ಉಪಾಧ್ಯಕ್ಷರಾಗಿ ಜಗದೀಶ್ ಕೂಲಂಬಿ
ದಾವಣಗೆರೆ, ಮಾ. 17- ಸ್ಥಳೀಯ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಮುಂದಿನ 5 ವರ್ಷಗಳ ಅವಧಿಗೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ಕಳೆದ ವಾರ ನಡೆದ ಚುನಾವಣೆಯಲ್ಲಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯೂ ಅವಿರೋಧವಾಗಿ ಆಗಿರುತ್ತದೆ ಎಂದು ಚುನಾವಣಾಧಿಕಾರಿ ಶ್ರೀಮತಿ ಭಾಗ್ಯಶ್ರೀ ಎಸ್. ಪಾಟೀಲ್ ತಿಳಿಸಿದ್ದಾರೆ.
ಸಂಘದ ಅಧ್ಯಕ್ಷರಾಗಿ ನಿವೃತ್ತ ಶಿಕ್ಷಕ ಎಸ್.ಹೆಚ್. ಚಂದ್ರಪ್ಪ, ಉಪಾಧ್ಯಕ್ಷರಾಗಿ ಪ್ರೌಢಶಾಲಾ ಶಿಕ್ಷಕ ಸಿ.ಜಿ. ಜಗದೀಶ್ ಕೂಲಂಬಿ ಆಯ್ಕೆಯಾಗಿರುತ್ತಾರೆ.
ಜಿ.ಯು. ಯೋಗರಾಜ್ (ಆರೋಗ್ಯ ಇಲಾಖೆ), ಕೆ.ಬಿ. ಮುರುಗೇಶ (ಪ್ರಾ.ಶಿಕ್ಷಣ ಇಲಾಖೆ), ಬಿ. ಪಾಲಾಕ್ಷಿ (ಪ.ಪೂ. ಶಿಕ್ಷಣ ಇಲಾಖೆ), ಕೆ.ಎಸ್. ದ್ರಾಕ್ಷಾಯಿಣಿ (ಜಿಲ್ಲಾ ಖಜಾನೆ), ಎಂ. ಮಲ್ಲಮ್ಮ (ಪ್ರಾ. ಶಿಕ್ಷಣ ಇಲಾಖೆ), ಸಿ. ತಿಪ್ಪೇಸ್ವಾಮಿ (ತಾಂತ್ರಿಕ ಶಿಕ್ಷಣ ಇಲಾಖೆ), ಕೆಂಪಣ್ಣ ಎಸ್. ಕಾಟೆ (ಪ್ರೌ. ಶಿಕ್ಷಣ ಇಲಾಖೆ), ಮಾಗಡಿ ಪ್ರಕಾಶ್ (ಆರೋಗ್ಯ ಇಲಾಖೆ), ಇ. ಸತೀಶ್ (ಪ್ರಾ. ಶಿಕ್ಷಣ ಇಲಾಖೆ), ಹೆಚ್.ಕೆ. ಯಶವಂತಕುಮಾರ್ (ತೋಟಗಾರಿಕೆ ಇಲಾಖೆ) ಅವರುಗಳು ನಿರ್ದೇಶಕರುಗಳಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಸಂಸ್ಥಾಪಕ ಅಧ್ಯಕ್ಷ ಹೆಚ್.ಎಂ. ರೇವಣ ಸಿದ್ದಪ್ಪ, ನಿಕಟಪೂರ್ವ ಅಧ್ಯಕ್ಷ ಎಂ.ಡಿ.ನೀಲಗಿರಿಯಪ್ಪ, ನಿಕಟ ಪೂರ್ವ ಉಪಾಧ್ಯಕ್ಷ ಎನ್.ಡಿ. ಮಂಜು ಮತ್ತು ಇತರರು ಉಪಸ್ಥಿತರಿದ್ದರು.