ರೋಟರಿಯಿಂದ ಪೊಲೀಸ್ ಇಲಾಖೆಯ ಮಹಿಳಾ ಸಿಬ್ಬಂದಿಗಳಿಗೆ ಆರೋಗ್ಯ ಶಿಬಿರ

ರೋಟರಿಯಿಂದ ಪೊಲೀಸ್ ಇಲಾಖೆಯ  ಮಹಿಳಾ ಸಿಬ್ಬಂದಿಗಳಿಗೆ ಆರೋಗ್ಯ ಶಿಬಿರ

ದಾವಣಗೆರೆ, ಅ. 8- ಜಿಲ್ಲಾ ಪೊಲೀಸ್ ಇಲಾಖೆಯ ಎಲ್ಲಾ ಮಹಿಳಾ ಸಿಬ್ಬಂದಿ ಮತ್ತು ಇತರೆ ಸಿಬ್ಬಂದಿಯ ಕುಟುಂಬದ ಮಹಿಳಾ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ರೋಟರಿ ಕ್ಲಬ್ ದಾವಣಗೆರೆ ಮತ್ತು ಸುಕ್ಷೇಮ ಆಸ್ಪತ್ರೆ ವತಿಯಿಂದ ನಡೆಸಲಾಯಿತು.

ಸುಕ್ಷೇಮ ಆಸ್ಪತ್ರೆಯಲ್ಲಿರುವ  ರೋಟರಿ ಕ್ಲಬ್ ದಾವಣಗೆರೆ  ಕ್ಯಾನ್ಸರ್ ವೆಲ್‌ನೆಸ್ ಸೆಂಟರ್ ಫಾರ್ ವುಮನ್‌ನಲ್ಲಿ ನಿನ್ನೆ ಆಯೋಜಿಸಿದ್ದ ಆರೋಗ್ಯ ಶಿಬಿರವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಶ್ರೀಮತಿ ಉಮಾ ಪ್ರಶಾಂತ್‌ ಉದ್ಘಾಟಿಸಿ ಮಾತನಾಡುತ್ತಾ, ಮಹಿಳಾ ಪೊಲೀಸ್ ಸಿಬ್ಬಂದಿಗಳು ಕುಟುಂಬ ಮತ್ತು ಕರ್ತವ್ಯದ ಜವಾಬ್ದಾರಿಗಳನ್ನು ಹೊಂದಿದ್ದಾರೆ ಮತ್ತು ಅವರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆಗೆ ಹೋಗಲು ಸಮ ಯದ ಕೊರತೆಯಿಂ ದಾಗಿ ಅವಕಾಶಗಳು ಕಡಿಮೆ  ಎಂದು ಹೇಳಿದರು.

ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ. ಶ್ರೀಶೈಲ  ಬ್ಯಾಡಗಿ ಹಾಗೂ ಕ್ಯಾನ್ಸರ್ ತಜ್ಞ ಡಾ. ಸುನಿಲ್ ಬ್ಯಾಡಗಿ, ಸ್ತ್ರೀರೋಗ ತಜ್ಞರಾದ  ಡಾ. ಶೋಭಾ ಧನಂಜಯ ಅವರೊಂದಿಗೆ ಚರ್ಚೆ ನಡೆಸಿದರು.

ಈ ಸಂದರ್ಭದಲ್ಲಿ ರೋಟರಿ ಸಂಸ್ಥೆ ದಾವಣಗೆರೆಯ ಕಾರ್ಯದರ್ಶಿ ಶ್ರೀಮತಿ ಸುನೀತಾ ಮೃತುಂಜಯ, ಇನ್ನರ್‌ವ್ಹೀಲ್ ಅಧ್ಯಕ್ಷೆ ಶ್ರೀಮತಿ ಆಶಾ ಜಗದೀಶ್ ಬೇತೂರ್, ಹಿರಿಯ ಸದಸ್ಯರಾದ ಪಿ.ಬಿ. ಪ್ರಕಾಶ್, ಆರ್.ಟಿ. ಮೃತ್ಯುಂಜಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಾದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಸರಗಿ, ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ್, ಮಲ್ಲೇಶ್ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!