41 ಪಾಸಿಟಿವ್, 2 ಸಾವು

41 ಪಾಸಿಟಿವ್, 2 ಸಾವು - Janathavani

ದಾವಣಗೆರೆ, ಆ. 3 – ಜಿಲ್ಲೆಯಲ್ಲಿ ಸೋಮವಾರ 41 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇದೇ ದಿನ 82 ಜನ ಗುಣವಾಗಿ ಬಿಡುಗಡೆಯಾಗಿದ್ದಾರೆ.

ಜಿಲ್ಲೆಯಲ್ಲೀಗ ಸಕ್ರಿಯ ಸೋಂಕಿತರ ಸಂಖ್ಯೆ 807ಕ್ಕೆ ಇಳಿಕೆಯಾಗಿದೆ. ಇದುವರೆಗೂ 2,425 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 1,561 ಜನ ಬಿಡುಗಡೆಯಾಗಿದ್ದಾರೆ. 57 ಜನರು ಸಾವನ್ನಪ್ಪಿದ್ದಾರೆ.

 ಸೋಮವಾರದಂದು ದಾವಣಗೆರೆ ತಾಲ್ಲೂಕಿನ 18, ಹರಿಹರದ ಐವರು, ಚನ್ನಗಿರಿಯ ನಾಲ್ವರು ಹಾಗೂ ಹೊನ್ನಾಳಿಯ 14 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇದೇ ದಿನದಂದು ದಾವಣಗೆರೆ ತಾಲ್ಲೂಕಿನ 48 ಜನ ಗುಣವಾಗಿ ಬಿಡುಗಡೆಯಾಗಿದ್ದಾರೆ. ಹರಿಹರದ 9, ಜಗಳೂರಿನ ಆರು, ಚನ್ನಗಿರಿಯ 13, ಹೊನ್ನಾಳಿಯ ಐದು ಹಾಗೂ ಹೊರ ಜಿಲ್ಲೆಯ ಒಬ್ಬರು ಸಾವನ್ನಪ್ಪಿದ್ದಾರೆ.

ದಾವಣಗೆರೆಯ ಜೆ.ಹೆಚ್. ಪಟೇಲ್ ಬಡಾವಣೆಯ 79 ವರ್ಷದ ವೃದ್ಧರೊಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ. ಅವರು ಹೃದಯ ರೋಗದಿಂದ ಬಳಲುತ್ತಿದ್ದರು. ಚನ್ನಗಿರಿ ತಾಲ್ಲೂಕಿನ ನಲ್ಲೂರಿನ 50ರ ಪುರುಷರೊಬ್ಬರು ಸಾವನ್ನಪ್ಪಿದ್ದು ಅವರು ಸಕ್ಕರೆ ಕಾಯಿಲೆ ಹಾಗೂ ರಕ್ತದೊತ್ತಡದಿಂದ ಬಳಲುತ್ತಿದ್ದರು. ದಾವಣಗೆರೆ ನಗರದ ಭಾರತ್ ಕಾಲೋನಿಯ 42 ವರ್ಷದ ಮಹಿಳೆ, ಪಿ.ಜೆ. ಬಡಾವಣೆಯ 25ರ ಮಹಿಳೆ,  ಚಿಕ್ಕಮ್ಮಣ್ಣಿ ದೇವರಾಜ ಅರಸ್ ಬಡಾವಣೆಯ 27ರ ಮಹಿಳೆ, ಬಸವೇಶ್ವರ ನಗರದ 65ರ ಪುರುಷರಲ್ಲಿ ಸೋಂಕು ಕಾಣಿಸಿಕೊಂಡಿದೆ. ಪಿ.ಜೆ. ಬಡಾವಣೆಯ 75ರ ವೃದ್ಧ, ಎಸ್.ಎಸ್. ಬಡಾವಣೆಯ 40ರ ಮಹಿಳೆ, ದೇವರಾಜ ನಗರದ 19ರ ಯುವತಿ, ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರುವ 27ರ ಮಹಿಳೆಯಲ್ಲಿ ಸೋಂಕು ಕಾಣಿಸಿಕೊಂಡಿದೆ

ದಾವಣಗೆರೆ ತಾಲ್ಲೂಕು ಗಂಗನಕಟ್ಟೆಯ 4ರ ಬಾಲಕಿ, ಓಬಣ್ಣನಹಳ್ಳಿಯ 68ರ ಪುರುಷ, ದೊಡ್ಡ ಓಬಜ್ಜಿಹಳ್ಳಿಯ 70ರ ವೃದ್ಧರಲ್ಲಿ ಸೋಂಕು ಕಂಡು ಬಂದಿದೆ.

