ಸರ್ಕಾರಿ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಬೇಕು : ಸಂಸದ ವೈ. ದೇವೇಂದ್ರಪ್ಪ

ಸರ್ಕಾರಿ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಬೇಕು : ಸಂಸದ ವೈ. ದೇವೇಂದ್ರಪ್ಪ

 ಅರಸೀಕೆರೆ ಆರೋಗ್ಯ ಕೇಂದ್ರದಲ್ಲಿ ನಡೆದ ವೈದ್ಯಕೀಯ ಶಿಬಿರ

ಹರಪನಹಳ್ಳಿ, ಅ.26- ಸರ್ಕಾರದ ಯೋಜನೆಗಳು ಕೇವಲ ಪುಸ್ತಕಗಳಿಗೆ ಸೀಮಿತವಾಗಬಾರದು, ಅರ್ಹ ಪ್ರತಿಯೊಬ್ಬರಿಗೂ  ತಲುಪುವಂತಾಗಬೇಕು. ಆಗ ಮಾತ್ರ  ಯೋಜನೆಗಳಗೆ ಅರ್ಥ ಸಿಗುತ್ತದೆ ಎಂದು ಸಂಸದ  ವೈ. ದೇವೇಂದ್ರಪ್ಪ  ನುಡಿದರು.

ತಾಲ್ಲೂಕಿನ ಅರಸೀಕೆರೆ ಗ್ರಾಮ ದ ಸಮುದಾಯ ಆರೋಗ್ಯ ಕೇಂದ್ರ ದಲ್ಲಿ ಆಯುಷ್ಮಾನ್ ಭವಃ ಅಭಿಯಾ ನದಡಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ವೈದ್ಯಕೀಯ ಶಿಬಿರವನ್ನು  ಉದ್ಘಾ ಟಿಸಿ ಸಂಸದರು ಮಾತನಾಡಿದರು. 

ಆಯುಷ್ಮಾನ್ ಭವಃ ಯೋಜನೆಯು ಪ್ರತಿಯೊಂದು ಮನೆ ಮನೆಗೂ ತಲುಪಿಸಿ, ಇದರ ಬಗ್ಗೆ ಮಾಹಿತಿ ನೀಡಬೇಕು, ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು, ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳ ಬೇಕು. ತಾಲ್ಲೂಕಿನಲ್ಲಿಯೇ ಅರಸೀ ಕೆರೆ ದೊಡ್ಡ ಹೋಬಳಿ, ಆರೋಗ್ಯ ಕೇಂದ್ರದಲ್ಲಿ ಡಾಕ್ಟರ್‌ಗಳು ಹಾಗೂ ಸಿಬ್ಬಂದಿ ಕೊರತೆಯಿದೆ, ಏಕಾಏಕಿ ನಾಲ್ಕು ನರ್ಸ್ ಗಳನ್ನು ವರ್ಗಾವಣೆ ಮಾಡಿ ಸಮಸ್ಯೆ ಮಾಡಿದ್ದಾರೆ.

ಈ ಸಮುದಾಯ ಆರೋಗ್ಯ ಕೇಂದ್ರಕ್ಕೆ ಎಂಟು ಜನ ನರ್ಸ್‌ಗಳು ಬೇಕು, ಆದರೆ ಕೇವಲ ಇಬ್ಬರು ನರ್ಸ್ ಗಳು ಮಾತ್ರ ಇದ್ದಾರೆ, ಇನ್ನು ಮುಂದೆ ಸಿಬ್ಬಂದಿಗಳ ಕೊರತೆಯಾಗ ದಂತೆ ನೋಡಿಕೊಳ್ಳಬೇಕೆಂದು ಅಧಿ ಕಾರಿಗಳಿಗೆ ತಾಕೀತು ಮಾಡಿದರು.

ಕೆರೆಗುಡಿಹಳ್ಳಿ ಹಾಲೇಶ್ ಮಾತನಾಡಿ, ಸರ್ಕಾರಿ ಶಾಲೆ, ಆಸ್ಪತ್ರೆಗಳಲ್ಲಿ ಕಾಳಜಿ ಇಲ್ಲದಿದ್ದರಿಂದ ಖಾಸಗಿ ಶಾಲೆ, ಆಸ್ಪತ್ರೆಗಳು ಹುಟ್ಟಿ ಕೊಂಡಿವೆ. ಬಡವರಿಗೆ ಅನ್ಯಾಯ ವಾಗುತ್ತಿದೆ, ಬಡವರಿಗೆ ಅನುಕೂಲ ವಾಗಬೇಕಾದರೆ ಸರ್ಕಾರಿ ಶಾಲೆ, ಆಸ್ಪತ್ರೆಗಳಿಗೆ ಹೆಚ್ಚಿನ ಆದ್ಯತೆ ನೀಡ ಬೇಕು. ಇಲ್ಲಿ ಸಿಬ್ಬಂದಿಗಳ ಕೊರತೆ ಯಿದೆ. ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕೆಂದು ಹೇಳಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ  ಎ. ಇನಾಯತ್ ಉಲ್ಲಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯಿತಿ ಸದಸ್ಯರಾದ ಅದಾಮ್ ಸಾಬ್, ಎಂ. ಚಂದ್ರಪ್ಪ, ಮುಖಂಡರಾದ ಐ.ಸಲಾಂ ಸಾಬ್, ವೆಂಕಟೇಶ್, ಲಕ್ಷ್ಮಣ, ತಾಲ್ಲೂಕು ವೈದ್ಯಾಧಿಕಾರಿ ಶಂಕರ್ ನಾಯ್ಕ್, ದತ್ತಾತ್ರೇಯ, ತಿಪ್ಪೇಸ್ವಾಮಿ, ತ್ರಿವೇಣಿ, ರೇಣುಕಾ, ಡಾ.ಜಗದೀಶ್, ನಿಖಿಲ್, ಕಾವ್ಯ, ಮಂಗಳ, ಆಡಳಿತಾಧಿಕಾರಿ ಡಾ. ರಾಘವೇಂದ್ರ, ಸಿಬ್ಬಂದಿಗಳಾದ ರಮೇಶ್, ಶಿವಕುಮಾರ್, ರೇಖಾ, ಸಿಂಧು, ಕಣುವಪ್ಪ, ಸಿದ್ದಣ್ಣ, ಮಂಜಣ್ಣ, ಶುಶ್ರೂಷಕಿಯರು, ಆಶಾ ಕಾರ್ಯಕರ್ತೆಯರು ಹಾಜರಿದ್ದರು.

error: Content is protected !!