ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಂಘದ ಅಧ್ಯಕ್ಷ ತ್ಯಾವಣಗಿ ವೀರಭದ್ರಸ್ವಾಮಿ ಸಂತಸ
ದಾವಣಗೆರೆ, ಅ. 2- ನಗರದ ಶ್ರೀ ವೀರಮಾಹೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 27ನೇ ವರ್ಷದ ವಾರ್ಷಿಕ ಸರ್ವ ಸದಸ್ಯರ ಮಹಾಸಭೆಯು ಶ್ರೀಮತಿ ಮೋತಿ ಚನ್ನಬಸಮ್ಮ ವೀರಪ್ಪ ಕಲ್ಯಾಣ ಮಂಟಪದಲ್ಲಿ ಕಳೆದ ವಾರ ನಡೆಯಿತು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಸ್.ಎಂ. ವೀರಭದ್ರಸ್ವಾಮಿ ಮತ್ತು ಸಂಘದ ನಿರ್ದೇಶಕ ಮಂಡಳಿಯವರು ದೀಪ ಬೆಳಗಿಸುವ ಮೂಲಕ ಸಭೆಯನ್ನು ಉದ್ಘಾಟಿಸಿದರು.
ಸಂಘದ ಅಧ್ಯಕ್ಷ ವೀರಭದ್ರಸ್ವಾಮಿ ಮಾತ ನಾಡಿ, ಸದಸ್ಯ ಗ್ರಾಹಕರಿಗೆ ಅನುಕೂಲವಾಗಲು ಸದಸ್ಯರ ಮರಣೋತ್ತರ ನಿಧಿಯನ್ನು 300 ರೂ.ಗಳನ್ನು ನೀಡುತ್ತಿದ್ದೇವೆ. ಸಹಕಾರಿ ಸಂಘವು 31-3-2023ಕ್ಕೆ ಷೇರು ಬಂಡವಾಳ 46.31 ಲಕ್ಷ ಬಂಡವಾಳವನ್ನು ಹೊಂದಿದ್ದು, ನಿಧಿಗಳು 92.37 ಲಕ್ಷ ಇದ್ದು ಠೇವಣಿ 4.46 ಕೋಟಿ ಸಂಗ್ರಹಿಸಲಾಗಿದೆ. 3.67 ಕೋಟಿ ಸಾಲ ಹೊಂದಿದ್ದು, ದುಡಿಯುವ ಬಂಡವಾಳ 6.46 ಕೋಟಿ ಇದ್ದು ಸಂಘವು 2022-23ನೇ ಸಾಲಿಗೆ 15.33 ಲಕ್ಷ ನಿವ್ವಳ ಲಾಭ ಗಳಿಸಿದೆ. ಪ್ರಸ್ತುತ ಸಾಲಿನ ಸುಸ್ತಿ ಬಾಕಿಗೆ 4.50 ಲಕ್ಷ ರೂ.ಗಳ ಪ್ರಾವಿಜನ್ ಮಾಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ 26ನೇ ವರ್ಷದ ವಾರ್ಷಿಕ ಮಹಾಸಭೆಯ ನಡವಳಿಕೆಗಳನ್ನು ಸಂಘದ ಕಾರ್ಯದರ್ಶಿ ಐನಳ್ಳಿ ಮಠದ ನಾಗರಾಜಯ್ಯ ಓದಿದರು. ನಿರ್ದೇಶಕ ಮಂಡಳಿಯವರು ಸಲ್ಲಿಸಿದ ಮತ್ತು ಲಾಭ-ನಷ್ಟ ಆಸ್ತಿ ಜವಾಬ್ದಾರಿ ತಃಖ್ತೆಗಳನ್ನು ನಿರ್ದೇಶಕ ಬಿ.ಎಂ. ರವಿ ಓದಿದರು. ಲಾಭ ವಿಲೇವಾರಿಯನ್ನು ಉಪಾಧ್ಯಕ್ಷ ಸಿ. ಪಂಚಾಕ್ಷರಯ್ಯ ಓದಿ ಅನುಮೋದನೆ ಪಡೆದರು.
ಮುಂಗಡ ಪತ್ರವನ್ನು ನಿರ್ದೇಶಕ ಎಂ.ಎಂ. ವೃಷಭೇಂದ್ರಯ್ಯ ಸ್ವಾಮಿ ಓದಿದರು ಮತ್ತು ಪ್ರಗತಿ ಪಕ್ಷಿ ನೋಟವನ್ನು ಶ್ರೀಮತಿ ಸುಮನ್ ಕಟಗಿಹಳ್ಳಿಮಠ ಓದಿದರು. ಶ್ರೀಮತಿ ಎಸ್. ರೇಖಾ ವಂದಿಸಿದರು.
ನಿರ್ದೇಶಕರುಗಳಾದ ಎಲ್.ಎಂ.ಆರ್. ಬಸವರಾಜಯ್ಯ, ಆರ್.ಎಂ. ವೀರಯ್ಯ, ಎನ್.ಎಂ. ವೀರೇಂದ್ರ, ಎಂ. ಚನ್ನಬಸವ ಶರ್ಮ, ಶ್ರೀಮತಿ ತಾರಕೇಶ್ವರಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.