ಚನ್ನಗಿರಿಯ ಎ.ಕೆ. ಕಾಲೋನಿಯ 37ರ ಪುರುಷ, 9ರ ಬಾಲಕ, ಕೆ.ಜಿ.ಎನ್. ನಗರದ 33ರ ಮಹಿಳೆ, 37ರ ಪುರುಷರಲ್ಲಿ ಸೋಂಕಿರುವುದು ಪತ್ತೆಯಾಗಿದೆ

ಹೊನ್ನಾಳಿಯ ಸುರಹೊನ್ನೆಯ 5ರ ಬಾಲಕ, 24, 27, 37, 55, 62 ಹಾಗೂ 48ರ ಮಹಿಳೆಯರು, 21, 23 ಹಾಗೂ 60ರ ಪುರುಷರಲ್ಲಿ ಸೋಂಕಿರುವುದು ಕಂಡು ಬಂದಿದೆ.

ಹರಿಹರದ ಜೆ.ಸಿ. ಬಡಾವಣೆಯ 75ರ ವೃದ್ಧೆ, ಎ.ಕೆ. ಕಾಲೋನಿಯ 63ರ ಪುರುಷ, ಕಾಳಿದಾಸ ನಗರದ 26ರ ಮಹಿಳೆ, ವಿದ್ಯಾನಗರದ 45ರ ಪುರುಷ, ಮಜ್ಜಿಗಿ ಬಡಾ ವಣೆಯ 57ರ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ. 

ಬಿಡುಗಡೆಯಾದವರು:  ದಾವಣಗೆರೆ ರಾಮನಗರದ ಮುಖ್ಯ ರಸ್ತೆಯ  47ರ ಮಹಿಳೆ, ಜಾಲಿನಗರ ಮುಖ್ಯ ರಸ್ತೆಯ 71 ವರ್ಷದ ಮಹಿಳೆ, ಎಂ.ಸಿ.ಸಿ. ಎ ಬ್ಲಾಕ್ 37 ವರ್ಷದ ಪುರುಷ,  ಜಾಲಿನಗರದ 46ರ ಪುರುಷ, ಕೆ.ಬಿ. ಬಡಾವಣೆ ಕಾವೇರಮ್ಮ ಶಾಲೆ ಹಿಂಭಾಗದ 45ರ ಮಹಿಳೆ, ರೈತರ ಬೀದಿಯ 48ರ ಮಹಿಳೆ, ಭಗತ್ ಸಿಂಗ್ ನಗರ 5ನೇ ಕ್ರಾಸ್‌ನ 47ರ ಮಹಿಳೆ, ಮಲ್ಲಿಕಾರ್ಜುನ ಕಲ್ಯಾಣ ಮಂಟಪದ ಹಿಂಭಾಗದ 18ರ ಯುವತಿ, ಬಸವರಾಜ ಪೇಟೆಯ 31ರ ಮಹಿಳೆ, ಮಹಾಲಕ್ಷ್ಮಿ ಬಡಾವಣೆ ಕಾವೇರಿ ಅಪಾರ್ಟ್ ಮೆಂಟ್ ಹತ್ತಿರದ 31ರ ಪುರುಷ, ತರಳಬಾಳು ಬಡಾವಣೆಯ 47ರ ಪುರುಷ, ಪೊಲೀಸ್ ಕ್ವಾಟ್ರಸ್‌ನ 24ರ ಯುವಕ, ಶೇಖರಪ್ಪ ನಗರ 2ನೇ ಕ್ರಾಸ್‌ನ 22 ವರ್ಷದ ಯುವಕ, ಕೆಎಸ್ಸಾರ್ಟಿಸಿ ಚಾಲಕ 36ರ ಪುರುಷ, ಭಾರತ್ ಕಾಲೋನಿ ಯುಪಿಹೆಚ್ ಸ್ಟಾಫ್ ನರ್ಸ್ 45ರ ಮಹಿಳೆ, ಜಯನಗರ ಬ್ಲಾಕ್ ನಿಟುವಳ್ಳಿಯ 55ರ ಪುರುಷ, ಆವರೆಗೆರೆಯ 78ರ ಮಹಿಳೆ.

