ಕುಡಿತದ ಚಟಕ್ಕೆ ಬಲಿಯಾಗದೆ ಸಂಸಾರದ ಕಡೆ ಗಮನಹರಿಸಿ : ಬಸವಪ್ರಭು ಶ್ರೀ ಹಿತನುಡಿ

ಕುಡಿತದ ಚಟಕ್ಕೆ ಬಲಿಯಾಗದೆ ಸಂಸಾರದ  ಕಡೆ ಗಮನಹರಿಸಿ : ಬಸವಪ್ರಭು ಶ್ರೀ ಹಿತನುಡಿ

ಭರಮಸಾಗರದಲ್ಲಿ ನಡೆದ 1738ನೇ ಮದ್ಯವರ್ಜನೆ ಶಿಬಿರ

ಭರಮಸಾಗರ, ಅ.26-   ಕುಡಿತದ ಚಟ ತ್ಯಜಿಸಿ   ತಮ್ಮ  ತಂದೆ-ತಾಯಿ, ಹೆಂಡತಿ, ಮಕ್ಕಳ ಜೀವನದ ಕಡೆಗೆ ಗಮನ ಹರಿಸುವಂತೆ  ಮದ್ಯ ವ್ಯಸನಿಗಳಿಗೆ ಚಿತ್ರದುರ್ಗ ಶ್ರೀ ಮುರುಘಾ ಮಠದ ಉಸ್ತುವಾರಿ ಶ್ರೀ ಬಸವ ಪ್ರಭು ಸ್ವಾಮೀಜಿ ತಿಳಿ ಹೇಳಿದರು. 

ಸ್ಥಳಿಯ ಶ್ರೀ ಬಸವೇಶ್ವರ ಸಮು ದಾಯ ಭವನದಲ್ಲಿ ಹಮ್ಮಿಕೊಂಡಿದ್ದ  1738ನೇ  ಮದ್ಯವರ್ಜನೆ ಶಿಬಿರದ ಸಮಾರೋಪ  ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಸಂಸ್ಥೆ,    ಬ್ರಹ್ಮಾಕುಮಾರಿ ಸಂಸ್ಥೆ , ಗ್ರಾಮ ಪಂಚಾಯಿತಿ  ಸಂಯುಕ್ತ ಆಶ್ರಯದಲ್ಲಿ ನಡೆಸಲಾದ ಶಿಬಿರದಲ್ಲಿ  ಗ್ರಾಮದ ಹಿರಿಯರಾದ  ಡಿ.ವಿ.ಶರಣಪ್ಪ, ಕೋಗುಂಡೆ ಮಂಜಣ್ಣ, ಜಿ.ವಿ. ತೀರ್ಥಪ್ಪ,  ಶ್ರೀಮತಿ ರತ್ನಮ್ಮ  ಪಾಲ್ಗೊಂಡಿದ್ದರು. ಶಿಬಿರದ ಅಧ್ಯಕ್ಷ  ಎಚ್‌.ಎನ್. ಕಿರಣ್ ಉದ್ಘಾಟನೆ ಮಾಡಿದರು. 

ಶಾಸಕ ಎಂ. ಚಂದ್ರಪ್ಪ  ಮಾತ ನಾಡಿದರು. ಹಿರಿಯ ಪತ್ರಕರ್ತ ಎಚ್. ಬಿ. ಮಂಜುನಾಥ್ ಮಾತ ನಾಡಿ, ಭಾರತದಲ್ಲಿ ವರ್ಷಕ್ಕೆ ಸರಾಸರಿ ಸುಮಾರು 1.50 ಲಕ್ಷ ಮಂದಿ ರಸ್ತೆ ಅಪಘಾತದಲ್ಲಿ ಸಾಯುತ್ತಿದ್ದು, 15 ಸಾವಿರದಷ್ಟು ಜನ ಕುಡಿತದಿಂದ ಅಪಘಾತದಲ್ಲಿ ಸಾಯುತ್ತಿದ್ದಾರೆ.   ಅದರಲ್ಲಿ 30 ರಿಂದ 40 ವರ್ಷದ ಪ್ರಾಯದವರೇ ಬಲಿಯಾಗುತ್ತಿದ್ದಾರೆ. ದೃಢ ಮನಸ್ಸು ಮಾಡಿದರೆ, ಕುಡಿತದ ಚಟದಿಂದ ಹೊರ ಬರುವುದು ಕಷ್ಟವೇನಲ್ಲ ಎಂದು ಹೇಳಿದರು.

