತು. 

ಗ್ರಾಮದ ಮಹಿಳೆಯರ ಪೂರ್ಣಕುಂಭ ಕಳಸ ಮತ್ತು ಹಲಗೆ, ಜಾಂಜ್ ಮೇಳ, ಡೊಳ್ಳು, ಶಂಖ-ಜಾಗಟೆ ಸೇರಿದಂತೆ ಮುಂತಾದ ಕಲಾ ತಂಡಗಳು ರಥೋತ್ಸವಕ್ಕೆ ಮೆರಗು ತಂದವು. ರಥವು ಬನ್ನಿ ಮರದ ವರೆಗೆ ಆಗಮಿಸಿ, ಪುನಃ ಆಂಜನೇಯ ದೇವಸ್ಥಾನ ತಲುಪಿತು. ನಂತರ ದೇವರು ಬೇಟೆಯಾಡುವ, ಭೂತನ ಸೇವೆ ಕಾರ್ಯಕ್ರಮ ನಡೆದವು. ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಸಂಜೆ ಓಕಳಿ ನಡೆಯಿತು. ಅತೀ ಪುಟ್ಟ ಗ್ರಾಮವಾಗಿರುವ ಕೊಪ್ಪದಲ್ಲಿ ಎಂಟು ದೇವಸ್ಥಾನಗಳಿರುವುದು ವಿಶೇಷವಾಗಿದೆ. 

error: Content is protected !!