ಸರ್ಕಾರ ಉಚಿತ ಕೊಡುಗೆ ನೀಡುವ ಬದಲಿಗೆ ಜನರಿಗೆ ದುಡಿಮೆಯ ಮಾರ್ಗ ತೋರಿಸಬೇಕು

ಸರ್ಕಾರ ಉಚಿತ ಕೊಡುಗೆ ನೀಡುವ ಬದಲಿಗೆ  ಜನರಿಗೆ ದುಡಿಮೆಯ ಮಾರ್ಗ ತೋರಿಸಬೇಕು

ಮಲೇಬೆನ್ನೂರು : ಸಾಮೂಹಿಕ ವಿವಾಹ ಸಮಾರಂಭದಲ್ಲಿ ರಟ್ಟಿಹಳ್ಳಿ ಶ್ರೀ ಅಭಿಮತ

ಮಲೇಬೆನ್ನೂರು, ಮೇ 12- ಆರ್ಥಿಕ ಹೊರೆ ತಗ್ಗಿಸುವ ಸಾಮೂಹಿಕ ವಿವಾಹಗಳು ಸಮಾಜದಲ್ಲಿ ಹೆಚ್ಚಾಗಬೇಕು. ಆ ಮೂಲಕ ದುಂದು ವೆಚ್ಚದ ಅದ್ಧೂರಿ ಮದುವೆಗಳಿಗೆ ಕಡಿವಾಣ ಹಾಕಬೇಕೆಂದು ರಟ್ಟಿಹಳ್ಳಿ ಕಬ್ಬಿಣ ಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಅವರು, ಶುಕ್ರವಾರ ಮಲೇಬೆನ್ನೂರು ಪಟ್ಟಣದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ವತಿಯಿಂದ ಆಂಜನೇಯ ಸ್ವಾಮಿ ರಥೋತ್ಸವ ಹಾಗೂ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ 18ನೇ ವರ್ಷದ ಸಾಮೂಹಿಕ ವಿವಾಹ ಮಹೋತ್ಸವವನ್ನು ದೀಪ ಬೆಳಗಿಸಿ, ಉದ್ಘಾಟಿಸಿ ಮಾತನಾಡಿದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ವಧು-ವರರು ಅತ್ತೆ-ಮಾವರನ್ನು ತಂದೆ-ತಾಯಿಯಂತೆ ನೋಡಿ ಕೊಳ್ಳಬೇಕು. ಉತ್ತಮ ಸಂತತಿಯನ್ನು  ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕೆಂದು ಹೇಳಿದರು.

`ಕನ್ಯೆ ಕೊಡುವವರು ಮನೆ, ಅಡಿಕೆ ತೋಟ ಇರಬೇಕು.’ `ತಂದೆ-ತಾಯಿ ಇರಬಾರದೆಂಬ’ ಮನೋಭಾವನೆಯಿಂದ ಹೊರಬಂದು ವಿಶಾಲ ಮನಸ್ಸಿನಿಂದ ಕನ್ಯಾದಾನ ಮಾಡಬೇಕೆಂದು ಹೆಣ್ಣುಮಕ್ಕಳ ತಂದೆ-ತಾಯಿಗಳಿಗೆ ಸ್ವಾಮೀಜಿ ಕಿವಿಮಾತು ಹೇಳಿದರು.

ಸರ್ಕಾರ ಉಚಿತ ಕೊಡುಗೆಗಳನ್ನು ನೀಡುವ ಬದಲಿಗೆ ಜನರಿಗೆ ದುಡಿಮೆಯ ಮಾರ್ಗ ತೋರಿಸಬೇಕೆಂದು ರಟ್ಟಿಹಳ್ಳಿ ಸ್ವಾಮೀಜಿ ಸರ್ಕಾರಕ್ಕೆ ಮನವಿ ಮಾಡಿದರು.

ಚಿತ್ರದುರ್ಗ ಕುಂಬಾರ ಗುರುಪೀಠದ ಶ್ರೀ ಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಆಂಜನೇಯ ಸ್ವಾಮಿ ದೇವಸ್ಥಾನ ಕಮಿಟಿ ಅಧ್ಯಕ್ಷ ಕಣ್ಣಾಳ್ ಧರ್ಮಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ಜಿ.ಪಂ. ಮಾಜಿ ಸದಸ್ಯ ಬಿ.ಎಂ.ವಾಗೀಶ್ ಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ನಂದಿ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ವೀರಯ್ಯ ಮಾತನಾಡಿದರು.

ದೇವಸ್ಥಾನ ಕಮಿಟಿ ಉಪಾಧ್ಯಕ್ಷ ಮುದೇಗೌಡ್ರ ಬಸವರಾಜಪ್ಪ, ಖಜಾಂಚಿ ಪೂಜಾರ್ ಗಂಗೇನಳ್ಳಪ್ಪ, ಗಂಗಾಮತ ಸಮಾಜದ ಹಿರಿಯ ಮುಖಂಡ ಕಣ್ಣಾಳ್ ಪರಶುರಾಮಪ್ಪ, ತಾ. ಕುರುಬ ಸಮಾಜದ ಅಧ್ಯಕ್ಷ ಪೂಜಾರ್ ಹಾಲೇಶಪ್ಪ, ಗಂಗಾಮತ ಸಂಘದ ಅಧ್ಯಕ್ಷ ಅಡ್ಡಮನೆ ಧರ್ಮಣ್ಣ, ಪುರಸಭೆ ಸದಸ್ಯರಾದ ಗೌಡ್ರ ಮಂಜಣ್ಣ, ಬಿ.ಮಂಜುನಾಥ್, ಸಾಬೀರ್ ಅಲಿ, ಭೋವಿಕುಮಾರ್, ಭಾನುವಳ್ಳಿ ಸುರೇಶ್, ಕೆ.ಪಿ.ಗಂಗಾಧರ್, ಪಿ.ಆರ್.ರಾಜು, ಪಿ.ಆರ್.ಕುಮಾರ್, ಎಕ್ಕೆಗೊಂದಿ ಕರಿಯಪ್ಪ, ಬೆಣ್ಣೆಹಳ್ಳಿ ಬಸವರಾಜ್, ವರ್ತಕ ಎಂ.ಜಿ.ಗಜಾನನ, ಕಣ್ಣಾಳ್ ನಾಗರಾಜ್, ಪಿ.ಹೆಚ್.ಶಿವಕುಮಾರ್, ಕಣ್ಣಾಳ್ ಹನುಮಂತಪ್ಪ, ಕಡ್ಲೇಗೊಂದಿ ನಾಗರಾಜಪ್ಪ, ಹೊಸಳ್ಳಿ ಶೇಖರಪ್ಪ, ಹಿಂಡಸಘಟ್ಟಿ ತಿಪ್ಪೇಸ್ವಾಮಿ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ಎಸ್‌ಬಿಕೆಎಂ ಶಾಲೆಯ ಮುಖ್ಯ ಶಿಕ್ಷಕ ದಂಡಿ ತಿಪ್ಪೇಸ್ವಾಮಿ ಸ್ವಾಗತಿಸಿದರು. ಬೀರಲಿಂಗೇಶ್ವರ ಶಾಲೆಯ ಮುಖ್ಯ ಶಿಕ್ಷಕ ಕರಿಬಸಪ್ಪ ನಿರೂಪಿಸಿದರು. 

error: Content is protected !!