ಧರ್ಮಸ್ಥಳ ಯೋಜನಾಧಿಕಾರಿ   ನಾಗರಾಜ್ ಕುಲಾಲ್  ಮಾತನಾಡಿ, ಮದ್ಯಪಾನ ಮಾಡುವುದೆಂದರೆೆ `ಒಳಗಿನ ದೇವರನ್ನು ಹೊರಗೆ ಕಳುಹಿಸಿದಂತೆ, ಬಿಡುವುದು ಎಂದರೆ ದೇವರನ್ನು ಮನೆ ಒಳಗೆ ಕರೆ ತಂದಂತೆ’ ಎಂದು ಹೇಳಿ  ಮನಸ್ಸು ಪರಿವರ್ತನೆ ಮಾಡಿ ಹೊಸ ಜೀವನಕ್ಕೆ ಬರುವಂತೆ  ಶಿಬಿರಾರ್ಥಿಗಳಿಗೆ ತಿಳಿಸಿದರು. 

ಜಿ.ಪಂ ಮಾಜಿ ಉಪಾಧ್ಯಕ್ಷ  ಹೆಚ್. ಎನ್. ತಿಪ್ಪೇಸ್ವಾಮಿ, ರಾಜ್ಯ ಕಿಸಾನ್ ಸಂಘದ ಕಾರ್ಯದರ್ಶಿ ಶಮೀಮ್ ಪಾಷಾ , ಡಾ. ಶ್ರೀಧರ್, ಕೆ.ಜಿ ಗುರುಸಿದ್ದೇಶ್ವರ, ಪತ್ರಕರ್ತ ಬಿ.ಜೆ. ಅನಂತಪದ್ಮನಾಭರಾವ್, ಶ್ರೀಮತಿ ರತ್ನಮ್ಮ, ಯೋಗ ಶಿಕ್ಷಕ ತಿಪ್ಪೇಸ್ವಾಮಿ, ಲಾಯರ್ ಪ್ರಕಾಶ್, ಉಪನ್ಯಾಸಕಿ ಡಾ. ಎಂ.ಮಮತ,  ರೇಖಾ, ಬಿ.ಲೋಲಾಕ್ಷಮ್ಮ, ಜನಜಾಗೃತಿ ಅಧ್ಯಕ್ಷ ಬಿ.ಪಿ ಓಂಕಾರಪ್ಪ, ಜ್ಯೋತಿ ಡಾ. ಪ್ರಕಾಶ್, ಶೋಭಾ, ದಿನೇಶ್ ಪೂಜಾರಿ, ಅಶೋಕ್, ಕಲಾವತಿ, ಲೀಲಾವತಿ  ಇತರರು ಶಿಬಿರಾರ್ಥಿಗಳಿಗೆ ಉಪನ್ಯಾಸ ನೀಡಿದರು.  

ಧರ್ಮಸ್ಥಳ ಸಂಘದ ನಿರ್ದೇಶಕ ವಿವೇಕ್ ವಿ. ಪಾಯಸ್, ನಾಗರಾಜ್ ಕುಲಾಲ್, ಕುಮಾರ್, ಶ್ರೀಮತಿ ನೇತ್ರಾವತಿ ಎ .ಜಿ. ಪ್ರವೀಣ್, ಮೇಲ್ವಿಚಾರಕ ಮುಖೇಶ್, ಎಚ್. ಆರ್. ಮಂಜುಳಾ, ಶ್ರೀಮತಿ ಕರಿಬಸಮ್ಮ, ಮೀನಾಕ್ಷಮ್ಮ, ಚಂದ್ರಮ್ಮ , ಶ್ರೀ ಶಾಂತ,  ಅಶೋಕ್,       ಅಶ್ವಿನಿ, ಸುಮಾ ಅವರುಗಳು ಶಿಬಿರವನ್ನು   ನಿರ್ವಹಿಸಿದರು.  ಶ್ರೀಮತಿ ಕರಿಬಸಮ್ಮ ತಂಡದಿಂದ ಪ್ರಾರ್ಥನೆ, ಎಚ್‌.ಎನ್.  ಕಿರಣ್ ಸ್ವಾಗತಿಸಿದರು. ಪ್ರವೀಣ್   ನಿರೂಪಿಸಿದರು, ಮುಖೇಶ್ ವಂದಿಸಿದರು.

error: Content is protected !!