ಕೆಟಿಜೆ ನಗರ 3ನೇ ಮೇನ್, 6ನೇ ಕ್ರಾಸ್ 52ರ ಮಹಿಳೆ, ಬೇತೂರು ರಸ್ತೆಯ 46ರ ಮಹಿಳೆ, ವಿನೋಬನಗರ 65ರ ಪುರುಷ, ಜಾಲಿ ನಗರ 2ನೇ ಮೇನ್, 2ನೇ ಕ್ರಾಸ್ 56ರ ಪುರುಷ, ಎಂ.ಸಿ.ಸಿ. ಎ ಬ್ಲಾಕ್ 29ರ ಪುರುಷ, ಎಂ.ಸಿ.ಸಿ. ಎ ಬ್ಲಾಕ್ 4ನೇ ಮೇನ್, 29ರ ಮಹಿಳೆ, ಯಲ್ಲಮ್ಮ ನಗರ 3ನೇ ಮೇನ್, 12ನೇ ಕ್ರಾಸ್ 27ರ ಮಹಿಳೆ, ಹೌಸ್ ಸರ್ಜನ್‌ 22ರ ಪುರುಷ, ಆಂಜನೇಯ ಬಡಾವಣೆ 18ನೇ ಕ್ರಾಸ್ 33ರ ಪುರುಷ,  ವಿಜಯನಗರ 2ನೇ ಮೇನ್, 3ನೇ ಕ್ರಾಸ್ 45ರ ಮಹಿಳೆ, ವಿನೋಬನಗರ 4ನೇ ಮೇನ್, 1ನೇ ಕ್ರಾಸ್ 52ರ ಮಹಿಳೆ.

 ವಿನೋಬನಗರ 4ನೇ ಮೇನ್, 1ನೇ ಕ್ರಾಸ್ 62ರ ಪುರುಷ, ಶ್ರೀನಿವಾಸ ನಗರ 45ರ ಮಹಿಳೆ,  23ರ ಯುವಕ, ಮುಸ್ತಾಫಾ ನಗರ 2ನೇ ಮೇನ್, 4ನೇ ಕ್ರಾಸ್‌ನ 55ರ ಮಹಿಳೆ, ಭಗತ್ ಸಿಂಗ್ ನಗರ ಅಂಜುಮ್ ಶಾಲೆಯ ಹತ್ತಿರದ 62ರ ಪುರುಷ,  ಕೆಟಿಜೆ ನಗರ 8ನೇ ಮೇನ್, 3ನೇ ಕ್ರಾಸ್ 65ರ ಮಹಿಳೆ, ಬಂಬೂ ಬಜಾರ್ ಜನತಾ ಸಾಮಿಲ್ ಹತ್ತಿರದ 53ರ ಪುರುಷ, ರಾಜೇಂದ್ರ ಬಡಾವಣೆ 68ರ ಪುರುಷ, ದೇವಾಂಗ ಪೇಟೆಯ 60ರ ಪುರುಷ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಹಿಂಭಾಗದ ಗಣೇಶ ಲೇ ಔಟ್  ನ 54ರ ಪುರುಷ, ಸಿಸಿಹೆಚ್ 37ರ ಮಹಿಳೆ, 47ರ ಮಹಿಳೆ, ವಿನೋಬನಗರ 3ನೇ ಮೇನ್, 9ನೇ ಕ್ರಾಸ್ 21ರ ಯುವತಿ, ನಿಜಲಿಂಗಪ್ಪ ಬಡಾವಣೆ 32ರ ಪುರುಷ, ಎಸ್.ವಿ.ಎಸ್. ನಗರ 2ನೇ ಮೇನ್, 4ನೇ ಕ್ರಾಸ್ 30ರ ಪುರುಷ.

ಹರಿಹರದ ಅಮರಾವತಿ ಬ್ರಿಡ್ಜ್ ಬಳಿಯ 26ರ ಪುರುಷ, ಮಲೇಬೆನ್ನೂರಿನ 62ರ ಪುರುಷ. ಬಸವೇಶ್ವರ ಬಡಾವಣೆ ಮಲೇಬೆನ್ನೂರಿನ 45ರ ಪುರುಷ, 20ರ ಯುವತಿ, ಇಂದಿರಾನಗರ 3ನೇ ಕ್ರಾಸ್‌ನ 26ರ ಮಹಿಳೆ, ಜೋಗಪ್ಪರ ಬೀದಿಯ 27ರ ಯುವಕ.

