ಹರಿಹರ ಜಾತ್ರೆಗೆ ಸಿದ್ಧತೆ
ಹರಿಹರ, ಮಾ. 17 – ಗ್ರಾಮದೇವತೆ ಊರಮ್ಮ ದೇವಿ ಹಬ್ಬದ ಸಮಯದಲ್ಲಿ ನಗರದ ಜನತೆಗೆ ನೀರಿನ ತೊಂದರೆ ಆಗದಂತೆ ತಡೆಯಲು ಕವಲೆತ್ತು ಬಳಿ ಇರುವ ಜಾಕ್ ವೇಲ್ ಮತ್ತು ಪಂಪ್ ಹೌಸ್ ಗೆ ನಗರಸಭೆ ಅಧ್ಯಕ್ಷರಾದ ಕವಿತಾ ಮಾರುತಿ ಬೇಡರ್ ಮತ್ತು ನಗರಸಭೆ ಹಿರಿಯ ಸದಸ್ಯ ಎ. ವಾಮನಮೂರ್ತಿ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದರು.
ಜಾತ್ರೆಗೆ ನಗರಸಭೆಯ ವತಿಯಿಂದ ಎಲ್ಲಾ ರೀತಿಯ ಸಕಲ ಸಿದ್ದತೆ ನಡೆಸಿದ್ದು, ಜಲ ಶುದ್ಧೀಕರಣ ಘಟಕಕ್ಕೆ ಭೇಟಿ ಕೊಟ್ಟು ಸ್ಥಳ ಪರಿಶೀಲನೆ ನಡೆಸಿದರು. ರಾಣೆಬೇನ್ನೂರಿನ ವಿದ್ಯುತ್ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಹಬ್ಬದ ಸಮಯದಲ್ಲಿ ವಿದ್ಯುತ್ ಪೂರೈಕೆಯ ತೊಂದರೆಗಳು ಆಗದಂತೆ ತಡೆಯಲು, ಮತ್ತು ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಲು ವಿದ್ಯುತ್ ಒದಗಿಸುವಂತೆ ಮನವಿ ಮಾಡಿಕೊಂಡರು. ನಗರದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ಶುದ್ಧೀಕರಣ ಘಟಕಗಳು ದುರಸ್ತಿಗೆ ಬಂದಿದ್ದು, ಅವುಗಳ ದುರಸ್ತಿಗೆ ಮುಂದಾಗಿದ್ದಾರೆ. ದೇವಸ್ಥಾನ ರಸ್ತೆಯ ಚೌಕಿ ಮನೆಯ ಹತ್ತಿರ ನಡೆಯುತ್ತಿರುವ ಚರಂಡಿ ಕಾಮಗಾರಿಯನ್ನು ವೀಕ್ಷಿಸಿ ಆದಷ್ಟು ಬೇಗ ಕಾಮಗಾರಿಯನ್ನು ಮುಗಿಸುವಂತೆ ಗುತ್ತಿಗೆದಾರರಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭೆಯ ಹಿರಿಯ ಸದಸ್ಯ ಎ. ವಾಮನಮೂರ್ತಿ, ವಕೀಲ ಮಾರುತಿ ಬೇಡರ್ ಹಾಗೂ ಇತರರು ಹಾಜರಿದ್ದರು.