ಜನಪ್ರಿಯ ಕ್ರಿಕೆಟ್ ಕ್ಲಬ್‌ನಿಂದ ಡಿಪಿಎಲ್ ಟ್ರೋಫಿ ಬಹುಮಾನ ವಿತರಣೆ ಮಾಡಿದ ಡಾ. ಪ್ರಭಾ

ಜನಪ್ರಿಯ ಕ್ರಿಕೆಟ್ ಕ್ಲಬ್‌ನಿಂದ ಡಿಪಿಎಲ್ ಟ್ರೋಫಿ  ಬಹುಮಾನ ವಿತರಣೆ ಮಾಡಿದ ಡಾ. ಪ್ರಭಾ

ದಾವಣಗೆರೆ, ಅ. 2 – ಜನಪ್ರಿಯ ಕ್ರಿಕೆಟ್ ಕ್ಲಬ್ ವತಿಯಿಂದ ಐಪಿಎಲ್ ಮಾದರಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ದಾವಣಗೆರೆ ಪ್ರೀಮಿಯರ್ ಲೀಗ್ ಟೂರ್ನ್‌ಮೆಂಟ್‌ನ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಸ್.ಎಸ್. ಕೇರ್ ಟ್ರಸ್ಟ್ ಲೈಫ್ ಟ್ರಸ್ಟಿ ಡಾ. ಪ್ರಭಾ ಮಲ್ಲಿಕಾರ್ಜುನ್ ಜಿಲ್ಲೆಯಲ್ಲಿ ಡಿಪಿಎಲ್ ಟೂರ್ನಮೆಂಟ್ ನಡೆಸುವ ಮೂಲಕ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸುವ ನೂತನ ಪ್ರಯೋಗ ಮಾಡಿದಂತಹ ಜಯ ಪ್ರಕಾಶ್ ಹಾಗೂ ತಂಡದವರಿಗೆ ಅಭಿನಂದನೆ ಸಲ್ಲಿಸಿದರು. 

ಇದೇ ಮಾದರಿಯಲ್ಲಿ ಮಹಿಳಾ ಕ್ರೀಡಾ ಪಟುಗಳಿಗೂ ಸಹ ಪ್ರೋತ್ಸಾಹಿಸಲು ಸಲಹೆ ನೀಡಿದರು.

ಜಿಲ್ಲೆಯಿಂದ ಒಟ್ಟು ಹದಿನಾಲ್ಕು ತಂಡಗಳು ಭಾಗವಹಿಸಿದ್ದ ಈ ಟೂರ್ನ್‌ಮೆಂಟ್‌ನ ಮೊದಲನೇ ಬಹುಮಾನ ಒಂದು ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಕಟ್ಟೆ ಬಾಯ್ಸ್ ಹಾಗೂ  ದ್ವಿತೀಯ ಬಹುಮಾನ ಐವತ್ತು ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ಪವರ್ ಸ್ಟ್ರೈಕರ್ ಪಡೆದರು.

ಈ ಸಂದರ್ಭದಲ್ಲಿ ದಿನೇಶ್ ಕೆ. ಶೆಟ್ಟಿ, ಶ್ರೀನಿವಾಸ್ ಶಿವಗಂಗಾ, ರಾಜು ರೆಡ್ಡಿ, ಪಾಲಿಕೆ ಸದಸ್ಯರಾದ ಜೆ.ಎನ್. ಶ್ರೀನಿವಾಸ್, ಶ್ರೀಮತಿ ಶ್ವೇತಾ ಶ್ರೀನಿವಾಸ್, ಲತಿಕಾ ದಿನೇಶ್ ಶೆಟ್ಟಿ ಹಾಗೂ ಜಯಪ್ರಕಾಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

error: Content is protected !!