ನ್ಯಾಮತಿ ಸರ್ಕಾರಿ ಆಸ್ಪತ್ರೆಯ ಹಿಂಭಾಗದ ವಾಸಿ 19ರ  ಯುವತಿ, 24ರ ಮಹಿಳೆ, ಎಸ್.ಬಿ.ಐ. ಬ್ಯಾಂಕ್‌ನ 28ರ ಪುರುಷ, ನ್ಯಾಮತಿ ಜಯನಗರದ 56ರ ಪುರುಷ, ಕೆಚ್ಚೇನಹಳ್ಳಿ ಬಸವಣ್ಣನ ದೇವಸ್ಥಾನದ ಬಳಿಯ 46ರ ಪುರುಷ. 

ಚನ್ನಗಿರಿ ತಾಲ್ಲೂಕು ನಲ್ಲೂರಿನ 11ರ ಬಾಲಕ, ಬಸವೇಶ್ವರ ನಗರದ 48ರ ಪುರುಷ, ಪೊಲೀಸ್ ಕ್ವಾಟ್ರಸ್ ಚನ್ನಗಿರಿಯ 35ರ ಪುರುಷ, ನಲ್ಲೂರಿನ 40ರ ಮಹಿಳೆ, ಕೊರಟಿಗೆರೆಯ 31ರ ಪುರುಷ, ಲಿಂಗದಹಳ್ಳಿಯ 37ರ ಪುರುಷ, ಕರೆಕಟ್ಟೆಯ 48ರ ಮಹಿಳೆ, 40ರ ಪುರುಷ, 35ರ ಪುರುಷ, 40ರ ಪುರುಷ, ಕೊರಟಿಕೆರೆ ಯ 26ರ ಯುವಕ, ಕರೆಕಟ್ಟೆಯ 30ರ ಮಹಿಳೆ, 50ರ ಪುರುಷ.

ಜಗಳೂರು ತಾಲ್ಲೂಕು ದಿದ್ದಿಗಿ ಗ್ರಾಮೀಣ ಪಬ್ಲಿಕ್ ಶಾಲೆಯ 50ರ ಪುರುಷ, ಹಳ್ಳಿಮಲ್ಲಾಪುರದ 28ರ ಯುವತಿ, ಹೊರಕೆರೆ ಈಶ್ವರ ದೇವಸ್ಥಾನದ ಹಿಂಭಾಗದ 45ರ ಮಹಿಳೆ, ಜಗಳೂರು ಪಾಪ ಲಿಂಗೇಶ್ವರ ಬಡಾವಣೆಯ 58ರ ಮಹಿಳೆ, ಬಿಳಿಚೋಡು ಎ.ಕೆ. ಕಾಲೋನಿ 25ರ ಮಹಿಳೆ ಹಾಗೂ 10ರ ಬಾಲಕ ಇವರು ಸೋಂಕು ಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ.

ಮಲೇಬೆನ್ನೂರಿನಲ್ಲಿ 3 ಪಾಸಿಟಿವ್ : ಪಟ್ಟಣದಲ್ಲಿ ಸೋಮವಾರ ಮತ್ತೆ 3 ಕೊರೊನಾ ಪಾಸಿಟಿವ್ ಬಂದಿದ್ದು, ಸೋಂಕಿತರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಇಲ್ಲಿನ 1ನೇ ವಾರ್ಡಿನ ದರ್ಗಾ ರಸ್ತೆಯಲ್ಲಿ ಈಗಾಗಲೇ ಕಂಟೈನ್‌ಮೆಂಟ್‌ ಝೋನ್ ಮಾಡಲಾಗಿರುವ ಪ್ರದೇಶದಲ್ಲಿ ಇಬ್ಬರಿಗೆ ಸೋಂಕು ದೃಢಪಟ್ಟಿದೆ. ಎ.ಕೆ.ಕಾಲೋನಿಯಲ್ಲಿ 25 ವರ್ಷದ ಮಹಿಳೆಗೆ ಸೋಂಕು ಕಾಣಿಸಿಕೊಂಡಿದೆ. ಈಗ ಸಮುದಾಯ ಆರೋಗ್ಯ ಕೇಂದ್ರದಲ್ಲೇ ರಾಪಿಡ್ ಆಂಟಿಜೆನ್ ಟೆಸ್ಟ್‌ ನಡೆಯುತ್ತಿರುವುದರಿಂದ ವರದಿಗಳು ಬೇಗ ಬರುತ್ತಿವೆ. ಪ್ರತಿನಿತ್ಯ ಕನಿಷ್ಠ 50 ಟೆಸ್ಟ್‌ಗಳನ್ನು ಮಾಡಲಾಗುತ್ತಿದೆ ಎಂದು ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ ತಿಳಿಸಿದ್ದಾರೆ.

error: Content is protected !!